ತನ್ನ ಮಗಳ ವಿವಾಹದೊಂದಿಗೆ ಎರಡು ಬಡ ಹೆಣ್ಣು ಮಕ್ಕಳ ವಿವಾಹಕ್ಕೆ ಆಸರೆಯಾದ ಬೆಳ್ಳಾರೆಯ ಅಬ್ಬಚ್ಚ|
ವಿವಾಹ ಸಮಾರಂಭದಲ್ಲಿ ಹರೇಕಳ ಹಾಜಬ್ಬರಿಗೆ ಸಮ್ಮಾನ ಕಾರ್ಯಕ್ರಮ

ಬೆಳ್ಳಾರೆಯ ಪ್ರಸಿದ್ಧ ಉದ್ಯಮಿ ಕೊಡುಗೈ ದಾನಿ ಪ್ರಗತಿ ಎಂಟರ್ ಪ್ರೈಸಸ್ ಮಾಲಕ ಅಬ್ದುಲ್ ಖಾದರ್ ಹಾಜಿ ಬಯಂಬಾಡಿ (ಅಬ್ಬಚ್ಚ) ಇವರ ಮಗಳು ಮಿಸ್ಹಾಬಳ ವಿವಾಹವು ಕಾಸರಗೋಡು ತಾಲೂಕು ಅಂಗಡಿಮೊಗರು ಕೊಟುದಲ್ ಹೌಸ್ ಕೆ.ಎಸ್ ಅಬ್ಬಾಸ್ ರವರ ಪುತ್ರ ಸನಿದ್ ರವರೊಂದಿಗೆ ಡಿ.30 ರಂದು ನಡೆಯಿತು. ಈ ವಿವಾಹ ಸಮಾರಂಭದ ದಿನದಂದು ಸಾಮೂಹಿಕ ವಿವಾಹ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.

ಎರಡು ಬಡಕುಟುಂಬವಾದ ಬೆಳ್ಳಾರೆ ಗ್ರಾಮದ ತಡಗಜೆ ನಿವಾಸಿ ದಿ l ಮಹಮ್ಮದ್ ಎಂಬವರ ಪುತ್ರ ಸುಲೈಮಾನ್ ಹಾಗೂ ಕೆಯ್ಯೂರು ಉಸ್ಮಾನ್ ರವರ ಪುತ್ರಿ ಆಯಿಷತ್ ಮುರ್ಷಿದಾ ರೊಂದಿಗೆ ಇನ್ನೊಂದು ಜೋಡಿಯಾದ ತ್ರಿಶೂರ್ ನಿವಾಸಿ ಅಲೀಂ ಎಂಬವರ ಪುತ್ರ ಆಶಿಕ್ ರವರೊಂದಿಗೆ ಹಾಗೂಬೆಳ್ಳಾರೆ ಗ್ರಾಮದ ತಡಗಜೆ ನಿವಾಸಿ ದಿlಮಹಮ್ಮದ್ ಎಂಬವರ ಪುತ್ರಿ ವ ರವರ ವಿವಾಹ ನಡೆಸಿಕೊಟ್ಟರು. ವಿವಾಹ ಸಮಾರಂಭದ ಅತಿಥಿ ಸತ್ಕಾರ ಕಾರ್ಯಕ್ರಮವು ಜ.2 ರಂದು ಬೆಳ್ಳಾರೆ ಮಿಹ್ ರಾಜ್ ಮಂಝಿಲ್ ನಲ್ಲಿ ‌ನಡೆಯಿತು.

ಸಾಮೂಹಿಕ ವಿವಾಹ ಹಾಗೂ ಸನ್ಮಾನ ಕಾರ್ಯಕ್ರಮದ ಉಸ್ತುವಾರಿಯನ್ನು ಬೆಳ್ಳಾರೆ ಯ ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ (ರಿ) ಹಾಗೂ ಎಸ್ಕೆ ಎಸ್ ಎಸ್ ಎಫ್ ಬೆಳ್ಳಾರೆ ವಹಿಸಿಕ್ಕೊಂಡಿತು. ಇದೇ ಸಂದರ್ಭದಲ್ಲಿ ಹರೇಕಳ ಹಾಜಬ್ಬರಿಗೆ ಸನ್ಮಾನ ಕಾರ್ಯಕ್ರಮ ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ (ರಿ) ಹಾಗೂ ಎಸ್ಕೆ ಎಸ್ ಎಸ್ ಎಫ್ ಬೆಳ್ಳಾರೆ ಇದರ ಸಹಕಾರದೊಂದಿಗೆ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರನ್ನು ಸನ್ಮಾನಿಸಲಾಯಿತು.
ಸನ್ಮಾನವನ್ನು ಝೈನುಲ್ ಆಬಿದೀನ್ ತಂಙಳ್ ದುಗಲಡ್ಕ ನೆರವೇರಿಸಿದರು.

ಈ ಸಂದರ್ಭದಲ್ಲಿ ಟ್ರಸ್ಟಿಯ ಅಧ್ಯಕ್ಷ ರು, ಪದಾಧಿಕಾರಿಗಳು ಸದಸ್ಯರು ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Leave A Reply

Your email address will not be published.