Day: January 25, 2022

ಗುರುಪುರ-ಕೈಕಂಬ: ಅದ್ದೂರು-ಕಾಜಿಲ ಬಳಿ ಟಿಪ್ಪರ್ ಹಾಗೂ ಆಟೋ ನಡುವೆ ಭೀಕರ ರಸ್ತೆ ಅಪಘಾತ!! ಪಿಯುಸಿ ವಿದ್ಯಾರ್ಥಿನಿ ಬಾಲಕಿ ಸಾವು

ಮಂಗಳೂರು:ಟಿಪ್ಪರ್ ಹಾಗೂ ಆಟೋ ನಡುವೆ ಭೀಕರ ಅಪಘಾತ ಸಂಭವಿಸಿ ಬಾಲಕಿಯೋರ್ವಳು ಮೃತಪಟ್ಟ ಮಂಗಳೂರು ಹೊರವಲಯದ ಕಾಜಿಲ ಎಂಬಲ್ಲಿ ನಡೆದಿದೆ.ಮೃತ ಬಾಲಕಿಯನ್ನು ಕರಿಯಂಗಳ ಪಳ್ಳಿಪ್ಪಾಡಿ ನಿವಾಸಿ ಆಸ್ನ(16) ಎಂದು ಗುರುತಿಸಲಾಗಿದೆ. ಘಟನೆ ವಿವರ: ಮೃತ ಬಾಲಕಿ ತನ್ನ ತಾಯಿಯೊಂದಿಗೆ ಆಟೋ ಒಂದರಲ್ಲಿ ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಗುರುಪುರ ಕೈಕಂಬದತ್ತ ತೆರಳುತ್ತಿದ್ದ ಸಂದರ್ಭದಲ್ಲಿ, ಕೈಕಂಬ ಪೊಳಲಿ ದ್ವಾರದಿಂದ ಅದ್ದೂರು ಕಡೆಗೆ ತೆರಳುತ್ತಿದ್ದ ಟಿಪ್ಪರ್ ಆಟೋ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಟೋ ಸಂಪೂರ್ಣ ನಜ್ಜು ಗುಜ್ಜಾಗಿದ್ದು ಕೂಡಲೇ ಸ್ಥಳೀಯರು …

ಗುರುಪುರ-ಕೈಕಂಬ: ಅದ್ದೂರು-ಕಾಜಿಲ ಬಳಿ ಟಿಪ್ಪರ್ ಹಾಗೂ ಆಟೋ ನಡುವೆ ಭೀಕರ ರಸ್ತೆ ಅಪಘಾತ!! ಪಿಯುಸಿ ವಿದ್ಯಾರ್ಥಿನಿ ಬಾಲಕಿ ಸಾವು Read More »

