ವಾಟ್ಸಪ್ ನಲ್ಲಿ ‘ಹಾರ್ಟ್ ಇಮೋಜಿ ‘ಕಳುಸಿಸುವವರೇ ಎಚ್ಚರ!|ಅಪ್ಪಿ-ತಪ್ಪಿಯೂ ಈ ಕೆಲಸ ಮಾಡಿದ್ರೆ ಜೈಲು ಶಿಕ್ಷೆ ಖಚಿತ

ಈಗ ಯಾರೂ ತಾನೇ ಸೋಶಿಯಲ್ ಮೀಡಿಯಾ ಬಳಕೆ ಮಾಡದೆ ಇರಲಾರ.ಎಲ್ಲರಲ್ಲೂ ವಾಟ್ಸಪ್, ಇನ್ಸ್ಟಾಗ್ರಾಮ್ ಇದ್ದೇ ಇದೆ. ಇಂತಹ ಚಾಟಿಂಗ್ ಆಪ್ ಗಳು ಇದೆ ಅಂದ ಮೇಲೆ ಇಮೋಜಿಗಳು ಕೂಡ ಇದ್ದೇ ಇರುತ್ತದೆ. ಇದೀಗ ಅಂತೂ ಮೆಸೇಜ್ ಗಳಿಗಿಂತ ಸ್ಟಿಕರ್ ಗಳನ್ನೇ ಉಪಯೋಗಿಸಿ ಮಾತನ್ನು ತೋರ್ಪಡಿಸುವವರೇ ಹೆಚ್ಚು.

ಅದರಲ್ಲಿಯೂ ಸ್ನೇಹಿತರ ನಡುವೆ ಹೆಚ್ಚಾಗಿ ಶೇರ್‌ ಆಗುವ ಇಮೋಜಿ ಎಂದರೆ ಲವ್‌ ಇಮೋಜಿ. ಇದನ್ನು ಹೆಚ್ಚಾಗಿ ಎಲ್ಲರೂ ಬಳಸುತ್ತಾರೆ.ಆದರೆ ಇದೀಗ ಈ ಇಮೋಜಿ ಮೇಲೆ ನಿರ್ಬಂಧ ವಿಧಿಸಲಾಗಿದ್ದು,ಒಂದು ವೇಳೆ ಮೆಸೇಂಜರ್‌, ವಾಟ್ಸ್‌ಆಯಪ್‌ನಲ್ಲಿ ಈ ಹಾರ್ಟ್‌ ಇಮೋಜಿ ಬಳಸಿದರೆ ನೀವು ಜೈಲು ಶಿಕ್ಷೆಗೆ ಗುರಿಯಾಗೋದು ಖಚಿತ!

ಆದ್ರೆ ಇದು ಭಾರತೀಯರು ಭಯಪಡೋ ವಿಷಯವಲ್ಲ.ಏಕೆಂದರೆ ಇಂಥದ್ದೊಂದು ವಿಚಿತ್ರ ಕಾನೂನು ಜಾರಿ ಮಾಡಿರುವುದು ಸೌದಿ ಅರೇಬಿಯಾದಲ್ಲಿ. ಯಾರಿಗಾದರೂ ಕೆಂಪು ಹೃದಯದ ಇಮೋಜಿ ಕಳುಹಿಸಿ ತಪ್ಪಿತಸ್ಥರೆಂದು ಸಾಬೀತಾದರೆ ಎರಡರಿಂದ ಐದು ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಇದಲ್ಲದೆ, ಕಳುಹಿಸುವವರಿಗೆ ಒಂದು ಲಕ್ಷ ಸೌದಿ ರಿಯಾಲ್ ದಂಡ (ಸುಮಾರು 20 ಲಕ್ಷ ರೂಪಾಯಿ) ವಿಧಿಸಬಹುದು.

ಈ ‘ಕೆಂಪುlಹೃದಯ’ಗಳನ್ನು ವಾಟ್ಸಾಪ್‌ನಲ್ಲಿ ಕಳುಹಿಸುವುದು ದೇಶದಲ್ಲಿ ‘ಕಿರುಕುಳ ಅಪರಾಧ’ಕ್ಕೆ ಸಮಾನವಾಗಿದೆ ಎಂದು ಸೌದಿ ಅರೇಬಿಯಾದ ಆಂಟಿ ಫ್ರಾಡ್ ಅಸೋಸಿಯೇಷನ್‌ನ ಸದಸ್ಯ ಅಲ್ ಮೊಟಾಜ್ ಕುಟ್ಬಿ ಸ್ಥಳೀಯ ಪತ್ರಿಕೆಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.

