Day: February 16, 2022

ಬೆಳ್ತಂಗಡಿ : ಉಜಿರೆಯ ಮಕ್ಕಳ ತಜ್ಞ ವೈದ್ಯ ಡಾ.ಶಂತನು ಆರ್ ಪ್ರಭು ಅವರ ಟ್ವಿಟ್ಟರ್ ಖಾತೆ ಹ್ಯಾಕ್| ಕಿಡಿಗೇಡಿಗಳಿಂದ ಹಿಜಾಬ್ ಕುರಿತು ಅವಹೇಳನಕಾರಿ ಪೋಸ್ಟ್|

ಬೆಳ್ತಂಗಡಿ : ಉಜಿರೆಯ ಹೆಸರಾಂತ ಬೆನಕ ಆಸ್ಪತ್ರೆಯ ಮಕ್ಕಳ ತಜ್ಞ ವೈದ್ಯ ಡಾ.ಶಾಂತನು ಆರ್ ಪ್ರಭು ಅವರ ಟ್ವಿಟ್ಟರ್ ಖಾತೆಯನ್ನು ಯಾರೋ ಕಿಡಿಗೇಡಿಗಳು ಹ್ಯಾಕ್ ಮಾಡ ಹಿಜಾಬ್ ವಿರುದ್ಧ ಟ್ವೀಟ್ ಮಾಡಿದ್ದಾರೆ. ಈ ಘಟನೆ ಕುರಿತು ಬೆಳ್ತಂಗಡಿ ಠಾಣೆಯಲ್ಲಿ ದೂರು ನೀಡಲಾಗಿದೆ. ಟ್ವಿಟ್ಟರ್ ನಲ್ಲಿ ಹಿಜಾಬ್ ಬಗ್ಗೆ ಇಲ್ಲಸಲ್ಲದ ಮೆಸೇಜ್ ಹಾಕಲಾಗಿದೆ. ಹಿಜಾಬ್ ಧರಿಸಲು ಇದು ತಾಲಿಬಾನ್ ಅಥವಾ ಸೌದಿ ಅರೇಬಿಯಾ ಅಲ್ಲ. ಮದರಸವೂ ಅಲ್ಲ. ಇದು ಶಿಕ್ಷಣ ಸಂಸ್ಥೆ. ಮದರಸದಲ್ಲಿ ಬೇಕಾದರೆ ಹಿಜಾಬ್ ಹಾಕಿ ಎಂಬಿತ್ಯಾದಿಯಾಗಿ …

ಬೆಳ್ತಂಗಡಿ : ಉಜಿರೆಯ ಮಕ್ಕಳ ತಜ್ಞ ವೈದ್ಯ ಡಾ.ಶಂತನು ಆರ್ ಪ್ರಭು ಅವರ ಟ್ವಿಟ್ಟರ್ ಖಾತೆ ಹ್ಯಾಕ್| ಕಿಡಿಗೇಡಿಗಳಿಂದ ಹಿಜಾಬ್ ಕುರಿತು ಅವಹೇಳನಕಾರಿ ಪೋಸ್ಟ್| Read More »

ಒಂದು ತಿಂಗಳಿಗೆ ಪದವಿ ಪರೀಕ್ಷೆ ಮುಂದೂಡಲು ಉನ್ನತ ಶಿಕ್ಷಣ ಇಲಾಖೆಯಿಂದ ವಿಶ್ವವಿದ್ಯಾಲಯಗಳಿಗೆ ಸೂಚನೆ!!!

ಬೆಂಗಳೂರು : ಕೊರೊನಾ ಸೋಂಕು ಹಾಗೂ ಅತಿಥಿ ಉಪನ್ಯಾಸಕರ ಪ್ರತಿಭಟನೆಯಿಂದಾಗಿ ಪಠ್ಯಕ್ರಮಗಳು ಮುಗಿಯದಿರುವ ಹಿನ್ನೆಲೆಯಲ್ಲಿ ಪದವಿ ಕಾಲೇಜುಗಳ ಸೆಮಿಸ್ಟರ್ ಪರೀಕ್ಷೆಯನ್ನು ಒಂದು ತಿಂಗಳ ಅವಧಿಗೆ ಮುಂದೂಡಲು ಉನ್ನತ ಶಿಕ್ಷಣ ಇಲಾಖೆ ವಿಶ್ವವಿದ್ಯಾಲಯಗಳಿಗೆ ಸೂಚನೆ ನೀಡಿದೆ. ಕೆಲವೊಂದು ವಿಶ್ವವಿದ್ಯಾಲಯಗಳು ಈಗಾಗಲೇ ಸೆಮಿಸ್ಟರ್ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದ್ದವು. ಆದರೆ ಪಠ್ಯಕ್ರಮವನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಾಗದಿದ್ದರಿಂದ ಪರೀಕ್ಷೆ ಮುಂದೂಡುವಂತೆ ವಿದ್ಯಾರ್ಥಿಗಳು ಮನವಿ ಮಾಡಿದ್ದರು. ಉನ್ನತ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ ಕುಮಾರ್ ನಾಯಕ್ ಅವರು ವಿಶ್ವವಿದ್ಯಾಲಯಗಳ ಕುಲಸಚಿವರುಗಳಿಗೆ ಸೂಚಿಸಿದ್ದಾರೆ.