ಕಡಬ: ಒಂದೇ ದಿನ ಐದು ಕಡೆ ನಡೆದ ಗ್ರಾಮ ಸಭೆ!|ಇಲಾಖಾಧಿಕಾರಿಗಳ ಭಾಗವಹಿಸುವಿಕೆಗೆ ಅಡ್ಡಿ

ಕಡಬ : ಕಡಬ ತಾಲೂಕು ವ್ಯಾಪ್ತಿಯಲ್ಲಿ ಮಂಗಳವಾರ ಒಂದೇ ದಿನ ಐದು ಕಡೆ ಗ್ರಾಮ ಸಭೆ ನಡೆದಿದ್ದು ಇಲಾಖಾಧಿಕಾರಿಗಳು ಬಹುತೇಕ ಕಡೆ ಭಾಗವಹಿಸಲು ಅಡ್ಡಿಯಾದ ಬಗ್ಗೆ ವರದಿಯಾಗಿದೆ.ಕಡಬ ತಾಲೂಕಿನ ಪೆರಾಬೆ, ಮರ್ದಾಳ, ಬಿಳಿನೆಲೆ, ಎಡಮಂಗಲ ಹಾಗೂ ಸುಬ್ರಹ್ಮಣ್ಯ ಗ್ರಾ.ಪಂ.ಗಳಲ್ಲಿ ಜ.೨೫ರಂದು ಒಂದೇ ದಿನ ಗ್ರಾಮಸಭೆ ನಡೆದಿದೆ. ಕೆಲವೆಡೆ ಇಲಾಖಾಧಿಕಾರಿಗಳು ಗೈರಾಗಿದ್ದು, ಒಂದೇ ದಿನ ಹಲವೆಡೆ ಗ್ರಾಮಸಭೆ ನಡೆಸಿರುವುದೇ ಇದಕ್ಕೆ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಕೆಲವೆಡೆ ಅಧಿಕಾರಿಗಳು ಒಂದು ಕಡೆ ತಮ್ಮ ಮಾಹಿತಿ, ಪ್ರಶ್ನೋತ್ತರ ಮುಗಿಸಿ …

ಕಡಬ: ಒಂದೇ ದಿನ ಐದು ಕಡೆ ನಡೆದ ಗ್ರಾಮ ಸಭೆ!|ಇಲಾಖಾಧಿಕಾರಿಗಳ ಭಾಗವಹಿಸುವಿಕೆಗೆ ಅಡ್ಡಿ Read More »

ವಿಟ್ಲ: ಈ ಬಾರಿಯು ದ.ಕ ಜಿಲ್ಲೆಗೆ ಒಲಿಯಿತು ಪದ್ಮಶ್ರೀ!! ಸತತ ಏಳು ಸುರಂಗ ಕೊರೆದು ನೀರು ಹರಿಸಿ ಕೃಷಿಯಲ್ಲಿ ಖುಷಿ ಕಂಡ ಏಕೈಕ ಸಾಧಕ ವಿಟ್ಲ ಮಹಾಲಿಂಗ ನಾಯ್ಕ್ ಮುಡಿಗೇರಿತು ಪ್ರಶಸ್ತಿ

ವಿಟ್ಲ: ತನ್ನ ಅವಿರತ ಪ್ರಯತ್ನದಿಂದ ಏಕಾಂಗಿಯಾಗಿ ಏಳು ಸುರಂಗಗಳನ್ನು ಕೊರೆದು, ನೀರು ಹರಿಸಿ ಬೋಳು ಗುಡ್ಡೆಯನ್ನು ಹಚ್ಚ ಹಸಿರ ನಂದನವನ ಕೃಷಿ ಭೂಮಿಯನ್ನಾಗಿ ಪರಿವರ್ತಿಸಿದ ಧೀರನಿಗೆ ಈ ಬಾರಿಯ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದೆ. ಹೌದು, ಬಂಟ್ವಾಳ ತಾಲೂಕಿನ ವಿಟ್ಲ ಅಡ್ಯನಡ್ಕ ಅಮೈ ನಿವಾಸಿ 73ರ ಹರೆಯದ ಮಹಾಲಿಂಗ ನಾಯ್ಕ್ ಅವರು ಈ ಬಾರಿಯ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಆಧುನಿಕ ವ್ಯವಸ್ಥೆಗಲಿಲ್ಲದ ಹಿಂದಿನ ಕಾಲದಲ್ಲಿ ಸುರಂಗ ವ್ಯವಸ್ಥೆಯ ಮೂಲಕ ನೀರಿನ ಹರಿವನ್ನು ಹರಿಸಿ, ಆ ನೀರಿನ ಮೇಲಿನ ನಂಬಿಕೆಯಿಂದ …

ವಿಟ್ಲ: ಈ ಬಾರಿಯು ದ.ಕ ಜಿಲ್ಲೆಗೆ ಒಲಿಯಿತು ಪದ್ಮಶ್ರೀ!! ಸತತ ಏಳು ಸುರಂಗ ಕೊರೆದು ನೀರು ಹರಿಸಿ ಕೃಷಿಯಲ್ಲಿ ಖುಷಿ ಕಂಡ ಏಕೈಕ ಸಾಧಕ ವಿಟ್ಲ ಮಹಾಲಿಂಗ ನಾಯ್ಕ್ ಮುಡಿಗೇರಿತು ಪ್ರಶಸ್ತಿ Read More »

