ಸುಳ್ಯ : ನಾಪತ್ತೆಯಾದ ವ್ಯಕ್ತಿಯೊಬ್ಬರ ಮೃತದೇಹವು ಬಾವಿಯಲ್ಲಿ ಪತ್ತೆಯಾದ ಘಟನೆ ಐವರ್ನಾಡು ಗ್ರಾಮದ ಬಾಂಜಿಕೋಡಿಯಲ್ಲಿ ನಡೆದಿದೆ.
ಬಾಂಜಿಕೋಡಿ ನಿವಾಸಿ ದಿ.ಮಾಧವ ಎಂಬವರ ಪುತ್ರ ಅರುಣ್ ಕುಮಾರ್ ಡಿ.31 ರಿಂದ ಮನೆಯಿಂದ ಕಾಣೆಯಾಗಿದ್ದರೆನ್ನಲಾಗಿದೆ.

ಎರಡು ದಿನಗಳಿಂದ ಸ್ಥಳೀಯರು ಮತ್ತು ಕುಟುಂಬಸ್ಥರು ಇವರನ್ನು ಹುಡುಕಾಟದಲ್ಲಿ ತೊಡಗಿಕೊಂಡಿದ್ದರು. ಆದಿತ್ಯವಾರ ಮುಂಜಾನೆ ರವಿಕುಮಾರ್ ಎಂಬವರ ಮನೆಯ ಮುಂಭಾಗದಲ್ಲಿರುವ ಬಾವಿಯಲ್ಲಿ ಇವರ ಮೃತದೇಹ ಪತ್ತೆಯಾಗಿದೆ.
ಅರುಣ್ ಕುಮಾರ್ ಅವರು ಉಪ್ಪಿನಂಗಡಿಯಲ್ಲಿ ಫ್ಯಾಕ್ಟರಿಯೊಂದರಲ್ಲಿ ಮಾಸ್ಟರ್ ಪ್ಲಾನ್ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ಮೃತ ಅರುಣ್ ಕುಮಾರ್ ತಾಯಿ ವಿಮಲಾ ಪತ್ನಿ ವನಜ ಅವರನ್ನು ಅಗಲಿದ್ದಾರೆ.
You must log in to post a comment.