“ಆನ್‌ಲೈನ್ ಚಾಟ್‌ಗಳ ಸಮಯದಲ್ಲಿ ಕೆಲವು ಚಿತ್ರಗಳು ಮತ್ತು ಎಕ್ಸ್‌ಪ್ರೆಶನ್ಗಳನ್ನು ಸ್ವೀಕರಿಸಿದ ವ್ಯಕ್ತಿ ಮೊಕದ್ದಮೆ ಹೂಡಿದರೆ ಕಿರುಕುಳದ ಅಪರಾಧವಾಗಿ ಬದಲಾಗಬಹುದು” ಎಂದು ಅಲ್ ಮೊಟಾಜ್ ಕುಟ್ಬಿ ಹೇಳಿದ್ದಾರೆ. ಯಾವುದೇ ವ್ಯಕ್ತಿಯೊಂದಿಗೆ ಅವರ ಒಪ್ಪಿಗೆಯಿಲ್ಲದೆ ಸಂವಾದದಲ್ಲಿ ತೊಡಗಬೇಡಿ ಅಥವಾ ಅಹಿತಕರ ಸಂಭಾಷಣೆಯಲ್ಲಿ ತೊಡಗಬೇಡಿ ಎಂದು ಕುಟ್ಬಿ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಕೆಂಪು ಹೃದಯದ ಎಮೋಜಿಗಳನ್ನು ಬಳಸುವಾಗ ಜಾಗರೂಕರಾಗಿರಿ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.

“ಕಿರುಕುಳ ವಿರೋಧಿ ವ್ಯವಸ್ಥೆಯ ಪ್ರಕಾರ, ಕಿರುಕುಳವನ್ನು ಆಧುನಿಕ ತಂತ್ರಜ್ಞಾನ ಸೇರಿದಂತೆ ಯಾವುದೇ ವಿಧಾನದಿಂದ ಅವನ/ಅವಳ ದೇಹ ಅಥವಾ ಗೌರವಕ್ಕೆ ಧಕ್ಕೆ ತರುವ ಅಥವಾ ಅವನ/ಆಕೆಯ ನಮ್ರತೆಯನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಯೊಂದಿಗೆ ಲೈಂಗಿಕ ಅರ್ಥದೊಂದಿಗೆ ವರ್ತಿಸುವುದು ಅಥವಾ ಸನ್ನೆ ಮಾಡುವುದು ಎಂದು ವ್ಯಾಖ್ಯಾನಿಸಲಾಗಿದೆ. ಇದು ಕೆಂಪು ಹೃದಯಗಳು ಮತ್ತು ಕೆಂಪು ಗುಲಾಬಿಗಳಂತಹ ಸಮಾಜದ ಪದ್ಧತಿಯ ಪ್ರಕಾರ ಲೈಂಗಿಕ ಅರ್ಥಗಳೊಂದಿಗೆ ಸಂಬಂಧಿಸಿದ ಎಮೋಜಿಗಳನ್ನು ಒಳಗೊಂಡಿರುತ್ತದೆ.” ಎಂದು ಕುಟ್ಬಿ ಉಲ್ಲೇಖಿಸಿ ಗಲ್ಫ್ ನ್ಯೂಸ್ ವರದಿ ಮಾಡಿದೆ.

ಸಂಭಾಷಣೆಯಲ್ಲಿ ಯಾವುದೇ ರೀತಿಯ ನಿಂದನೆಗಳು ನಡೆದರೆ ಮತ್ತು ಘಟನೆಯನ್ನು ಅಧಿಕಾರಿಗಳಿಗೆ ವರದಿ ಮಾಡಿದರೆ ಮೇಸೇಜ್ ಕಳುಹಿಸುವವರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಆರೋಪ ಸಾಬೀತಾದರೆ, ಶಂಕಿತನ ವಿರುದ್ಧ SR100,000 ದಂಡ ಮತ್ತು/ಅಥವಾ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ನೀಡಲಾಗುತ್ತದೆ. ಪುನರಾವರ್ತಿತ ಉಲ್ಲಂಘನೆಯ ಸಂದರ್ಭದಲ್ಲಿ, ದಂಡವು 5 ವರ್ಷಗಳ ಜೈಲು ಜೊತೆಗೆ SR300,000 ವರೆಗೆ ತಲುಪಬಹುದು ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.

Leave A Reply

Your email address will not be published.