ಕಡಬ: ಅಕ್ರಮ ಜಾನುವಾರು ಸಾಗಾಟ ಪತ್ತೆ!! ಪೊಲೀಸರನ್ನು ಕಂಡು ಎಸ್ಕೇಪ್ ಆಗುವ ಭರದಲ್ಲಿ ಮನೆಯಂಗಳಕ್ಕೆ ನುಗ್ಗಿದ ವಾಹನ

ಕಡಬ: ಅಕ್ರಮವಾಗಿ ಗೋಸಾಗಾಟ ನಡೆಸುತ್ತಿದ್ದವರನ್ನು ಪತ್ತೆ ಹಚ್ಚಿದ ಪೊಲೀಸರು, ವಾಹನವನ್ನು ಬೆನ್ನಟ್ಟಿ ಹಿಡಿದ ಘಟನೆ ಕೇಪು ಎಂಬಲ್ಲಿ ನಡೆದಿದೆ. ಕಡಬದ ಇಬ್ಬರು ವ್ಯಕ್ತಿಗಳು ಕೋಡಿಂಬಾಳ ಮೂಲದ ಚಾಲಕನ ಪಿಕ್ಅಪ್ ವಾಹನದಲ್ಲಿ ನೆಲ್ಯಾಡಿ ಕಡೆಗೆ ಅಕ್ರಮವಾಗಿ ಜಾನುವಾರು ಸಾಗಾಟ ನಡೆಸುತ್ತಿದ್ದ ವೇಳೆ ಗಸ್ತಿನಲ್ಲಿದ್ದ ಪೊಲೀಸರು ಬೆನ್ನಟ್ಟಿದ್ದಾರೆ. ಪೊಲೀಸರನ್ನು ಕಂಡೊಡನೆ ಆರೋಪಿಗಳು ವಾಹನವನ್ನು ಅಲ್ಲಿಯೇ ಪಕ್ಕದ ಮನೆಯ ಅಂಗಳಕ್ಕೆ ನುಗ್ಗಿಸಿದ್ದು, ಕೂಡಲೇ ಪೊಲೀಸರು ಇಬ್ಬರು ಆರೋಪಿಗಳ ಸಹಿತ ಜಾನುವಾರುಗಳಿದ್ದ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ದೇವಸ್ಥಾನಗಳಲ್ಲಿ ಗಂಟೆ, ಜಾಗಟೆ ಶಬ್ದ ನಿರ್ಬಂಧ ಆದೇಶ ಹಿಂಪಡೆದ ಧಾರ್ಮಿಕ ದತ್ತಿ ಇಲಾಖೆ!!!

ಬೆಂಗಳೂರು : ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ‘ ದೇವಸ್ಥಾನಗಳಲ್ಲಿ ಜಾಗಟೆ, ಗಂಟೆ, ಶಂಖ, ಊದುವುದರಿಂದ ಶಬ್ದ ಮಾಲಿನ್ಯ ಉಂಟಾಗುತ್ತದೆ. ಹಾಗಾಗಿ ಅವುಗಳನ್ನು ಬಳಸದಂತೆ ನಿರ್ಬಂಧ ವಿಧಿಸಿದ್ದ‌ ಆದೇಶವನ್ನು ಧಾರ್ಮಿಕ ದತ್ತಿ ಇಲಾಖೆ ಹಿಂಪಡೆದಿದೆ ಎಂಬುದಾಗಿ ತಿಳಿಸಿದೆ. ಧಾರ್ಮಿಕ ದತ್ತಿ ಇಲಾಖೆ ಹೊರಡಿಸಿದ್ದ ಆದೇಶವನ್ನು ಈಗಾಗಲೇ ಹಿಂಪಡೆಯಲಾಗಿದ್ದು, ಯಾರಿಗೂ ಗೊಂದಲ ಬೇಡ. ಇನ್ನು ಇದನ್ನು ಯಾವುದೋ ಒಂದು ಧರ್ಮ ಅಥವಾ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ನೋಟಿಸ್ ನೀಡಿರಲಿಲ್ಲ. ಕೆಲವೊಂದು ಗೊಂದಲ ಉಂಟಾಗಿದ್ದರಿಂದ ಈ ಆದೇಶವನ್ನು ಹಿಂಪಡೆಯಲಾಗಿದೆ’ ಎಂದು …