ಕಡಬ: ಮದ್ಯದ ಅಮಲಿನಲ್ಲಿ ನಡು ರಸ್ತೆಯಲ್ಲಿ ಮಲಗಿದ ಯುವಕ: ಕೆಲ ಹೊತ್ತು ವಾಹನ ಸಂಚಾರಕ್ಕೆ ಅಡ್ಡಿ

ಕಡಬ: ಅಮಲು ಪದಾರ್ಥ ಸೇವಿಸಿ ಯುವಕನೊಬ್ಬ ನಡು ರಸ್ತೆಯಲ್ಲಿ ಕೆಲ ಹೊತ್ತು ಮಲಗಿದ್ದು ಕೆಲ ಹೊತ್ತು ವಾಹನ ಸಂಚಾರಕ್ಕೆ ಅಡ್ಡಿ ಉಂಟಾದ ಘಟನೆ ಇಂದು ಕಡಬ ಪೇಟೆಯಲ್ಲಿ ನಡೆದಿದೆ.ಮುಖ್ಯ ಬಸ್ ನಿಲ್ದಾಣದ ಮುಂಭಾಗದ ರಸ್ತೆಯಲ್ಲೇ ಮಲಗಿದ ಕಾರಣ ಸಾರ್ವಜನಿಕರು ,ವಾಹನ ಸವಾರರು ಗುಂಪು ಸೇರಿದ್ದರು.ಬಳಿಕ ಆಟೋಚಾಲಕರು ಆತನ ಮುಖಕ್ಕೆ ನೀರು ಹಾಕಿ ಎಬ್ಬಿಸಿ ಬೇರೆ ಕಡೆಗೆ ಶಿಪ್ಟ್ ಮಾಡಿದ್ದಾರೆ ಎನ್ನಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಕಡಬ ಪೊಲೀಸರು ಆಗಮಿಸಿದ್ದರು. ಕೆಲ ಹೊತ್ತು ವಾಹನ ಸಂಚಾರಕ್ಕೆ ಅಡ್ದಿ ಉಂಟಾಗಿತ್ತು.

SSLC ಮುಖ್ಯ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ|ಮಾರ್ಚ್ 28ರಿಂದ ಏಪ್ರಿಲ್ 11ರವೆರೆಗೆ |ಇಲ್ಲಿದೆ ನೋಡಿ ವೇಳಾಪಟ್ಟಿ ವಿವರ

ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯನ್ನು ನಡೆಸೋದಕ್ಕೆ ಈಗಾಗಲೇ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿತ್ತು. ಇದೀಗ ಮುಖ್ಯ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಂತೆ ಮಾರ್ಚ್ 28 ರಿಂದ ಪರೀಕ್ಷೆ ಆರಂಭಗೊಂಡು, ಎಪ್ರಿಲ್ 11 ರಂದು ಮುಕ್ತಾಯಗೊಳ್ಳಲಿದೆ. ಹೀಗಿದೆ ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆಯ ವಿಷಯವಾರು ವೇಳಾಪಟ್ಟಿ : ದಿನಾಂಕ 28-03-2022 ರ ಸೋಮವಾರ – ಪ್ರಥಮ ಭಾಷೆಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, …

SSLC ಮುಖ್ಯ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ|ಮಾರ್ಚ್ 28ರಿಂದ ಏಪ್ರಿಲ್ 11ರವೆರೆಗೆ |ಇಲ್ಲಿದೆ ನೋಡಿ ವೇಳಾಪಟ್ಟಿ ವಿವರ Read More »

