Day: January 10, 2022

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕಾರು, ಬೈಕ್ ಮೇಲೆ ಜಲ್ಲಿ ತುಂಬಿದ
ಟಿಪ್ಪರ್ ಬಿದ್ದು ಆರು ಮಂದಿ ಸಾವು

ಬೆಂಗಳೂರು : ಬೆಂಗಳೂರಿನ ಕುಂಬಳಗೂಡು ಬಳಿ ಭೀಕರ ಅಪಘಾತ ಸಂಭವಿಸಿದೆ‌. ಎರಡು ಕಾರು ಮತ್ತು ಬೈಕ್ ಮೇಲೆ ಟಿಪ್ಪರ್ ಬಿದ್ದು ಆರು ಮಂದಿ ಮೃತ ಪಟ್ಟಿದ್ದಾರೆ. ಎರಡು ಕಾರುಗಳಲ್ಲಿ ತಲಾ 5 ಜನರಂತೆ 10 ಜನರಿದ್ದರು. ಟಿಪ್ಪರ್ ನಡಿ ಇನ್ನೂ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಜಲ್ಲಿ ಸಾಗಿಸುತ್ತಿದ್ದ ಟಿಪ್ಪರ್ ಪಕ್ಕದಲ್ಲೇ ಸಂಚರಿಸುತ್ತಿದ್ದ ವಾಹನಗಳ ಮೇಲೆ ಪಲ್ಟಿಯಾಗಿದೆ. ಬೈಕ್ ಸವಾರ ಸೇರಿದಂತೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಸ್ಥಳಕ್ಕೆ ಪೊಲೀಸ್ ದೌಡಾಯಿಸಿದ್ದಾರೆ. ಕೆಂಗೇರಿಯಿಂದ ಬಿಡದಿ ಮಾರ್ಗ ಮಧ್ಯೆ ಬರುವ …

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕಾರು, ಬೈಕ್ ಮೇಲೆ ಜಲ್ಲಿ ತುಂಬಿದ
ಟಿಪ್ಪರ್ ಬಿದ್ದು ಆರು ಮಂದಿ ಸಾವು
Read More »

ಬಿ.ಸಿ.ರೋಡ್ : ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

ಬಂಟ್ವಾಳ: ಅಪರಿಚಿತ ವ್ಯಕ್ತಿ ಗೂಡ್ಸ್ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿ.ಸಿ.ರೋಡ್ ರೈಲ್ವೆ ನಿಲ್ದಾಣದ ಸಮೀಪ ನಡೆದಿದೆ. ವ್ಯಕ್ತಿಯೋರ್ವ ಏಕಾಏಕಿ ಗೂಡ್ಸ್ ರೈಲು ಸಂಚರಿಸುತ್ತಿದ್ದ ವೇಳೆ ರೈಲಿನ ಅಡಿಗೆ ತಲೆ ಇಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವ್ಯಕ್ತಿಯ ಮುಂಡ ರುಂಡ ಬೇರ್ಪಟ್ಟಿದ್ದು ಮೃತ ವ್ಯಕ್ತಿಯ ಬಗ್ಗೆ ಇನ್ನಷ್ಟೆ ವಿವರ ಲಭ್ಯವಾಗಬೇಕಿದೆ.

ಸಿಎಂ ಬಸವರಾಜ ಬೊಮ್ಮಾಯಿಗೆ ಕೊರೊನಾ ಪಾಸಿಟಿವ್

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ‌. ನಾನು ಆರೋಗ್ಯವಾಗಿದ್ದೇನೆ‌ ಎಂದು ಅವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ‌. ‌ನಾನು ಇಂದು ಸೌಮ್ಯ ರೋಗಲಕ್ಷಣಗಳೊಂದಿಗೆ ಕೋವಿಡ್ – 19 ಗೆ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ವರದಿ ಬಂದಿದೆ. ನನ್ನ ಆರೋಗ್ಯ ಚೆನ್ನಾಗಿದೆ. ನಾನು ಹೋಮ್ ಕ್ವಾರಂಟೈನ್ ನಲ್ಲಿದ್ದೇನೆ. ಇತ್ತೀಚೆಗೆ ನನ್ನ ಸಂಪರ್ಕಕ್ಕೆ ಬಂದಿರುವ ಪ್ರತಿಯೊಬ್ಬರೂ ಐಸೋಲೇಟ್ ಆಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ನಿನ್ನೆ ಟ್ವೀಟ್ ಮಾಡಿ ತಿಳಿಸಿದ್ದಾರೆ.