ದೇವಸ್ಥಾನಗಳಲ್ಲಿ ಗಂಟೆ, ಜಾಗಟೆ ಶಬ್ದ ನಿರ್ಬಂಧ ಆದೇಶ ಹಿಂಪಡೆದ ಧಾರ್ಮಿಕ ದತ್ತಿ ಇಲಾಖೆ!!! Read More »

ಫ್ಯಾಕ್ಟ್ ಚೆಕ್ | ಬಾಲಕಿ ಹಿಂದೆ ಓಡುತ್ತಿರುವ ಪತ್ರಕರ್ತನ ವೀಡಿಯೋ| ಟ್ರೋಲ್ ಗೊಳಗಾದ ವೀಡಿಯೋ ಪೂರ್ಣ ಸತ್ಯವಲ್ಲ| ವೀಡಿಯೋ ಬಗ್ಗೆ ಅಸಲಿ ಮಾಹಿತಿ ಇಲ್ಲಿದೆ!

ನಿನ್ನೆಯಷ್ಟೇ ಒಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಒಳಪಟ್ಟಿತ್ತು. ಅದೇನೆಂದರೆ ಹಿಜಾಬ್ ಧರಿಸಿದ ಪುಟ್ಟ ಬಾಲಕಿಯ ಹಿಂದೆ ಓಡಿದ ಪತ್ರಕರ್ತ ಎಂದು. ಬಾಲಕಿಗೆ ವರದಿಗಾರರು ತೊಂದರೆ ಕೊಡುತ್ತಿದ್ದಾರೆ ಎಂದು ಟ್ರೋಲ್ ಆಗಿತ್ತು. ಆದರೆ ಈ ಹೇಳಿಕೆಗೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೆ ಒಳಗಾದ ಪತ್ರಕರ್ತ ಕಿರಣ್ ಕಂಕಾರಿ ಬಾಲಕಿಯ ಹೇಳಿಕೆಯನ್ನು ಪಡೆಯುವ ಉದ್ದೇಶದಿಂದ ಓಡಿದ್ದಾರೆ. ಅಷ್ಟೇ. ಬಾಲಕಿಯೂ ಸಹ ಸ್ವಲ್ಪ ಓಡಿ ನಂತರ ನಿಂತಿದ್ದಾಳೆ. ಈಗ ಟ್ರೋಲ್ ಆಗುತ್ತಿರುವ ವೀಡಿಯೋ ಹಿಂದಿನ ಹಾಗೂ ಮುಂದಿನ ಭಾಗಗಳನ್ನು …

ಫ್ಯಾಕ್ಟ್ ಚೆಕ್ | ಬಾಲಕಿ ಹಿಂದೆ ಓಡುತ್ತಿರುವ ಪತ್ರಕರ್ತನ ವೀಡಿಯೋ| ಟ್ರೋಲ್ ಗೊಳಗಾದ ವೀಡಿಯೋ ಪೂರ್ಣ ಸತ್ಯವಲ್ಲ| ವೀಡಿಯೋ ಬಗ್ಗೆ ಅಸಲಿ ಮಾಹಿತಿ ಇಲ್ಲಿದೆ! Read More »

ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಬಾಲಿವುಡ್ ನಟಿ !! | ಹಾಟ್ ಬೆಡಗಿ ರಾಖಿ ಸಾವಂತ್ ಪತಿ ರಿತೇಶ್ ಜೊತೆಗಿನ ಸಂಬಂಧವನ್ನು ಕೊನೆಗೊಳಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್

