ನಾಗಮಂಗಲ: ಕಾರು ಹಾಗೂ ಬಸ್ ನಡುವೆ ಭೀಕರ ಅಪಘಾತ. ಕಾರಿನಲ್ಲಿದ್ದ ನವದಂಪತಿ ಸೇರಿ ಮೂವರು ದಾರುಣ ಸಾವು

ನಾಗಮಂಗಲ: ಕಾರು ಹಾಗೂ ಬಸ್ ನಡುವೆ ಭೀಕರ ಅಪಘಾತ. ಕಾರಿನಲ್ಲಿದ್ದ ನವದಂಪತಿ ಸೇರಿ ಮೂವರು ದಾರುಣ ಸಾವು

.ಖಾಸಗಿ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮವಾಗಿ ನವದಂಪತಿ ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಾಗಮಂಗಲ ತಾಲೂಕಿನ ಹೊಣಕೆರೆ ಹೋಬಳಿಯ ಕಂಪನ ಕೊಪ್ಪಲು ಗೇಟ್ ಸಮೀಪದ ಚಾಮರಾಜ-ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಸೋಮವಾರ ಪೇಟೆ ಮೂಲದ ಸುದೀಪ್ (35), ಶ್ರೀಜಾ (30) ಹಾಗೂ ಸಂಗಮ್ಮ (55) ಮೃತಪಟ್ಟ ದುರ್ದೈವಿಗಳು.

ಕಾರಿನಲ್ಲಿದ್ದ ಇನ್ನೊಬ್ಬ ಯುವತಿಗೆ ಗಂಭೀರ ಗಾಯವಾಗಿದ್ದು ಬಿಜಿ ನಗರದ ಏ ಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಬಸ್ಸಿನಲ್ಲಿ ಇದ್ದ ಚಾಲಕ ಸೇರಿದಂತೆ ನಾಲ್ವರಿಗೆ ಗಾಯಗಳಾಗಿವೆ.

ಬೆಂಗಳೂರಿನ ಬ್ಯಾಂಕೊಂದರಲ್ಲಿ ಸುದೀಪ್ ಮ್ಯಾನೇಜರ್ ಆಗಿದ್ದ. ಸುದೀಪ್ ಹಾಗೂ ಶ್ರೀಜಾ ಡಿಸೆಂಬರ್ 11ರಂದು ವಿವಾಹವಾಗಿದ್ದರು. ಆದರೆ ಮದುವೆಯಾಗಿ ಒಂದು ತಿಂಗಳು ಆಗುವ ಮೊದಲೇ ಅಪಘಾತದಲ್ಲಿ ಮೃತರಾಗಿದ್ದಾರೆ.

ಕಾರಿನಲ್ಲಿದ್ದವರು ಶ್ರೀ ಆದಿಚುಂಚನಗಿರಿ ಕ್ಷೇತ್ರದಲ್ಲಿ ಅಮಾವಾಸ್ಯೆ ಪೂಜೆ ಮುಗಿಸಿ ಬಾನುವಾರ ಮೈಸೂರು ಮಾರ್ಗವಾಗಿ ಬೆಂಗಳೂರಿಗೆ ಬರುವಾಗ ಜರಣಕಟ್ಟೆ ತಿರುವಿನಲ್ಲಿರುವ ಕೆಂಪನ ಕೊಪ್ಪಲು ಗೇಟ್ ಬಳಿ ಎದುರಾದ ಬಸ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.

ಅತಿ ವೇಗವಾದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಸ್ಥಳದಲ್ಲೇ ಮೃತಪಟ್ಟ ಮೂವರನ್ನು ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Leave A Reply

Your email address will not be published.