ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಬಾಲಿವುಡ್ ನಟಿ !! | ಹಾಟ್ ಬೆಡಗಿ ರಾಖಿ ಸಾವಂತ್ ಪತಿ ರಿತೇಶ್ ಜೊತೆಗಿನ ಸಂಬಂಧವನ್ನು ಕೊನೆಗೊಳಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್

ಬಾಲಿವುಡ್ ನಲ್ಲಿ ಇತ್ತೀಚೆಗೆ ವಿಚ್ಛೇದನ ಪರ್ವವೇ ನಡೆಯುತ್ತಿದೆ. ಈ ಸಾಲಿಗೆ ಮತ್ತೊಬ್ಬ ಬಾಲಿವುಡ್ ನಟಿ ಸೇರ್ಪಡೆಗೊಂಡಿದ್ದಾರೆ. ಹಾಟ್ ಬೆಡಗಿ ರಾಖಿ ಸಾವಂತ್, ರಿತೇಶ್ ಜೊತೆಗಿನ ಸಂಬಂಧವನ್ನು ಕೊನೆಗೊಳಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

ಪತಿ ರಿತೇಶ್ ಅವರಿಂದ ತಾವು ಬೇರ್ಪಟ್ಟಿರುವ ವಿಷಯವನ್ನು ಇನ್ಸ್ಟಾಗ್ರಾಮ್ ಮೂಲಕ ಅವರು ತಿಳಿಸಿದ್ದಾರೆ. ವ್ಯಾಲೆಂಟೈನ್ ಡೇ ಆಚರಣೆಗೂ ಒಂದು ದಿನ ಮುನ್ನ ಅಂದರೆ, ಫೆ.13ರಂದು ರಾಖಿ ಸಾವಂತ್ ಅವರು ಗಂಡನಿಂದ ಬೇರೆ ಆಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ವ್ಯಾಲೆಂಟೈನ್ಸ್ ಡೇ ದಿನಕ್ಕೂ ಮುನ್ನವೇ ಈ ರೀತಿ ಆಗಿದ್ದರ ಬಗ್ಗೆ ನನಗೆ ತೀವ್ರ ಬೇಸರವಿದೆ. ಆದರೆ ಇಂಥ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯವಾಗಿತ್ತು. ನಮ್ಮ ನಡುವಿನ ಭಿನ್ನಾಭಿಪ್ರಾಯವನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸಿದೆವು. ಆದರೆ ನಾವು ದೂರವಾಗುವುದೇ ಉತ್ತಮ ಎನಿಸಿತು. ನನ್ನ ಆರೋಗ್ಯ ಮತ್ತು ವೃತ್ತಿಜೀವನದ ಬಗ್ಗೆ ನಾನು ಗಮನ ಹರಿಸಬೇಕು. ರಿತೇಶ್‍ಗೆ ಒಳ್ಳೆಯದಾಗಲಿ ಅಂತ ಹಾರೈಸುತ್ತೇನೆ ಎಂದು ರಾಖಿ ಸಾವಂತ್ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

https://www.instagram.com/p/CZ65kHePCho/?utm_source=ig_web_copy_link

ಹಿಂದಿ ಬಿಗ್ ಬಾಸ್ 14ನೇ ಸೀಸನ್‍ನಲ್ಲಿ ರಾಖಿ ಸಾವಂತ್ ಸ್ಪರ್ಧಿಸಿದ್ದರು. ಆಗ ಮೊದಲ ಬಾರಿಗೆ ಗಂಡನ ಬಗ್ಗೆ ಪ್ರಸ್ತಾಪ ಮಾಡಿದ್ದರು. ಜಗತ್ತಿನ ಮುಂದೆ ಬರುವಂತೆ ರಿತೇಶ್ ಬಳಿ ಮನವಿ ಮಾಡಿಕೊಂಡರೂ ಕೂಡ ಅವರು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಅಂತಿಮವಾಗಿ ಬಿಗ್ ಬಾಸ್ 15ನೇ ಸೀಸನ್‍ನಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಇದೀಗ ನಟಿ ತಾನು ಪತಿಯಿಂದ ದೂರವಾಗುತ್ತಿರುವ ಕುರಿತಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.

Leave A Reply