ಬಾಲಿವುಡ್ ನಲ್ಲಿ ಇತ್ತೀಚೆಗೆ ವಿಚ್ಛೇದನ ಪರ್ವವೇ ನಡೆಯುತ್ತಿದೆ. ಈ ಸಾಲಿಗೆ ಮತ್ತೊಬ್ಬ ಬಾಲಿವುಡ್ ನಟಿ ಸೇರ್ಪಡೆಗೊಂಡಿದ್ದಾರೆ. ಹಾಟ್ ಬೆಡಗಿ ರಾಖಿ ಸಾವಂತ್, ರಿತೇಶ್ ಜೊತೆಗಿನ ಸಂಬಂಧವನ್ನು ಕೊನೆಗೊಳಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಪತಿ ರಿತೇಶ್ ಅವರಿಂದ ತಾವು ಬೇರ್ಪಟ್ಟಿರುವ ವಿಷಯವನ್ನು ಇನ್ಸ್ಟಾಗ್ರಾಮ್ ಮೂಲಕ ಅವರು ತಿಳಿಸಿದ್ದಾರೆ. ವ್ಯಾಲೆಂಟೈನ್ ಡೇ ಆಚರಣೆಗೂ ಒಂದು ದಿನ ಮುನ್ನ ಅಂದರೆ, ಫೆ.13ರಂದು ರಾಖಿ ಸಾವಂತ್ ಅವರು ಗಂಡನಿಂದ ಬೇರೆ ಆಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ವ್ಯಾಲೆಂಟೈನ್ಸ್ ಡೇ ದಿನಕ್ಕೂ ಮುನ್ನವೇ ಈ …

ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಬಾಲಿವುಡ್ ನಟಿ !! | ಹಾಟ್ ಬೆಡಗಿ ರಾಖಿ ಸಾವಂತ್ ಪತಿ ರಿತೇಶ್ ಜೊತೆಗಿನ ಸಂಬಂಧವನ್ನು ಕೊನೆಗೊಳಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ Read More »

ಬೆಳ್ತಂಗಡಿ : ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು NIA ತನಿಖೆಗೊಳಪಡಿಸಲು ವಿ.ಹಿಂ.ಪರಿಷದ್ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಪತ್ರ!

ಉಡುಪಿಯಲ್ಲಿ ಪ್ರಾರಂಭವಾದ ಹಿಜಾಬ್ ಇಂದು ರಾಷ್ಟ್ರವ್ಯಾಪ್ತಿ ಪ್ರಕರಣ ಆಗಿದೆ. ಶಾಲಾ ಕಾಲೇಜುಗಳು ಪ್ರಾರಂಭವಾದರೂ ಕೂಡಾ ಹೆಚ್ಚಿನ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುತ್ತಿಲ್ಲ. ತಾವು ಹಿಜಾಬ್ ಧರಿಸಿಯೇ ಬರುತ್ತೇವೆ ಎಂದು ಕೆಲವು ಮಕ್ಕಳ ವಾದ‌ವಾಗಿದೆ. ಈ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ವಿ.ಹಿಂ.ಪರಿಷತ್ ಬೆಳ್ತಂಗಡಿಯ ಜಿಲ್ಲಾ ಸಹ ಕಾರ್ಯದರ್ಶಿ ನವೀನ್ ಅವರು ಮಾನ್ಯ ಮುಖ್ಯಮಂತ್ರಿಗಳಿಗೆ ಹಿಜಾಬ್ ಪ್ರಕರಣವನ್ನು NIA ತನಿಖೆಗೆ ಮಾಡಬೇಕೆಂದು ಆಗ್ರಹಿಸಿ ಪತ್ರವನ್ನು ಮಾನ್ಯ ತಹಶೀಲ್ದಾರರಿಗೆ ನೀಡಿದ್ದಾರೆ. ” ಹಿಜಾಬ್ ಒಂದು ಪ್ರಕರಣ ಮಾತ್ರವಲ್ಲ ಇದೊಂದು ಜಿಹಾದಿನ ಷಡ್ಯಂತ್ರ, ಮುಸಲ್ಮಾನ …

ಬೆಳ್ತಂಗಡಿ : ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು NIA ತನಿಖೆಗೊಳಪಡಿಸಲು ವಿ.ಹಿಂ.ಪರಿಷದ್ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಪತ್ರ! Read More »

ಹಿಜಾಬ್ ವಿವಾದ : ಪ್ರಕರಣವನ್ನು ಮತ್ತೆ ನಾಳೆ ಮಧ್ಯಾಹ್ನ 2.30 ಕ್ಕೆ ಮುಂದೂಡಿದ ಹೈಕೋರ್ಟ್ ತ್ರಿಸದಸ್ಯ ಪೀಠ