ಮಾಸ್ಕ್ ಧರಿಸಿ; ಸರಿಯಾಗಿ ಧರಿಸಿ ಅಭಿಯಾನಕ್ಕೆ ಚಾಲನೆ | ಕೋವಿಡ್ ಸಂಗ್ರಾಮದಲ್ಲಿ ಮಾಸ್ಕ್ ಧಾರಣೆಗೆ ಹೆಚ್ಚಿನ ಮಹತ್ವ: ಸಚಿವ ಅಂಗಾರ

ಮಂಗಳೂರು, ಜ.10(ಕ.ವಾ):- ಮಾಸ್ಕ್ ಧರಿಸಿ; ಸರಿಯಾಗಿ ಧರಿಸಿ ಎಂಬ ಅಭಿಯಾನವನ್ನು ಜಿಲ್ಲಾಡಳಿತ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ರೆಡ್ ಕ್ರಾಸ್ ವತಿಯಿಂದ ನಗರದ ಜಿಲ್ಲಾಧಿಕಾರಿಯವರ ಕಚೇರಿ ಆವರಣದಲ್ಲಿ ಜ. 10 ಸೋಮವಾರ ಹಮ್ಮಿಕೊಳ್ಳಲಾಗಿತ್ತು. ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಅಂಗಾರ ಅವರು ಕಾರ್ಯಕ್ರಮದಲ್ಲಿ ಮಾಸ್ಕ್ ವಿತರಿಸಿ, ಕೋವಿಡ್ ವಿರುದ್ದದ ಸಂಗ್ರಾಮದಲ್ಲಿ ಕಡ್ಡಾಯವಾಗಿ ಮಾಸ್ ಧರಿಸಲೇಬೇಕು, ಅದು ಕೂಡ ಸರಿಯಾಗಿ ಧರಿಸಬೇಕು, ಆ ಮೂಲಕ ಜಿಲ್ಲೆಯ ಎಲ್ಲರೂ …

ಮಾಸ್ಕ್ ಧರಿಸಿ; ಸರಿಯಾಗಿ ಧರಿಸಿ ಅಭಿಯಾನಕ್ಕೆ ಚಾಲನೆ | ಕೋವಿಡ್ ಸಂಗ್ರಾಮದಲ್ಲಿ ಮಾಸ್ಕ್ ಧಾರಣೆಗೆ ಹೆಚ್ಚಿನ ಮಹತ್ವ: ಸಚಿವ ಅಂಗಾರ Read More »

ಸಾಧು ಕೋಕಿಲ ಸಿನಿಮಾದಲ್ಲಿ ಭಿಕ್ಷೆ ಬೇಡಿದಂತೆ ‘ ಅಮ್ಮಾದೇ ಅಕ್ಕಾದೇ ‘ ಸ್ಟೈಲ್ನಲ್ಲಿ ಬೆಂಗಳೂರಿನಲ್ಲಿ ಅಂಗವಿಕಲನಂತೆ ವೇಷ ಧರಿಸಿ ಭಿಕ್ಷಾಟನೆ !   

ಬೆಂಗಳೂರು: ನಗರದಲ್ಲಿ ಅಂಗವಿಕಲನಂತೆ ಸುಳ್ಳು ವೇಷಧರಿಸಿ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಆತನಿಗೆ ಎರಡೂ ಕೈಗಳಿದ್ದರೂ, ಒಂದು ಕೈಯನ್ನು ಬಟ್ಟೆಯೊಳಗೆ ಅಡಗಿಸಿಟ್ಟು, ಆ ಕೈಯನ್ನು ಪ್ಯಾಂಟಿನ ಬೆಲ್ಟಿನೊಳಗೆ ತೂರಿಸಿ, ಕೈಯಿಲ್ಲದಂತೆ ಆತ ನಟಿಸುತ್ತಿದ್ದ. ಹಾಗೂ ಮತ್ತೊಂದು ಕೈಯಲ್ಲಿ ಊರುಗೋಲು ಹಿಡಿದು ಭಿಕ್ಷೆ ಬೇಡುತ್ತಿದ್ದ. ಈಗ ವ್ಯಕ್ತಿ ಸಾರ್ವಜನಿಕರೊಬ್ಬರ ಕೈಗೆ ಸಿಕ್ಕಿಬಿದ್ದಿರುವ ವಿಡಿಯೋ ವೈರಲ್ ಆಗಿದೆ. ಆತ ಥೇಟು ಸಾಧು ಕೋಕಿಲ ಥರಾನೇ ರಸ್ತೆಯಲ್ಲಿ ನಿಂತು ‘ ಅಮ್ಮಾ ದೇ… ಅಕ್ಕಾ ದೇ ‘ …

