ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ನ್ನು ಹಿಂದಿಕ್ಕಿದ 6 ಲಕ್ಷ ಫಾಲೋವರ್ಸ್ ಹೊಂದಿರುವ ಯೂಟ್ಯೂಬರ್!!! ಈತ ವಿಶ್ವದ ನಂಬರ್ ವನ್ ಶ್ರೀಮಂತನಾದದ್ದು ಹೇಗೆ ?

ಲಂಡನ್ : ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿರುವುದು ಟೆಸ್ಲಾ ಎಲೆಕ್ಟ್ರಿಕ್ ಕಾರು ಕಂಪನಿಯ ಸಿಇಒ ಎಲಾನ್ ಮಸ್ಕ್ ಅವರಲ್ಲಿದೆ. ಈ ಗುರಿಯನ್ನು ಅವರು ಅವಿರತ ಪರಿಶ್ರಮ, ಸಾಧ‌ನೆ ಮೂಲಕ ಅವರು ಈ ಸ್ಥಾನವನ್ನು ಇಂದು ಅಲಂಕರಿಸಿಕೊಂಡಿದ್ದಾರೆ. ಆದರೆ ಈ ನಂಬರ್ 1 ಸ್ಥಾನವನ್ನು ಯೂಟ್ಯೂಬರ್ ಒಬ್ಬ ಕಸಿದುಕೊಂಡ ಘಟನೆ ಯುಕೆಯಲ್ಲಿ ನಡೆದಿದೆ.

ಲಂಡನ್ ಮೂಲದ ಮ್ಯಾಕ್ಸ್ ಫೋಶ್ ಯೂಟ್ಯೂಬರ್ ಈಗ ಭಾರೀ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾನೆ. ಈತ ದಿಢೀರಾಗಿ ವಿಶ್ವದ ನಂಬರ್ ವನ್ ಶ್ರೀಮಂತರ ಸ್ಥಾನ ಪಡೆದುಕೊಂಡಿದ್ದಾನೆ. ಆದರೆ ಈ ಸ್ಥಾನ ಆತನ ಬಳಿ ಇದ್ದದ್ದು ಬರೀ 7 ನಿಮಿಷ ಮಾತ್ರ.

6 ಲಕ್ಷ ಫಾಲೋವರ್ಸ್ ಹೊಂದಿರುವ ಮ್ಯಾಕ್ಸ್, ಎಲಾನ್ ಮಸ್ಕ್ ಆದಾಯಕ್ಕಿಂತ ಡಬಲ್ ಆದಾಯದ ಮೂಲಕ ಮೊದಲ ಸ್ಥಾನ ಪಡೆದುಕೊಂಡಿದ್ದ. ತಾನು ಶ್ರೀಮಂತ ವ್ಯಕ್ತಿಯಾಗಿದ್ದು ಹೇಗೆ ? ಎಲಾನ್ ಮಸ್ಕ್ ಹಿಂದಿಕ್ಕಿದ್ದು ಹೇಗೆ ಅನ್ನೋದನ್ನು ತನ್ನ ಯೂಟ್ಯೂಬ್ ಚಾನೆಲ್ ಮೂಲಕ ಹೇಳಿದ್ದಾನೆ.

ಅನ್ ಲಿಮಿಟೆಡ್ ಮನಿ ಲಿಮಿಟೆಡ್ ಕಂಪನಿಯನ್ನು ರಚಿಸಿ, ಕಂಪನಿ 10 ಬಿಲಿಯನ್ ಷೇರುಗಳನ್ನು ಪ್ರತಿ ಷೇರಿಗೆ 140 ಪೌಂಡು ರೀತಿಯಲ್ಲಿ ಮಾರಾಟ ಮಾಡಲಾಗಿದೆ. ಇದರಿಂದ 500 ಶತಕೋಟಿ ಪೌಂಡ್ ಆದಾಯ ಬಂದಿದೆ. ಇದು ಎಲನ್ ಮಸ್ಕ್ ಆದಾಯಕ್ಕಿಂತ ಹೆಚ್ಚು. ಆದರೆ ಷೇರು ನಿಯಮದ ಪ್ರಕಾರ ಆದಾಯ ಚಟುವಟಿಕೆಯ ಕೊರತೆ ಹಾಗೂ ಮೋಸದ ಚಟುವಟಿಕೆಯಿಂದ ಅನ್ ಲಿಮಿಟೆಡ್ ಮನಿ ಲಿಮಿಟೆಡ್ ಕಂಪನಿಯನ್ನು ತಕ್ಷಣವೇ ವಿಸರ್ಜಿಸಲು ಸೂಚಿಸಲಾಗಿದೆ‌.

ನಂತರ ಈ ಕಂಪನಿಯನ್ನು ಡಿಸಾಲ್ವ್ ಮಾಡಲಾಗಿದೆ. ಈ ಮೂಲಕ 7 ನಿಮಿಷಗಳವರೆಗೆ 500 ಬಿಲಿಯನ್ ಪೌಂಡ್ ಆದಾಯ ಗಳಿಸಿದ ಮ್ಯಾಕ್ಸ್ ನ ನೆಟ್ ವರ್ತ್ ಮತ್ತೆ ಕೆಳಗೆ ಇಳಿಯಿತು. ಈ ಬಗ್ಗೆ ಆತ ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಹಾಕಿದ್ದಾನೆ.

Leave A Reply

Your email address will not be published.