ತನ್ನ ಪಾಡಿಗೆ ಈಜುತ್ತಿದ್ದ ವ್ಯಕ್ತಿಯನ್ನು ಗಬಕ್ಕನೆ ನುಂಗಿದ ಶಾರ್ಕ್ ಮೀನು !!| ಮೈ ಜುಮ್ ಎನ್ನುವ ವೀಡಿಯೋ ಫುಲ್ ವೈರಲ್

ಜಗತ್ತು ಎಷ್ಟು ವಿಚಿತ್ರ ಅಂದ್ರೆ ಯಾವೊಬ್ಬ ವ್ಯಕ್ತಿಗೂ ತಾನು ಎಷ್ಟು ದಿನಗಳ ಕಾಲ ಜೀವಿಸಬಲ್ಲೆ ಎಂಬ ಸುಳಿವೇ ಇರುವುದಿಲ್ಲ.ಅಂತ್ಯ-ಆರಂಭ ಎರಡು ದೇವರ ಕೈಯಲ್ಲಿದೆ ಎನ್ನುತ್ತಾರೆ ಹಿರಿಯರು. ಆದ್ರೆ ಇಲ್ಲೊಂದು ಕಡೆ ವ್ಯಕ್ತಿಯೋರ್ವನ ಜೀವ ಮೀನಿನ ಕೈಯಲ್ಲಿತ್ತು. ಹೌದು. ದಿನದಿಂದ ದಿನಕ್ಕೆ ವಿಚಿತ್ರ ಘಟನೆಗಳು ಸಂಭವಿಸುತ್ತಲೇ ಇದೆ. ಸಾವಿರಾರು ವೈರಲ್ ವಿಡಿಯೋಗಳ ಪೈಕಿ ಈ ವಿಡಿಯೋ ಮೈ ಜುಮ್ ಅನಿಸುವಂತಿದೆ.

ಇತ್ತೀಚೆಗೆ ವೈರಲ್ ಆದ ಒಂದು ವಿಡಿಯೋದಲ್ಲಿ ವೈಟ್​ ಶಾರ್ಕ್ ಈಜುತ್ತಿದ್ದ ವ್ಯಕ್ತಿಯನ್ನು ತಿನ್ನುವುದು ಸೆರೆಯಾಗಿದೆ. 13 ಅಡಿಯ ದೊಡ್ಡ ಬಿಳಿ ಶಾರ್ಕ್ ಈಜುತ್ತಿದ್ದ ವ್ಯಕ್ತಿಯನ್ನು ಈಗಷ್ಟೇ ತಿಂದಿತು ಎಂದು ವಿಡಿಯೋ ಮಾಡುತ್ತಾ ಕೂಗಿದಾಗ ಈಜುಗಾರ ಸಾವನ್ನಪ್ಪಿದ ಕ್ಷಣ ಇದು.ಈ ವ್ಯಕ್ತಿಯೂ ಅನಿರೀಕ್ಷಿತವಾಗಿ ವೈಟ್​ ಶಾರ್ಕ್​ಗೆ ಆಹಾರವಾಗಿದ್ದಾನೆ.ಈ ಭೀಕರ ವಿಡಿಯೋ ಇಂಟರ್​ನೆಟ್​ನಲ್ಲಿ ವೈರಲ್ ಆಗಿದೆ.

https://twitter.com/saltwaterfish/status/1494134098675355649?s=20&t=s0zBWVvTZp-68ZxG9dYtuQ

ಭಕ್ಷಕ ಶಾರ್ಕ್ ವ್ಯಕ್ತಿಯನ್ನು ಸಾಯಿಸುತ್ತಿರುವುದನ್ನು ಸ್ಥಳೀಯ ಮೀನುಗಾರರು ಮತ್ತು ಕಡಲತೀರದವರು ಅಸಹಾಯಕತೆಯಿಂದ ನೋಡಿದ್ದಾರೆ.ಇದು ಇತ್ತೀಚೆಗೆ ಮುಂಜಾನೆ ಆಸ್ಟ್ರೇಲಿಯಾದ ಸಿಡ್ನಿಯ ಬ್ಯೂಕನ್ ಪಾಯಿಂಟ್‌ನಲ್ಲಿ ನಡೆದ ಈ ಭಯಬೀಳಿಸುವ ದಾಳಿಯಾಗಿದೆ.

ವ್ಯಕ್ತಿಯನ್ನು ಇನ್ನೂ ಗುರುತಿಸಲಾಗಿಲ್ಲ, ಡೆಡ್ಲಿ ಶಾರ್ಕ್ ಬೈಟ್ ಗಾಯಗಳಿಂದ ವ್ಯಕ್ತಿಯು ತಕ್ಷಣವೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಒಬ್ಬ ಪ್ರತ್ಯಕ್ಷದರ್ಶಿ ಶಾರ್ಕ್ ಮನುಷ್ಯನನ್ನು ಎರಡು ಭಾಗಗಳಾಗಿ ಸೀಳಿದ ನಂತರ ಆತನ ದೇಹದ ಭಾಗಗಳನ್ನು ನುಂಗಿತ್ತು ಎಂದು ಹೇಳಿದ್ದಾರೆ.

