ಒಂದೇ ದಿನ ಬರೋಬ್ಬರಿ 10 ಕೋವಿಡ್ 19 ಲಸಿಕೆಗಳನ್ನು ಪಡೆದುಕೊಂಡ ಭೂಪ !! |ಅಷ್ಟಕ್ಕೂ ಆತ ಈ ರೀತಿ ಮಾಡಲು ಕಾರಣ??

ಕೋವಿಡ್-19 ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಲಸಿಕೆಗಳನ್ನು ಪಡೆಯಲು ಪ್ರಪಂಚದಾದ್ಯಂತ ಸೂಚನೆ ನೀಡಲಾಗುತ್ತಿದೆ.ಎರಡು ಡೋಸ್ ಲಸಿಕೆ ಕಡ್ಡಾಯ ಎಂದು ತಿಳಿಸಿದೆ.ಆದರೆ ಇಲ್ಲೊಬ್ಬ ವ್ಯಕ್ತಿ ಒಂದೇ ದಿನದಲ್ಲಿ ಬರೋಬ್ಬರಿ 10 ಕೋವಿಡ್-19 ಲಸಿಕೆಗಳನ್ನು ಪಡೆದಿದ್ದಾನೆ.

ಬಹುತೇಕ ಎಲ್ಲಾ ಕಂಪನಿಗಳೂ ಇಂತಿಷ್ಟು ದಿನಗಳ ಅಂತರದಲ್ಲಿ ಎರಡು ಡೋಸ್ ಪಡೆಯಬಹುದಾದಂತಹ ಲಸಿಕೆಗಳನ್ನೇ ತಯಾರಿಸಿವೆ.ಆದ್ರೆ ಈತ 10 ಲಸಿಕೆ ಪಡೆದಿದ್ದು,ವಿಷಯ ತಿಳಿದ ತಜ್ಞರನ್ನೂ ಬೆಚ್ಚಿಬೀಳುವಂತೆ ಮಾಡಿದ್ದಾನೆ.ಈ ವ್ಯಕ್ತಿ ಒಂದೇ ದಿನದಲ್ಲಿ ಹಲವಾರು ಲಸಿಕಾ ಕೇಂದ್ರಗಳಿಗೆ ತೆರಳಿ, ಪ್ರತೀ ಡೋಸ್ಗೂ ಹಣವನ್ನು ಪಾವತಿ ಮಾಡಿಯೇ ತೆಗೆದುಕೊಂಡಿರುವುದು ತಿಳಿದುಬಂದಿದೆ.ಅಲ್ಲದೆ ಬೇರೆ ವ್ಯಕ್ತಿಗಳ ಪರವಾಗಿ ಲಸಿಕೆ ತೆಗೆದುಕೊಂಡಿದ್ದಾನೆ ಈ ಆಸಾಮಿ.

ವ್ಯಾಕ್ಸಿನ್ ಪಡೆಯಲು ಭಯ ಪಡುವ ವ್ಯಕ್ತಿ ತಮ್ಮ ಪರವಾಗಿ ಬೇರೊಬ್ಬನನ್ನ ನೇಮಕ ಮಾಡಿ, ಬಳಿಕ ಅವರಿಗೆ ಹಣ ಪಾವತಿ ಮಾಡುವ ಮಾಹಿತಿ ತಿಳಿದು ಬಂದಿದೆ. ಹೀಗೆ ಈತ ಇತರರ ಹೆಸರಿನ ಲಸಿಕೆಯನ್ನು ತಾನು ತೆಗೆದುಕೊಂಡು ಹಣ ಸ್ವೀಕರಿಸಿದ್ದಾನೆ.ಆದ್ರೆ ಯಾವ ಒಬ್ಬ ವ್ಯಕ್ತಿಯು ಇವನ ಬಗ್ಗೆ ಮಾಹಿತಿ ನೀಡಿಲ್ಲ. ಈತ ಯಾರು ಎಂಬುದು ಅಧಿಕಾರಿಗಳು ಬಹಿರಂಗ ಪಡಿಸಿಲ್ಲ. ಕಾರಣ ಏನಂದ್ರೆ ಇದೇ ರೀತಿ ಅದೆಷ್ಟು ಜನ ಲಸಿಕೆ ಪಡೆದಿದ್ದರೆ ಎಂಬುದು ತಿಳಿಯಬೇಕಷ್ಟೆ.ಅಂದಹಾಗೆ ಈ ಘಟನೆ ನ್ಯೂಜಿಲ್ಯಾಂಡ್ ನಲ್ಲಿ ನಡೆದಿದ್ದು, ತನಿಖೆ ನಡೆಯುತ್ತಿದೆ.

ಈ ರೀತಿಯಾಗಿ ಮಿತಿ ಮೀರಿ ಲಸಿಕೆಗಳನ್ನು ತೆಗೆದುಕೊಂಡಿರುವುದು ಅವನ ಜೀವಕ್ಕೆ ಅಪಾಯವಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ.
ಈ ಘಟನೆಗೆ ನ್ಯೂಜಿಲೆಂಡ್ ಆರೋಗ್ಯ ಸಚಿವಾಲಯ ಕಳವಳ ವ್ಯಕ್ತಪಡಿಸಿದ್ದು,ಘಟನೆಯನ್ನು ಗಂಭೀರವಾಗಿ ಪರಿಗಣಿಸುತ್ತಿರುವ ಸಚಿವಾಲಯ ಮುಂದೆ ಇಂತಹ ಘಟನೆ ಎಂದಿಗೂ ಮರುಕಳಿಸದಂತೆ ಎಚ್ಚರ ವಹಿಸಿದೆ.ಕೋವಿಡ್-19 ಲಸಿಕೆಗಳನ್ನು ಅತಿಯಾಗಿ ತೆಗೆದುಕೊಂಡಿರುವ ವ್ಯಕ್ತಿಗಳು ಇದ್ದಲ್ಲಿ ತಕ್ಷಣವೇ ವೈದ್ಯರನ್ನು ಭೇಟಿ ಮಾಡಲು ಸೂಚಿಸಿದೆ. ಇಲ್ಲಿಯವರೆಗೆ ಮಿತಿ ಮೀರಿ ಡೋಸ್ಗಳನ್ನು ಪಡೆದುಕೊಂಡಿರುವ ವ್ಯಕ್ತಿಗಳ ಯಾವುದೇ ಡೇಟಾ ಸಂಗ್ರಹವಾಗಿಲ್ಲ ಎನ್ನಲಾಗಿದೆ.

Leave A Reply

Your email address will not be published.