ಪರಪ್ಪನ ಅಗ್ರಹಾರ : ರೌಡಿಶೀಟರ್ ಗೆ ಜೈಲಿನ ಅಧಿಕಾರಿಗಳಿಂದ ವಿಶೇಷ ಆರೈಕೆ|ಸೂಕ್ತ ಕ್ರಮ ಕೈಗೊಳ್ಳುತ್ತೇವೆ -ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿರುವ ರೌಡಿ ಶೀಟರ್ ಗೆ ಜೈಲು ಅಧಿಕಾರಿಗಳಿಂದ ವಿಶೇಷ ಆರೈಕೆ ನೀಡಲಾಗುತ್ತಿರುವ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು.ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೃಹಸಚಿವ ಆರಗ ಜ್ಞಾನೇಂದ್ರ ಅವರು,ಪರಪ್ಪನ ಅಗ್ರಹಾರದಲ್ಲಿ ಅಕ್ರಮ ಚುಟುವಟಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಜೈಲಿನ ಘಟನೆಗಳ ಬಗ್ಗೆ ತನಿಖೆಯನ್ನು ನಡೆಸುತ್ತೆವೆ. ತಪ್ಪಿತಸ್ಥ ಅಧಿಕಾರಿ ಮತ್ತು ಸಿಬ್ಬಂದಿ ಮೇಲೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ,ಭಯೋತ್ಪಾದನೆ, ತೀವ್ರ ಕುಕೃತ್ಯದಲ್ಲಿ ಭಾಗಿಯಾದವರು ಇರುವ ಸೆಲ್ ಗಳಿಗೆ ನಿಯಂತ್ರಣ ಹಾಕುತ್ತೇವೆ. ಪರಪ್ಪನ ಅಗ್ರಹಾರದಲ್ಲಿ ಜಾಮರ್ ಅಳವಡಿಸುವ ಬಗ್ಗೆ ಯೋಚನೆ …

ಪರಪ್ಪನ ಅಗ್ರಹಾರ : ರೌಡಿಶೀಟರ್ ಗೆ ಜೈಲಿನ ಅಧಿಕಾರಿಗಳಿಂದ ವಿಶೇಷ ಆರೈಕೆ|ಸೂಕ್ತ ಕ್ರಮ ಕೈಗೊಳ್ಳುತ್ತೇವೆ -ಗೃಹ ಸಚಿವ ಆರಗ ಜ್ಞಾನೇಂದ್ರ Read More »

ಕದ್ರಿ ಪೊಲೀಸ್ ಠಾಣಾ ಎ.ಎಸೈ ವಿಜಯ್ ಕಾಂಚನ್ ಅವರಿಗೆ ರಾಷ್ಟ್ರಪತಿ ಪದಕ

ಮಂಗಳೂರು : ಕದ್ರಿ ಪೊಲೀಸ್ ಠಾಣೆಯ ಎಎಸ್‌ಐ ವಿಜಯ್ ಕಾಂಚನ್ ಅವರಿಗೆ ರಾಷ್ಟ್ರಪತಿಯ ಪದಕ ಘೋಷಿಸಲಾಗಿದೆ. ವಿಜಯ್ ಕಾಂಚನ್ ಅವರು ಸೇವಾವಧಿಯಲ್ಲಿ ಸಲ್ಲಿಸಿದ ಸಾಧನೆಗಳನ್ನು ಪರಿಗಣಿಸಿ ಈ ಪ್ರಶಸ್ತಿ ಲಭಿಸಿದೆ.

