ಮೊದಲ ಬಾರಿಗೆ ಎಡವಿದ ರಶ್ಮಿಕಾ ಮಂದಣ್ಣ!

ಕಿರಿಕ್ ಪಾರ್ಟಿಯಿಂದ ಹಿಡಿದು ಇಲ್ಲಿಯವರೆಗೂ ರಶ್ಮಿಕಾ ಮಂದಣ್ಣ ಬೇರೆ ಬೇರೆ ಭಾಷೆಗಳಲ್ಲಿ ನಟಿಸಿದ್ದರೂ ಪ್ರತಿಯೊಂದು ಸಿನಿಮಾವೂ ಹಿಟ್ ಆಗಿ ಬಾಲಿವುಡ್ ನಲ್ಲೂ ಅವಕಾಶ ಗಿಟ್ಟಿಸಿಕೊಂಡಿದ್ದರು.

ಆದರೆ ಈಗ ಮೊದಲ ಬಾರಿಗೆ ರಶ್ಮಿಕಾ ಸೋಲಿನ ರುಚಿ ಕಂಡಿದ್ದಾರೆ. ಅವರು ನಟಿಸಿದ್ದ ಅಡಾವಲ್ಲು ಮೀಕು ಜೊಹಾರ್ಲು ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮುಗ್ಗರಿಸಿದೆ. ಈ ಮೂಲಕ ಇದುವರೆಗೆ ಕೋಟಿ ಕೋಟಿ ಬಾಚಿಕೊಂಡಿದ್ದ ರಶ್ಮಿಕಾ ಮೊದಲ ಬಾರಿಗೆ ಮುಗ್ಗರಿಸಿದ್ದಾರೆ.

ರಶ್ಮಿಕಾ ಜೊತೆಗೆ ಶಾರ್ವಾನಂದ್, ಖುಷ್ಬೂ, ರಾಧಿಕಾಶರತ್ ಕುಮಾರ್ ಸೇರಿದಂತೆ ಬಹುತಾರಾಗಣವಿದ್ದ ಸಿನಿಮಾ ಇದಾಗಿದ್ದು, ಮಾರ್ಚ್ 4 ರಂದು ಸಿನಿಮಾ ರಿಲೀಸ್ ಆಗಿದೆ. ಆದರೆ ಇದುವರೆಗೆ ಹೇಳಿಕೊಳ್ಳುವಂತಹ ಹಿಟ್ ಆಗಿಲ್ಲ.

Leave A Reply

Your email address will not be published.