ಪುತ್ತೂರು:ರೈಲ್ವೆ ನಿಲ್ದಾಣದ ಬಳಿ ಪತ್ತೆಯಾದ ಅಪರಿಚಿತ ಶವ|ಮರಣೋತ್ತರ ಪರೀಕ್ಷೆಯ ಬಳಿಕ ಪುರುಷನ ದೇಹವೆಂದು ದೃಢ

ಪುತ್ತೂರು: ಕಬಕ-ಪುತ್ತೂರು ರೈಲ್ವೇ ನಿಲ್ದಾಣದ ಬಳಿ ಪತ್ತೆಯಾಗಿದ್ದ ಅಪರಿಚಿತ ಶವದ ಮರಣೋತ್ತರ ಪರೀಕ್ಷೆಯು ಇಂದು ನಡೆಸಲಾಗಿದ್ದು ಪುರುಷನ ಮೃತದೇಹ ಎಂದು ವೈದ್ಯರು ದೃಢಪಡಿಸಿದ್ದಾರೆ.

ಕಬಕ ಪುತ್ತೂರು ರೈಲ್ವೇ ನಿಲ್ದಾಣದ 50 ಮೀಟರ್
ದೂರದಲ್ಲಿರುವ ರೈಲ್ವೇ ಇಲಾಖೆಗೆ ಒಳಪಟ್ಟ ರೈಲ್ವೇ ವಸತಿ ಗೃಹಗಳಿರುವ ಅಂದ್ರಟ್ಟ ಎಂಬ ಸ್ಥಳದಲ್ಲಿ ನಿನ್ನೆ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ರೈಲ್ವೇ ಸಿಬ್ಬಂದಿಗಳು ಕರ್ತವ್ಯಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಬೀದಿ ನಾಯಿಗಳು ಗುಂಪಾಗಿರುವುದನ್ನು ಪರಿಶೀಲಿಸಿದಾಗ ಅಪರಿಚಿತ ಶವ ಇರುವುದು ಬೆಳಕಿಗೆ ಬಂದಿದ್ದು ಅವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಇಂದು ಬೆಳಿಗ್ಗೆ ಸರಕಾರಿ ಆಸ್ಪತ್ರೆಯ ವೈದ್ಯರು ಸ್ಥಳಕ್ಕೆ ಆಗಮಿಸಿ ಮರಣೋತ್ತರ ಪರೀಕ್ಷೆ ನಡೆಸಿ ಪುರುಷನ ಮೃತದೇಹ ಎಂದು ಗುರುತಿಸಿದ್ದಾರೆ. ಮೃತ ವ್ಯಕ್ತಿಗೆ ಸುಮಾರು 50ವರ್ಷ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಪೊಲೀಸರು ರಾತ್ರಿಯಿಂದ ಬೆಳಗ್ಗಿನ ತನಕ ಮೃತದೇಹವನ್ನು ಕಾವಲು ಕಾದಿದ್ದರು.

ನಗರ ಸಭಾ ಆರೋಗ್ಯ ನಿರೀಕ್ಷಕ ರಾಮಚಂದ್ರ, ಠಾಣಾ ಎಎಸ್‌ಐ ಲೋಕನಾಥ ಹಾಗೂ ಸಿಬ್ಬಂದಿಗಳು ಮೃತ ಮಹಜರು ನಡೆಸಿ ಮೃತದೇಹವನ್ನು ತೆರವುಗೊಳಿಸಿದ್ದಾರೆ. ಮೃತಪಟ್ಟ ವ್ಯಕ್ತಿ ಯಾರೆಂದು ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ.

Leave A Reply

Your email address will not be published.