ಕುಂದು ಕೊರತೆಗಳ ಬಗ್ಗೆ ಚರ್ಚೆ ನಡೆಯಬೇಕಿದ್ದ ವಾರ್ಡ್ ಸಭೆ ಕಲ್ಯಾಣ ಮಂಟಪವಾಗಿ ಮಾರ್ಪಡು|ಯುವ ಪ್ರೇಮಿಗಳ ಮದುವೆ ಮಾಡಿಸಿ ಅವರಿಬ್ಬರ ಬಾಳಿಗೆ ಬೆಳಕಾದ ಪಿಡಿಓ|ಈ ವಿಶಿಷ್ಟ ಮದುವೆಗೆ ಸಾಕ್ಷಿಯಾಯಿತು ಗ್ರಾಮ ಪಂಚಾಯತ್

ಮೈಸೂರು :ಪ್ರತಿಯೊಬ್ಬ ಪ್ರೇಮಿಗೂ ತಾನು ಪ್ರೀತಿಸಿದ ಹುಡುಗಿ-ಹುಡುಗ ಜೊತೆಗೆ ಮದುವೆ ಆಗುವುದು ಕನಸು. ಇಂತಹ ಕನಸನ್ನ ನನಸು ಮಾಡಲು ಹೊರಟ ಈ ಜೋಡಿಗೆ ಮಾತ್ರ ಯಾರದೇ ಬೆಂಬಲ ಸಿಗದೇ ಬೇಸತ್ತಿದ್ದ ಸಮಯದಲ್ಲಿ ಪಿಡಿಓ ಒಬ್ಬರು ಈ ಯುವ ಪ್ರೇಮಿಗಳ ಬಾಳಿಗೆ ಬೆಳಕಾಗಿದ್ದಾರೆ. ಇಂತಹ ವಿಚಿತ್ರ ಘಟನೆ ಮೈಸೂರು ನಂಜನಗೂಡು ತಾಲೂಕಿನ ಹರದನಹಳ್ಳಿ ಗ್ರಾಮ ಪಂಚಾಯಯತ್​ನಡೆದಿದ್ದು,ಕುಂದು ಕೊರತೆಗಳ ಬಗ್ಗೆ ಚರ್ಚೆ ನಡೆಯಬೇಕಿದ್ದ ವಾರ್ಡ್ ಸಭೆ ಕಲ್ಯಾಣ ಮಂಟಪವಾಗಿ ಮಾರ್ಪಟ್ಟಿದ್ದು ವಿಶೇಷವೇ ಆಗಿದೆ. ಈ ಯುವ ಜೋಡಿಯ ಮದುವೆಗೆ ಪೋಷಕರ …

ಕುಂದು ಕೊರತೆಗಳ ಬಗ್ಗೆ ಚರ್ಚೆ ನಡೆಯಬೇಕಿದ್ದ ವಾರ್ಡ್ ಸಭೆ ಕಲ್ಯಾಣ ಮಂಟಪವಾಗಿ ಮಾರ್ಪಡು|ಯುವ ಪ್ರೇಮಿಗಳ ಮದುವೆ ಮಾಡಿಸಿ ಅವರಿಬ್ಬರ ಬಾಳಿಗೆ ಬೆಳಕಾದ ಪಿಡಿಓ|ಈ ವಿಶಿಷ್ಟ ಮದುವೆಗೆ ಸಾಕ್ಷಿಯಾಯಿತು ಗ್ರಾಮ ಪಂಚಾಯತ್ Read More »

ಉಸ್ತುವಾರಿ ಸಚಿವರ ನೇಮಕದಲ್ಲಿ ಅಸಮಾಧಾನಗೊಂಡ ಸಚಿವರು|ತವರು ಜಿಲ್ಲೆಯದ್ದೇ ಉಸ್ತುವಾರಿ ನೀಡುವಂತೆ ಬೊಮ್ಮಾಯಿಗೆ ಒತ್ತಾಯ|ಉಸ್ತುವಾರಿ ಪಟ್ಟಿ ಬದಲಾವಣೆ ಸಾಧ್ಯವೇ ಇಲ್ಲ-ಸಿ.ಎಂ