ಬೆಂಗಳೂರು : ಕರ್ನಾಟಕದಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿ ಮಾಡಿದ್ದ ಹಿಜಾಬ್ ವಿವಾದ‌ ಸಂಬಂಧಿಸಿ ಇದೀಗ ಕರ್ನಾಟಕ ಹೈಕೋರ್ಟ್ ನಲ್ಲಿ ಪ್ರಕರಣ ನಡೆಯುತ್ತಿದೆ. ನಿನ್ನೆ ವಿಚಾರಣೆಯನ್ನು ಮಾಡಿದ ಹೈಕೋರ್ಟ್ ತ್ರಿಸದಸ್ಯ ಪೀಠ ಅರ್ಜಿಯನ್ನು ಇಂದಿಗೆ ಮುಂದೂಡಿತ್ತು. ಅರ್ಜಿದಾರರ ಪರವಾಗಿ ದೇವದತ್ ಕಾಮತ್, ಸರಕಾರದ ಪರವಾಗಿ ಎಜಿ ಪ್ರಭುಲಿಂಗ್ ನಾವದಗಿ ಹಾಗೂ ಇತರರು ವಾದ ಮಂಡಿಸಿದ್ದಾರೆ. ವಾದ ಪ್ರತಿವಾದವನ್ನು ಆಲಿಸಿದ ಹೈಕೋರ್ಟ್ ಹಿಜಾಬ್ ಪ್ರಕರಣದ ವಾದವನ್ನು ನಾಳೆ ಮಧ್ಯಾಹ್ನ 2.30 ಕ್ಕೆ ಮುಂದೂಡಿದೆ.

ಸುಳ್ಯ ತಾಲೂಕಿಗೂ ಕಾಲಿಟ್ಟ ಹಿಜಾಬ್ ವಿವಾದ!! ಹಿಜಾಬ್ ಧರಿಸಿ ಕಾಲೇಜು ಪ್ರವೇಶಿಸಲು ಮುಂದಾದ ವಿದ್ಯಾರ್ಥಿಗಳು|ಸ್ಥಳಕ್ಕೆ ಪೊಲೀಸರ ಆಗಮನ

ಸುಳ್ಯ:ರಾಜ್ಯಾದ್ಯಂತ ಸುದ್ದಿಯಲ್ಲಿರುವ ಕಾರಣವಾದ ಹಿಜಾಬ್ ವಿವಾದವು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿಗೂ ಇಂದು ಕಾಲಿಟ್ಟಿದೆ. ಇಲ್ಲಿನ ನೆಹರು ಮೆಮೋರಿಯಲ್ ಕಾಲೇಜೊಂದರಲ್ಲಿ ಕೆಲ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಕಾಲೇಜು ಪ್ರವೇಶಿಸಲು ಮುಂದಾದಾಗ ಶಾಲಾಡಳಿತ ಅನುಮತಿ ನಿರಾಕರಿಸಿದ್ದು ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಿಸಲಾಗಿದೆ.

ನಿಮ್ಮ ಮೊಬೈಲ್ ನಂಬರ್ ನೋಂದಣಿಯಾಗದಿದ್ದರೂ ಸುಲಭವಾಗಿ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಬಹುದು !! | ಇಲ್ಲಿದೆ ಆ ಕುರಿತು ಮಾಹಿತಿ

ಆಧಾರ್ ಕಾರ್ಡ್ ಸಾಮಾನ್ಯವಾಗಿ ಎಲ್ಲರಲ್ಲೂ ಇದೆ. ಆದರೆ ಎಲ್ಲರೂ ಆಧಾರ್ ಗೆ ಮೊಬೈಲ್ ನಂಬರ್ ನೊಂದಾಯಿಸಿಕೊಂಡಿರುವುದಿಲ್ಲ. ಮೊಬೈಲ್ ನಂಬರ್ ನೋಂದಾಯಿಸದ ಕಾರಣದಿಂದಾಗಿ, ಆಧಾರ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡುವುದು ಸಾಧ್ಯವಾಗುವುದಿಲ್ಲ. ಆದರೆ, ಈಗ ನೀವು ನೋಂದಾಯಿತ ಮೊಬೈಲ್ ಸಂಖ್ಯೆ ಇಲ್ಲದೆಯೂ, ನಿಮ್ಮ ಆಧಾರ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು. ಆಧಾರ್ ನೀಡುವ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಈ ಮಾಹಿತಿಯನ್ನು ಪ್ರಕಟಿಸಿದೆ. ಮೊಬೈಲ್ ಸಂಖ್ಯೆ ನೋಂದಾಯಿಸದ ಜನರಿಗೆ ಸಹಾಯ ಮಾಡುವ ಉದ್ದೇಶದಿಂದ, ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಈ …

ನಿಮ್ಮ ಮೊಬೈಲ್ ನಂಬರ್ ನೋಂದಣಿಯಾಗದಿದ್ದರೂ ಸುಲಭವಾಗಿ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಬಹುದು !! | ಇಲ್ಲಿದೆ ಆ ಕುರಿತು ಮಾಹಿತಿ Read More »

error: Content is protected !!
Scroll to Top