ಸಾಧು ಕೋಕಿಲ ಸಿನಿಮಾದಲ್ಲಿ ಭಿಕ್ಷೆ ಬೇಡಿದಂತೆ ‘ ಅಮ್ಮಾದೇ ಅಕ್ಕಾದೇ ‘ ಸ್ಟೈಲ್ನಲ್ಲಿ ಬೆಂಗಳೂರಿನಲ್ಲಿ ಅಂಗವಿಕಲನಂತೆ ವೇಷ ಧರಿಸಿ ಭಿಕ್ಷಾಟನೆ !    Read More »

ಜ.11ರಂದು ಸವಣೂರಿನಲ್ಲಿ ಸಚಿವ ಎಸ್.ಅಂಗಾರ ಅಧ್ಯಕ್ಷತೆಯಲ್ಲಿ ಅಕ್ರಮ-ಸಕ್ರಮ ಸಮಿತಿ ಸಭೆ

ಸವಣೂರು :ಜ.11ರಂದು ಮಧ್ಯಾಹ್ನ ಸವಣೂರಿನ ವಿನಾಯಕ ಸಭಾಭವನದಲ್ಲಿ ಸಚಿವ ಎಸ್.ಅಂಗಾರ ಅಧ್ಯಕ್ಷತೆಯಲ್ಲಿ ಅಕ್ರಮ-ಸಕ್ರಮ ಸಮಿತಿ ಸಭೆ ನಡೆಯಲಿದೆ. ಸಭೆಯಲ್ಲಿ ಹಕ್ಕು ಪತ್ರ ವಿತರಣೆ, ಕಂದಾಯ ಇಲಾಖೆಗೆ ಸಂಬಂಧಿತ ವಿವಿಧ ವೈಯುಕ್ತಿಕ ಪಿಂಚಣಿ ಯೋಜನೆಗಳ ಮಂಜೂರಾತಿ ಪತ್ರ ವಿತರಣೆ,ಸುಳ್ಯ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಅರ್ಹ ಅಕ್ರಮ ಸರಕಾರಿ ಕೃಷಿ ಜಮೀನುಗಳ ಸಕ್ರಮಿಕರಣ ನಡೆಯಲಿದೆ.

ಸಾಲ ನೀಡದ್ದಕ್ಕೆ ಸಿಟ್ಟಿನಿಂದ ಬ್ಯಾಂಕ್ ಗೆ ಬೆಂಕಿ ಇಟ್ಟ ಭೂಪ !!

ಸಾಲ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಸಿಟ್ಟುಗೊಂಡ ವ್ಯಕ್ತಿಯೊಬ್ಬ ಪೆಟ್ರೋಲ್ ಸುರಿದು ಬ್ಯಾಂಕ್ ಗೆ ಬೆಂಕಿ ಹಚ್ಚಿದ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಹೆಡಿಗೊಂಡ ಗ್ರಾಮದಲ್ಲಿ ನಡೆದಿದೆ. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ನಿವಾಸಿ 33 ವರ್ಷದ ವಸೀಮ್ ಮುಲ್ಲಾ ಎಂಬಾತ ಬ್ಯಾಂಕ್ ಗೆ ಬೆಂಕಿ ಹಚ್ಚಿದ್ದು, ಪರಿಣಾಮ ರೂ.16 ಲಕ್ಷ ಮೌಲ್ಯ ಆಸ್ತಿ ಹಾನಿಗೊಳಗಾಗಿದ್ದು, ಅದೃಷ್ಟವಶಾತ್ ಯಾವುದೇ ನಗದು ಬೆಂಕಿಗಾಹುತಿಯಾಗಿಲ್ಲ ಎಂದು ತಿಳಿದುಬಂದಿದೆ. ಸಾಲಕ್ಕಾಗಿ ಆರೋಪಿ ವಸೀಮ್ ಅರ್ಜಿ ಸಲ್ಲಿಸಿದ್ದ. ಆದರೆ, ಮ್ಯಾನೇಜರ್ ಈ ಅರ್ಜಿಯನ್ನು ನಿರಾಕರಿಸಿದ್ದರು. …