ದೃಶ್ಯಗಳಲ್ಲಿ, ಹೃದಯವಿದ್ರಾವಕ ಕಿರುಚಾಟವನ್ನು ಕೇಳಿದವರು ಶಾರ್ಕ್ ದಾಳಿಗೆ ಪ್ರತಿಕ್ರಿಯಿಸುವುದನ್ನು ಕಾಣಬಹುದು. ಒಬ್ಬ ಮೀನುಗಾರ, ಯಾರನ್ನೋ ಶಾರ್ಕ್‌ ತಿಂದಿದೆ. ಅದು ದೊಡ್ಡ ಬಿಳಿ ಶಾರ್ಕ್ ಎಂದು ಕಿರುಚಿದ್ದಾರೆ. ನಾನು ಈಜುಗಾರನ ಮೇಲೆ ಮೇಲ್ಮೈಯಲ್ಲಿ ನಾಲ್ಕರಿಂದ ಐದು ಮೀಟರ್ ದೊಡ್ಡ ಬಿಳಿ ಬಣ್ಣವನ್ನು ನೋಡಿದೆ. ಅದು ನೀರಿನಲ್ಲಿ ಇಳಿದ ಕಾರ್ ಇದ್ದಂತೆ ಕಾಣುತ್ತಿದೆ ಎಂದು ನೋಡಿದವರು ಹೇಳಿದ್ದಾರೆ.ಶಾರ್ಕ್ ಅವನ ದೇಹದ ಮೇಲೆ ದಾಳಿ ಮಾಡುತ್ತಿದೆ. ಅವನ ದೇಹವು ಬಂಡೆಗಳ ಮೇಲೆ ಇತ್ತು. ಅದು ಹಿಂತಿರುಗಿ ಬಂದು ಅವನ ದೇಹದ ಭಾಗಗಳನ್ನು ನುಂಗಿದೆ.

1963ರ ನಂತರ ಸಿಡ್ನಿಯಲ್ಲಿ ನಡೆದ ಮೊದಲ ಡೆಡ್ಲಿ ಶಾರ್ಕ್ ದಾಳಿ ಇದಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ಹೇಳಿವೆ. ನಿಮಿಷಗಳ ನಂತರ ಈಜುಗಾರನ ಅವಶೇಷಗಳು ನೀರಿನಲ್ಲಿ ಪತ್ತೆಯಾಗಿವೆ ಎಂದು ನ್ಯೂ ಸೌತ್ ವೇಲ್ಸ್ ಪೊಲೀಸರು ಖಚಿತಪಡಿಸಿದ್ದಾರೆ. ವೆಟ್‌ಸೂಟ್‌ನ ಭಾಗಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ಮೀನುಗಾರ ಕ್ರಿಸ್ ಲಿಂಟೊ ಘಟನೆ ಬಗ್ಗೆ ಪ್ರತಿಕ್ರಿಯಿಸಿ ಯಾರೋ ವ್ಯಕ್ತಿ ಈಜುತ್ತಿದ್ದಾಗ ಶಾರ್ಕ್ ಬಂದು ಅವನ ಮೇಲೆ ದಾಳಿ ಮಾಡಿದೆ ಎಂದಿದ್ದಾರೆ. ನಾವು ಕೂಗುವ ಶಬ್ದವನ್ನು ಕೇಳಿದೆವು. ಅದರ ಸುತ್ತಲೂ ಒಂದು ಕಾರು ನೀರಿನಲ್ಲಿ ಇಳಿದಂತೆ ತೋರುತ್ತಿತ್ತು, ಒಂದು ದೊಡ್ಡ ಮಾಂಸದ ತುಂಡು ಶಾರ್ಕ್ ದೇಹದ ಮೇಲೆ ಕೊಚ್ಚಿಹೋಗುತ್ತಿತ್ತು. ಎಲ್ಲೆಡೆ ರಕ್ತ ಇತ್ತು ಎಂದಿದ್ದಾರೆ. ಶಾರ್ಕ್​ಗೆ ಬಲಿಯಾದವನು ವೆಟ್‌ಸೂಟ್ ಧರಿಸಿದ ವ್ಯಕ್ತಿಯೊಬ್ಬನು ಕೊಲ್ಲಿಯ ಉದ್ದಕ್ಕೂ ಈಜುತ್ತಿದ್ದ ಎನ್ನಲಾಗಿದೆ.

Leave A Reply

Your email address will not be published.