ರಾಜ್ಯದ ಹಲವು ಜಿಲ್ಲೆಗಳಲ್ಲಿ ದಾಖಲಾಯಿತು ಕಡಿಮೆ ತಾಪಮಾನ | ಚಳಿ ಚಳಿ ತಾಳೆನು ಈ ಚಳಿಯಾ…

ಬೆಂಗಳೂರು : ರಾಜ್ಯ ಮತ್ತೆ ಚಳಿಯ ದಿನಗಳಿಗೆ ಮರಳಿದೆ. ಮೈಕೊರೆಯುವ ಚಳಿಗೆ ಜನರು ಗಡಗಡ ನಡುಗುತ್ತಿದ್ದಾರೆ. ಮಂಜು ಮುಸುಕಿದ ವಾತಾವರಣ ಕಚಗುಳಿ ಇಡುತ್ತಿದ್ದು ಹಾಸಿಗೆಯಿಂದ ಮೇಲೇಳಲು ಕಷ್ಟ ಪಡುವ ಪರಿಸ್ಥಿತಿ ಎದುರಾಗಿದೆ.

ಈ ದಿನಗಳು ಲೇಟಾಗಿ ಏಳುವ ಸಮಯ. ಎದ್ದು ಬಿಸಿಬಿಸಿ ಕಾಫಿ ಗಾಗಿ ಕಾಯುತ್ತಾ, ಹಲ್ಲು ಕಡಿಯುತ್ತಾ, ಕಾಯುವ ಚಳಿ ರಾಜ್ಯದಲ್ಲಿ ಕಾಣಿಸಿಕೊಂಡಿದೆ. ಬೆಂಗಳೂರಿನಲ್ಲಿ ಈಗ ವಾಕಿಂಗ್ ಮಾಡೋರು ತೀರಾ ವಿರಳ. ಅಲ್ಲೊಬ್ಬರು ಇಲ್ಲೊಬ್ಬರು ತಿರುಗುತ್ತಿದ್ದರೂ ಮೈತುಂಬಾ ಸ್ವೆಟರ್, ಜರ್ಕಿನ್ ಹೇರಿಕೊಂಡು ಕಣ್ಣು ಮಾತ್ರ ಕಾಣುವಂತೆ ತಿರುಗುತ್ತಿದ್ದಾರೆ.

ರಾಜ್ಯದ ಒಳನಾಡು, ಘಟ್ಟ ಪ್ರದೇಶ ಹಾಗೂ ಬೆಂಗಳೂರು ಸುತ್ತಮುತ್ತ ಕನಿಷ್ಠ ತಾಪಮಾನ ದಾಖಲಾಗಿದೆ. ಧಾರವಾಡದಲ್ಲಿ 9.4, ಬಾಗಲಕೋಟೆ 10.2, ಬಳ್ಳಾರಿ 10.7, ಬೀದರ್ 10.5, ವಿಜಯಪುರ 10.2 ಮತ್ತು ಬೆಂಗಳೂರು ಸುತ್ತಮುತ್ತ 10-12 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದರಿಂದಾಗಿ ಈ ಜಿಲ್ಲೆಗಳಲ್ಲಿ ತುಸು ಹೆಚ್ಚು ಚಳಿ ಕಾಣಿಸಿಕೊಂಡಿದೆ.

ರಾಜ್ಯದ ಘಟ್ಟ ಪ್ರದೇಶಗಳಲ್ಲಿ 8-12ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆಯಿದೆ. ವಾತಾವರಣ ಉಷ್ಣಾಂಶದ ಇಳಿಕೆಯ ಅವಧಿ ಸಾಮಾನ್ಯ ವರ್ಷಗಳಲ್ಲಿ 40-45 ದಿನಗಳು ಇರುತ್ತವೆ. ಆದರೆ, ಈ ಬಾರಿ 16 ದಿನಗಳು ಇರಲಿವೆ.

Leave A Reply

Your email address will not be published.