ಬೆಂಗಳೂರು : ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ‌ ಪ್ರಕಟವಾದ ಬೆನ್ನಲ್ಲೇ, ಕೆಲವೊಂದು ಸಚಿವರು ಅಸಮಾಧಾನ ಹೊರಹಾಕಿದ್ದಾರೆ. ತವರು ಜಿಲ್ಲೆಯ ಉಸ್ತುವಾರಿ ನೀಡುವಂತೆ ಸಚಿವರು ಸಿಎಂ ಮೇಲೆ ಒತ್ತಡ ಹಾಕುತ್ತಿದ್ದಾರೆ. ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದು ಆರು ತಿಂಗಳು ಸಮೀಪಿಸುತ್ತಿರುವ ವೇಳೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಆದೇಶ ಹೊರಬಂದಿದ್ದು, ಎಲ್ಲಾ ಸಚಿವರಿಗೂ ತವರು ಜಿಲ್ಲೆ ಹೊರತುಪಡಿಸಿ ಬೇರೆ ಜಿಲ್ಲೆಗಳ ಉಸ್ತುವಾರಿಯನ್ನು ನೀಡಲಾಗಿತ್ತು. ತವರು ಜಿಲ್ಲೆಯದ್ದೇ ಉಸ್ತುವಾರಿ ನೀಡುವಂತೆ ಕೆಲವೊಂದು ಸಚಿವರುಗಳು ಸಿಎಂ ಮೇಲೆ ಒತ್ತಡ …

ಉಸ್ತುವಾರಿ ಸಚಿವರ ನೇಮಕದಲ್ಲಿ ಅಸಮಾಧಾನಗೊಂಡ ಸಚಿವರು|ತವರು ಜಿಲ್ಲೆಯದ್ದೇ ಉಸ್ತುವಾರಿ ನೀಡುವಂತೆ ಬೊಮ್ಮಾಯಿಗೆ ಒತ್ತಾಯ|ಉಸ್ತುವಾರಿ ಪಟ್ಟಿ ಬದಲಾವಣೆ ಸಾಧ್ಯವೇ ಇಲ್ಲ-ಸಿ.ಎಂ Read More »

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ : ಮಾಜಿ ಕೇಂದ್ರ ಸಚಿವ,ಕಾಂಗ್ರೆಸ್ ನಾಯಕ ರತನ್‌ಜಿತ್ ಪ್ರತಾಪ್ ನಾರಾಯಣ್ ಸಿಂಗ್ ಬಿಜೆಪಿಗೆ ಸೇರ್ಪಡೆ

ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳ ಪ್ರಮುಖ ನಾಯಕರ ಪಕ್ಷಾಂತರ ಮುಂದುವರೆದಿದೆ. ಮಾಜಿ ಕೇಂದ್ರ ಸಚಿವ ಮತ್ತು ಉತ್ತರ ಪ್ರದೇಶದ ಕಾಂಗ್ರೆಸ್ ಹಿರಿಯ ನಾಯಕ ರತನ್‌ಜಿತ್ ಪ್ರತಾಪ್ ನಾರಾಯಣ್ ಸಿಂಗ್ ಅವರು ಮಂಗಳವಾರ ಬಿಜೆಪಿಗೆ ಸೇರ್ಪಡೆಯಾಗಿರುವುದಾಗಿ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಕೆಲಸ ಮಾಡುವುದಾಗಿ ಆರ್‌ಪಿಎನ್ ಸಿಂಗ್ ಹೇಳಿಕೆ ನೀಡಿದ್ದಾರೆ. ಆರ್‌ಪಿಎನ್ ಸಿಂಗ್ ಅವರ ತವರು ನೆಲ ಪದ್ರೌನಾ ಕ್ಷೇತ್ರವಾಗಿದ್ದು, ಇತ್ತೀಚೆಗಷ್ಟೇ …

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ : ಮಾಜಿ ಕೇಂದ್ರ ಸಚಿವ,ಕಾಂಗ್ರೆಸ್ ನಾಯಕ ರತನ್‌ಜಿತ್ ಪ್ರತಾಪ್ ನಾರಾಯಣ್ ಸಿಂಗ್ ಬಿಜೆಪಿಗೆ ಸೇರ್ಪಡೆ Read More »

error: Content is protected !!
Scroll to Top