ಬೆಂಗಳೂರಿನಲ್ಲಿ ಭೀಕರ ಅಪಘಾತ: ಕಾರು, ಬೈಕ್ ಮೇಲೆ ಜಲ್ಲಿ ತುಂಬಿದ
ಟಿಪ್ಪರ್ ಬಿದ್ದು ಆರು ಮಂದಿ ಸಾವು

ಬೆಂಗಳೂರು : ಬೆಂಗಳೂರಿನ ಕುಂಬಳಗೂಡು ಬಳಿ ಭೀಕರ ಅಪಘಾತ ಸಂಭವಿಸಿದೆ‌. ಎರಡು ಕಾರು ಮತ್ತು ಬೈಕ್ ಮೇಲೆ ಟಿಪ್ಪರ್ ಬಿದ್ದು ಆರು ಮಂದಿ ಮೃತ ಪಟ್ಟಿದ್ದಾರೆ.

ಎರಡು ಕಾರುಗಳಲ್ಲಿ ತಲಾ 5 ಜನರಂತೆ 10 ಜನರಿದ್ದರು.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಟಿಪ್ಪರ್ ನಡಿ ಇನ್ನೂ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಜಲ್ಲಿ ಸಾಗಿಸುತ್ತಿದ್ದ ಟಿಪ್ಪರ್ ಪಕ್ಕದಲ್ಲೇ ಸಂಚರಿಸುತ್ತಿದ್ದ ವಾಹನಗಳ ಮೇಲೆ ಪಲ್ಟಿಯಾಗಿದೆ.

ಬೈಕ್ ಸವಾರ ಸೇರಿದಂತೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಸ್ಥಳಕ್ಕೆ ಪೊಲೀಸ್ ದೌಡಾಯಿಸಿದ್ದಾರೆ.

ಕೆಂಗೇರಿಯಿಂದ ಬಿಡದಿ ಮಾರ್ಗ ಮಧ್ಯೆ ಬರುವ ಕುಂಬಳಗೋಡು ಸಮೀಪದ ಕಣಿಮಿಣಿಕೆ ಬಳಿ ಈ ಅಪಘಾತ ಸಂಭವಿಸಿದೆ.

ಒಂದು ಕಾರಿ‌ನಲ್ಲಿದ್ದ ನಾಲ್ವರು, ಇನ್ನೊಂದು ಕಾರಿನಲ್ಲಿದ್ದ ಒಬ್ಬರು ಹಾಗೂ ಬೈಕ್ ನಲ್ಲಿದ್ದ ಇನ್ನೊಬ್ಬರು ಒಟ್ಟು ಸೇರಿ ಆರು ಮಂದಿ ಮೃತಪಟ್ಟಿದ್ದಾರೆ‌

ಕೆಎ 02 ಎಂಎಂ 7749 ನಂಬರಿನ ಕಾರಿನಲ್ಲಿ ಇದ್ದ ವೀಣಮ್ಮ ( 42), ಇಂದ್ರಕುಮಾರ್ ( 14), ಕೀರ್ತಿಕುಮಾರ್ ( 40), ನಿಖಿತಾ ರಾಣಿ ( 29) ಮೃತಪಟ್ಟಿದ್ದು, ಈ ನಾಲ್ವರೂ ಮಾಗಡಿ ಮೂಲದವರು.

ಇನ್ನೊಂದು ಕಾರು ಕೆಎ‌ 05 ಎಂಜೆ 9924 ಈ ಕಾರಿನಲ್ಲಿದ್ದ ಟೊಯೊಟಾ ಕಂಪನಿಯ ನೌಕರ ಟಿ.ಜೆ.ಶಿವಪ್ರಕಾಶ್ ಸಾವಿಗೀಡಾಗಿದ್ದಾರೆ. ಬೈಕ್ ನಲ್ಲಿದ್ದ ಜಿತಿನ್ ಬಿ ಜಾರ್ಜ್ ಎಂಬಾತ ಸ್ಥಳದಲ್ಲೇ ಮೃತರಾಗಿದ್ದಾರೆ.

ಈ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿದ್ದು, ವೇಗವಾಗಿ ಬಂದ ಲಾರಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅಪಘಾತದಿಂದಾಗಿ ಇಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕುಂಬಳಗೋಡು ಪೊಲೀಸರು ಸ್ಥಳಕ್ಕೆ ಆಗಮಿಸಿ ಅಗತ್ಯ ಕ್ರಮ ಕೈಗೊಂಡಿದ್ದಾರೆ.

error: Content is protected !!
Scroll to Top
%d bloggers like this: