ಓಮಿಕ್ರಾನ್ ಅಬ್ಬರಕ್ಕೆ ಬಟ್ಟೆ ಮಾಸ್ಕ್ ಸೇಫ್ ಅಲ್ಲ !

ವಿಶ್ವದಾದ್ಯಂತೆ ಓಮಿಕ್ರಾನ್ ವೈರಸ್ ಆರ್ಭಟಿಸುತ್ತಿದೆ. ಓಮಿಕ್ರಾನ್ ನಿಂದ ರಕ್ಷಣೆ ಪಡೆಯೋ ಸಂಬಂಧ ಅನೇಕರು ಈ ಹಿಂದೆ ಬಳಕೆ ಮಾಡಲಾಗುತ್ತಿದ್ದಂತ ಬಟ್ಟೆ ಮಾಸ್ಕ್‌ಗಳನ್ನೇ ಮುಖವಾಡಗಳಾಗಿ ಧರಿಸೋದಕ್ಕೆ ಮುಂದುವರೆಸಿದ್ದಾರೆ. ಆದೇ ಬಟ್ಟೆ ಮಾಸ್ಕ್ ಬಳಸುವ ಜನರಿಗೆ ತಜ್ಞರು ಶಾಕಿಂಗ್ ಮಾಹಿತಿಯನ್ನು ನೀಡಿದ್ದಾರೆ.

ರೂಪಾಂತರಿ ಓಮಿಕ್ರಾನ್ ವೈರಸ್ ಭೀತಿಯ ನಡುವೆಯೂ ಬಟ್ಟೆ ಮಾಸ್ಕ್ ಎಷ್ಟು ಸೇಫ್ ಎನ್ನುವ ಕುರಿತಂತೆ ಕೊಲಂಬಿಯಾ ವಿಶ್ವವಿದ್ಯಾಲಯದ ವೈರಾಲಜಿಸ್ಟ್ ಪ್ರೊಫೆಸರ್ ಡಾ.ಡೇವಿಡ್ ಹೋ ಎನ್ನುವವರು ಅಧ್ಯಯನ ನಡೆಸಿದ್ದು, ಅವರ ಅಧ್ಯಯನದ ಮಾಹಿತಿಯಂತೆ ಬಟ್ಟೆ ಮಾಸ್ಕ್ ಅಷ್ಟು ಸು ಸುರಕ್ಷಿತವಲ್ಲ. ಎಂಬುದಾಗಿ ಪಟ್ಟಿದ್ದಾರೆ.

ಬಟ್ಟೆ ಮಾಸ್ಕ್ ಓಮಿಕ್ರಾನ್ ವೈರಸ್‌ಗೆ ಅಷ್ಟು ಪರಿಣಾಮಕಾರಿಯಲ್ಲ. ಓಮಿಕ್ರಾನ್ ರೂಪಾಂತರಿಯೂ ಡೆಲ್ಟಾ ರೂಪಾಂತರಕ್ಕಿಂತ ಸುಮಾರು ಎರಡು ಪಟ್ಟು ಸಾಂಕ್ರಾಮಿಕವಾಗಿದೆ. ಈ ವೈರಸ್ ತಡೆಗೆ ಕಡ್ಡಾಯವಾಗಿ ಸರ್ಜಿಕಲ್ ಮಾಸ್ಕ್ ಇಲ್ಲವೇ, ಎನ್.95 ಮಾಸ್ಕ್ ಬಳಸೋದು ಉತ್ತಮ, ಅಷ್ಟೇ ಪರಿಣಾಮಕಾರಿಯಾಗಿ ನಿಮ್ಮನ್ನು ರೋಗದಿಂದ ರಕ್ಷಣೆ ಮಾಡಲಿದೆ ಎಂಬುದಾಗಿ ತಿಳಿಸಿದ್ದಾರೆ.

Leave A Reply

Your email address will not be published.