ಮದುವೆ ವಿಚಾರದಲ್ಲಿ ಪ್ರಧಾನಿಗೆ ಪತ್ರ ಬರೆದ ಮದುಮಗಳು!

ಹೆಚ್ಚುತ್ತಿರುವ ಓಮಿಕ್ರಾನ್ ಪ್ರಕರಣಗಳಿಂದಾಗಿ ರಕ್ಷಿಸಿಕೊಳ್ಳಲು ಹಲವು ದೇಶಗಳು ಕೆಲವು ಕಾನೂನು ನಿರ್ಬಂಧಗಳನ್ನು ಹೊರಡಿಸಿದೆ. ಸೋಂಕು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿವೆ.

ಸೋಂಕು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿವೆ. ಬ್ರಿಟಿಷ್ ಸರ್ಕಾರ ಕೂಡ ಲಾಕ್‌ಡೌನ್’ ಹೇರಲು ಯೋಜನೆ ಹಾಕಿಕೊಂಡಡಿದೆ. ಏತನ್ಮಧ್ಯೆ, ಬ್ರಿಟನ್‌ನಲ್ಲಿ ಯುವತಿಯೊಬ್ಬಳು ತನ್ನ ದೇಶದ ಪ್ರಧಾನಿ ಬೋರಿಸ್ ಜಾನ್ಸನ್‌ಗೆ ತನ್ನ ವಿವಾಹದ ಕುರಿತಾಗಿ ಪತ್ರವೊಂದನ್ನು ಬರೆದಿದ್ದು, ಆ ಪತ್ರ ವೈರಲ್ ಆಗಿದೆ.

ಯುವತಿ ಪ್ರಧಾನಿಗೆ ಬರೆದ ಪತ್ರದಲ್ಲಿ ನನ್ನ ಮದುವೆ ಮೂರನೇ ಬಾರಿಗೆ ಮುಂದೂಡಬೇಕಾದ ಪ್ರಸಂಗ ಎದುರಾಗಿದೆ ಎಂದು ಹೇಳಿದ್ದಾಳೆ. ಜೊತೆಗೆ ಪತ್ರದಲ್ಲಿ ಕಾರಣವನ್ನೂ ನೀಡಿದ್ದಾಳೆ.

ಪ್ರಧಾನಿಗೆ ಪತ್ರ ಬರೆದ ಹುಡುಗಿಯ ಹೆಸರು ಕ್ಯಾಟ್. ಇದೇ ತಿಂಗಳ 30 ರಂದು ಈಕೆಗೆ ಮದುವೆ ನಿಶ್ಚಯವಾಗಿತ್ತು. ಕೊರೋನಾ ನಿರ್ಬಂಧದಿಂದಾಗಿ ಕ್ಯಾಟ್ ಆಕೆಯ ಮದುವೆಯನ್ನು ಈ ಹಿಂದೆ ಮುಂದೂಡಿದ್ದರಿಂದ ಮೂರನೇ ಎರಡು ಬಾರಿ ಬಾರಿಗೆ ಮದುವೆಯ ದಿನಾಂಕವನ್ನು ನಿಗದಿಪಡಿಸಿದ್ದಳು.

ಈಗ ಆಕೆಯ ವಿವಾಹ ಹತ್ತಿರವಾಗುತ್ತಿದ್ದಂತೆ ಓಮಿಕ್ರಾನ್ ಭೀತಿ ಶುರುವಾಗಿದೆ. ಜೊತೆಗೆ ಕಾನೂನು ಮತ್ತು ನಿರ್ಬಂಧಗಳನ್ನು ಆಕೆ ಎದುರಿಸಬೇಕಾದ ಪರಿಸ್ಥಿತಿ ಪಚ ಸು ಒದಗಿಸಿದೆ. ಕೊನೆಯ ಕ್ಷಣದಲ್ಲಿ ನಿರ್ಬಂಧಗಳನ್ನು ಹಾಕುವ ಮೂಲಕ ಸರ್ಕಾರವು ನನ್ನ ಮದುವೆಗೆ ಅಡ್ಡಿ ಪಡಿಸುತ್ತಿದೆ ಎಂದು ಪತ್ರದಲ್ಲಿ ಹೇಳಿದ್ದಾಳೆ.

ಇದರಿಂದ ಬಹಳಷ್ಟು ಹಣ ವ್ಯರ್ಥವಾಗುತ್ತದೆ. ನಾನು ಮೂರನೇ ಬಾರಿಗೆ ನನ್ನ ಮದುವೆಯನ್ನು ಮುಂದೂಡಬೇಕೆ ? ನೀವೆ ಹೇಳಿ ಎಂದಿದ್ದಾಳೆ.

Leave A Reply