ಸಾಲ ನೀಡದ್ದಕ್ಕೆ ಸಿಟ್ಟಿನಿಂದ ಬ್ಯಾಂಕ್ ಗೆ ಬೆಂಕಿ ಇಟ್ಟ ಭೂಪ !! Read More »

ಪರಿಸರಕ್ಕಾಗಿ ತಲೆಗೆ ತಲೆ ಕೊಡಲು ಸಿದ್ಧರಾಗಿರುವ ಬಿಷ್ಣೊಯ್ ಸಮುದಾಯದ ಬಗ್ಗೆ ನಿಮಗೆಷ್ಟು ಗೊತ್ತು ?|ಈ ಪ್ರಾಣಿ ಪ್ರೇಮಿಗಳ ಹಟದಿಂದಲೇ ಸಲ್ಮಾನ್ ಖಾನ್ ಕೃಷ್ಣ ಮೃಗ ಕೇಸಿನಲ್ಲಿ ಶಿಕ್ಷಿತನಾದದ್ದು..!!

2018 ರಲ್ಲಿ ಸಲ್ಮಾನ್ ಖಾನ್ ಗೆ ಕೃಷ್ಣ ಮೃಗ ಭೇಟೆ ಪ್ರಕರಣದಲ್ಲಿ ಐದು ವರ್ಷ ಶಿಕ್ಷೆ ಹಾಗೂ 2.50 ಲಕ್ಷ ಜುಲ್ಮಾನೆ ವಿಧಿಸಲಾಗಿದೆ. ಆದರೆ ಜೋಧ್ ಪುರದ ಸೆಷನ್ಸ್ ನ್ಯಾಯಾಲಯದ ಈ ಆದೇಶವನ್ನು ಸಲ್ಮಾನ್ ಖಾನ್ ಪ್ರಶ್ನೆ ಮಾಡಿದ್ದಾರೆ. ವಿಚಾರಣೆ ಇನ್ನೂ ಚಾಲ್ತಿಯಲ್ಲಿರುವುದರಿಂದ ಸಲ್ಮಾನ್ ಖಾನ್ ಈಗ ಆರಾಮವಾಗಿ ಹೊರಗಡೆ ಸುತ್ತಾಡಿಕೊಂಡಿದ್ದಾರೆ. 1998 ರಲ್ಲಿ ಕೃಷ್ಣಮೃಗ ಭೇಟೆಯಾಡಿದ ರಾಜಸ್ಥಾನದ ಜೋದ್ ಪುರದ ಸ್ಥಳದಲ್ಲಿಯೇ ಬಿಶ್ಣೋಯ್ ಸಮುದಾಯದವರು ಕೃಷ್ಣಮೃಗದ ಸ್ಮಾರಕ ನಿರ್ಮಾಣ ಮಾಡಲಿದ್ದು, ಇದರ ಜೊತೆಗೆ ಗಾಯಗೊಂಡ ಪ್ರಾಣಿಗಳ …

ಪರಿಸರಕ್ಕಾಗಿ ತಲೆಗೆ ತಲೆ ಕೊಡಲು ಸಿದ್ಧರಾಗಿರುವ ಬಿಷ್ಣೊಯ್ ಸಮುದಾಯದ ಬಗ್ಗೆ ನಿಮಗೆಷ್ಟು ಗೊತ್ತು ?|ಈ ಪ್ರಾಣಿ ಪ್ರೇಮಿಗಳ ಹಟದಿಂದಲೇ ಸಲ್ಮಾನ್ ಖಾನ್ ಕೃಷ್ಣ ಮೃಗ ಕೇಸಿನಲ್ಲಿ ಶಿಕ್ಷಿತನಾದದ್ದು..!! Read More »

