ನೈಟ್ ಕರ್ಫ್ಯೂ ನಲ್ಲಿ ಕುಡಿದ ಮತ್ತಿನಲ್ಲಿ ಬ್ರಿಗೇಡ್ ರೋಡ್ ನಲ್ಲಿ ಬಿಗ್‍ಬಾಸ್ ಸ್ಪರ್ಧಿ ದಿವ್ಯಾ ಸುರೇಶ್ ರಂಪಾಟ

ಬೆಂಗಳೂರು: ಬಿಗ್‍ಬಾಸ್ ಸೀಸನ್ 8ರಲ್ಲಿ ಸ್ಪರ್ಧಿಯಾಗಿದ್ದ ದಿವ್ಯ ಸುರೇಶ್ ಬ್ರಿಗೇಡ್ ರೋಡ್‍ನಲ್ಲಿ ರೋಡ್ ರಂಪಾಟ ಮಾಡಿದ ಘಟನೆ ನೈಟ್ ಕರ್ಫ್ಯೂ ಮೊದಲ ರಾತ್ರಿಯಲ್ಲಿ ನಡೆದಿದೆ.

ನಿನ್ನೆ ರಾತ್ರಿ ಬ್ರಿಗೇಡ್ ರೋಡ್‍ನಲ್ಲಿ ಸ್ನೇಹಿತರೊಂದಿಗಿದ್ದ ದಿವ್ಯ ಸುರೇಶ್ ಕುಡಿದ ಅಮಲಿನಲ್ಲಿ ಕಿರಿಕ್ ಶುರು ಮಾಡಿದ್ದಾಳೆ. ಈ ವೇಳೆ ಸ್ಥಳಕ್ಕೆ ಪೊಲೀಸರು ಮತ್ತು ಮಾಧ್ಯಮಗಳು ಬರುತ್ತಿದ್ದಂತೆ ಕ್ಯಾಮೆರಾ ಕಂಡು ದಿವ್ಯ ಸುರೇಶ್ ಕಾಲ್ಕಿತ್ತಿದ್ದಾರೆ. ಈ ಮಧ್ಯೆ ಕೆಲ ಮಾದ್ಯಮದ ಕ್ಯಾಮರಾಕ್ಕೆ ಕೈ ಹಾಕಿದ್ದರು ಎಂದು ದೂರಲಾಗಿದೆ.

ಪೊಲೀಸರು ದಿವ್ಯ ಸುರೇಶ್ ಜೊತೆ ಮಾತನಾಡುತ್ತಿದ್ದಂತೆ ಮಾಧ್ಯಮಗಳು ಕೂಡ ಸ್ಥಳಕ್ಕೆ ಧಾವಿಸಿದೆ. ಈ ವೇಳೆ ದಿವ್ಯ ಸುರೇಶ್ ಮತ್ತು ಆಕೆಯ ಸ್ನೇಹಿತರು ಕರ್ಫ್ಯೂ ಇದ್ದರೂ ಸುತ್ತಾಟ ಕ್ಕೆ ನಿಂತಿದ್ದರು. ಪೋಲೀಸರು ಗದರಿದ ಮೇಲೆ ಕೂಡಾ ಅಲ್ಲೇ ನಿಂತಿದ್ದರು. ಆದರೆ ನಂತರ ಕ್ಯಾಮೆರಾಗಳ ದಂಡು ಕಂಡು ಆಟೋ ಹತ್ತಿ ಜಾಗ ಖಾಲಿ ಮಾಡಿದ್ದಾರೆ.

ಬಿಗ್‍ಬಾಸ್ ಕನ್ನಡ ಸೀಸನ್ 8ರಲ್ಲಿ 6ನೇ ಸ್ಥಾನ ಪಡೆದುಕೊಂಡು ಮನೆಯಿಂದ ಹೊರ ಬಂದ ದಿವ್ಯಾ ಸುರೇಶ್ ಅವರು ಟಾಸ್ಕ್‌ಗಳಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕವೇ ಹೆಚ್ಚು ಜನಪ್ರಿಯವಾಗಿದ್ದರು.
ಬಹುತೇಕ ಜಿಲ್ಲೆಗಳಲ್ಲಿ ಮೊದಲ ದಿನದ ನೈಟ್ ಕರ್ಪ್ಯೂ ಶಾಂತಿಯುತವಾಗಿ ಆರಂಭಗೊಂಡಿದ್ದು, ಎಲ್ಲೆಡೆಯೂ ಪೊಲೀಸರು ಪರಿಶೀಲನೆಯಲ್ಲಿ ತೊಡಗಿದ್ದಾರೆ. ಮೈಸೂರಿನಲ್ಲಿ ಕಮೀಷನರ್ ಚಂದ್ರಗುಪ್ತ್ ಅಶ್ವಪಡೆಯ ಜೊತೆ ಸ್ವತಃ ಅಶ್ವಾರೋಹಿಯಾಗಿ ಬಂದು ನೈಟ್ ಕರ್ಪ್ಯೂ ಮೇಲ್ವಿಚಾರಣೆ ನಡೆಸಿದರು. ಬೆಂಗಳೂರಿನಲ್ಲಿ ಮೇಲ್ಸೇತುವೆ ಬಂದ್ ಮಾಡಿರಲಿಲ್ಲ, ಹಾಗಾಗಿ ಮಾಮೂಲಾಗಿ ವಾಹನಗಳ ಓಡಾಟ ಕಂಡುಬಂತು.

Leave A Reply

Your email address will not be published.