ತಂದೆ ಬೈದರೆಂಬ ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ತನ್ನನ್ನು ತಾನೇ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಮಗ

ಸಾಮಾನ್ಯವಾಗಿ ಹೆತ್ತವರು ತಮ್ಮ ಮಕ್ಕಳಿಗೆ ಬುದ್ಧಿ ಮಾತು ಹೇಳುವುದು ಸಹಜ. ಆದರೆ ಇಂದಿನ ಕಾಲಘಟ್ಟಕ್ಕೆ ಹೋಲಿಸಿದರೆ ಅದು ದೊಡ್ಡ ತಪ್ಪು ಎಂದೇ ಹೇಳಬಹುದು. ಒಳ್ಳೆಯ ರೀತಿಲಿ ಮಕ್ಕಳು ಬೆಳೆಯಲಿ ಎಂಬ ತಂದೆ-ತಾಯಿಯ ಆಶಯ ಅದೆಷ್ಟೋ ಮಕ್ಕಳಿಗೆ ತೊಂದರೆ ನೀಡಿದ್ದು ಉಂಟು. ಇದೀಗ ಅಂತಹುದೇ ಘಟನೆ ಬೆಂಗಳೂರಿನ ಜೆ.ಜೆ ನಗರದಲ್ಲಿ ನಡೆದಿದೆ. ಹೌದು. 23 ವರ್ಷದ ಯುವಕ,ಅತಿಯಾಗಿ ಟಿವಿ ನೋಡಬೇಡ ಎಂದು ತಂದೆ ಬುದ್ದಿ ಹೇಳಿದಕ್ಕೆ ದುಡುಕಿನ ನಿರ್ಧಾರ ತೆಗೆದುಕೊಂಡು ಬಾರದ ಲೋಕಕ್ಕೆ ಹೋಗಿದ್ದು,ಪೋಷಕರ ಅಳಲು ಮುಗಿಲು ಮುಟ್ಟಿದೆ.ಆತ್ಮಹತ್ಯೆ …

ತಂದೆ ಬೈದರೆಂಬ ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ತನ್ನನ್ನು ತಾನೇ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಮಗ Read More »

ಆನ್ಲೈನ್ ಸಾಲ ಪಡೆದುಕೊಂಡ ಮುಲ್ಕಿ ಮೂಲದ ಯುವಕ ನೇಣಿಗೆ ಶರಣು!! ಡೆತ್ ನೋಟ್ ನಲ್ಲಿತ್ತು ಸಾಲಬಾಧೆಯ ವಿವರ

ಆನ್ಲೈನ್ ಸಾಲ ಪಡೆದುಕೊಂಡಿದ್ದ ಯುವಕನೋರ್ವ ಸಾಲ ತೀರಿಸಲು ಆಗದೆ ಮನನೊಂದು ತಾನು ಕೆಲಸ ಮಾಡುತ್ತಿರುವ ಕಚೇರಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ಯುವಕನನ್ನು ಮುಲ್ಕಿ ಸಮೀಪದ ಪಕ್ಷಿಕೆರೆ ನಿವಾಸಿ ಸುಶಾಂತ್(26) ಎಂದು ಗುರುತಿಸಲಾಗಿದ್ದು, ಸಾಲದ ಬಾಧೆಯಿಂದ ಬೇಸತ್ತು ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ಕಳೆದ ಕೆಲ ದಿನಗಳ ಹಿಂದೆ ಉಡುಪಿಯಲ್ಲಿ ಇಂತಹದೇ ಪ್ರಕರಣವೊಂದರಲ್ಲಿ ಯುವಕನೋರ್ವ ನೇಣುಬಿಗಿದುಕೊಂಡ ಘಟನೆ ಮಾಸುವ ಮುನ್ನವೇ ದಕ್ಷಿಣ …

ಆನ್ಲೈನ್ ಸಾಲ ಪಡೆದುಕೊಂಡ ಮುಲ್ಕಿ ಮೂಲದ ಯುವಕ ನೇಣಿಗೆ ಶರಣು!! ಡೆತ್ ನೋಟ್ ನಲ್ಲಿತ್ತು ಸಾಲಬಾಧೆಯ ವಿವರ Read More »

error: Content is protected !!
Scroll to Top