ವಿಮಾನದಲ್ಲಿ ಬೆಕ್ಕಿಗೆ ಎದೆ ಹಾಲುಣಿಸಿದ ಮಹಿಳೆ | ಅನೂಹ್ಯ ಘಟನೆಯಿಂದ ಚಕಿತ- ಗಾಬರಿಗೊಂಡ ಜನರು !

ನ್ಯೂಯಾರ್ಕ್‌: ತಾನು ಸಾಕಿರುವ ಬೆಕ್ಕಿಗೆ ಮಹಿಳೆಯೊಬ್ಬರು ವಿಮಾನದಲ್ಲಿ ಎದೆ ಹಾಲು ಉಣಿಸಿದ ಘಟನೆ ನಡೆದಿದೆ. ಮಹಿಳೆಯ ಈ ಅವತಾರ ಕಂಡು ಪ್ರಯಾಣಿಕರು ದಂಗಾಗಿದ್ದಾರೆ.

Ad Widget

ನ್ಯೂಯಾರ್ಕ್‌ನ ಸಿರಾಕ್ಯೂಸ್‌ನಿಂದ ಅಟ್ಲಾಂಟಾದತ್ತ ತೆರಳಿದ್ದ ಡೆಲ್ಟಾ ಏರ್‌ಲೈನ್ಸ್‌ನಲ್ಲಿ ಮಹಿಳೆಯೊಬ್ಬಳು ತನ್ನ ಮಗುವಿಗೆ ಹಾಲೂಡಿಸುವಂತೆ ತನ್ನ ಸಾಕು ಬೆಕ್ಕಿಗೆ ಮೊಲೆ ಉಣಿಸಿದ್ದಾಳೆ.

Ad Widget . . Ad Widget . Ad Widget . Ad Widget

Ad Widget

ಈ ಘಟನೆಯಿಂದ ಸಹ ಪ್ರಯಾಣಿಕರು ಹಾಗೂ ವಿಮಾನದ ಸಿಬ್ಬಂದಿ ಚಕಿತಗೊಂಡಿದ್ದು, ಅದನ್ನು ಅಲ್ಲಿಯ ಸಹ ಪ್ರಯಾಣಿಕರು ವಿಮಾನಯಾನ ಸಿಬ್ಬಂದಿಗೆ ತಿಳಿಸಿದ್ದಾರೆ. ಆ ಸಿಬ್ಬಂದಿ ಆಗ ಎದೆ ಹಾಲು ಕುಡಿಸುವುದನ್ನು ನಿಲ್ಲಿಸುವಂತೆ ಸೂಚಿಸಿದರೂ ಆಕೆ ಕ್ಯಾರೇ ಅಂದಿಲ್ಲ. ಈ ಕುರಿತು ವಿಮಾನ ಸಿಬ್ಬಂದಿ ನಿಲ್ದಾಣಕ್ಕೆ ಕಳುಹಿಸಿರುವ ಸಿಬ್ಬಂದಿ ಕಳಿಸಿರುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಏನೇ ಆದರೂ ಕೂದಲಿಲ್ಲದ ಆ ಬೆಕ್ಕು ಥೇಟು ಮಗುವಿನ ಹಾಗೆ ಕಾಣುತಿತ್ತು.ಅಲ್ಲದೆ ಅದು ಮಾತ್ರ ಅಮ್ಮನ ಹಾಲು ಚೀಪುವುದರಲ್ಲಿ ಮಗ್ನವಾಗಿತ್ತು.

Ad Widget
Ad Widget Ad Widget

“13ಎ ಸೀಟಿನಲ್ಲಿ ಕುಳಿತಿರುವ ಪ್ರಯಾಣಿಕ ಮಹಿಳೆಯು ಬೆಕ್ಕೊಂದಕ್ಕೆ ಎದೆ ಹಾಲುಣಿಸುತ್ತಿದ್ದು, ವಿಮಾನದ ಸಿಬ್ಬಂದಿ ಮನವಿ ಮಾಡಿಕೊಂಡರೂ ಬೆಕ್ಕನ್ನು ಕ್ಯಾರಿಯರ್‌ನಲ್ಲಿ ಇರಿಸುತ್ತಿಲ್ಲ,” ಎಂದು ಸಂದೇಶ ಹೋಗಿದೆ.
ಫ್ಲೈಟ್ ಅಟೆಂಡೆಂಟ್ ಐನ್ಸ್ಲೆ ಎಲಿಜಬೆತ್ ಅವರು ಈ ಬಗ್ಗೆ ಟಿಕ್‌ಟಾಕ್ ವೀಡಿಯೊದಲ್ಲಿ ವಿಲಕ್ಷಣ ಘಟನೆಯ ಬಗ್ಗೆ ವಿವರಣೆ ನೀಡಿ ವಿಡಿಯೋ ಶೇರ್‌ ಮಾಡಿಕೊಂಡಿದ್ದಾರೆ. “ಈ ಮಹಿಳೆ ಬೆಕ್ಕನ್ನು ಬಟ್ಟೆ ಒಂದರ ಒಳಗೆ ಮಗುವಿನಂತೆ ಸುತ್ತಿಕೊಂಡಿದ್ದರು, ಹೀಗಾಗಿ ಅದು ಮಗುವಿನಂತೆ ಕಾಣುತ್ತಿತ್ತು. ಬೆಕ್ಕು ಮಾತ್ರ ಭಯದಿಂದ ಅಂಗಲಾಚುತ್ತಿದ್ದರೂ ಅದನ್ನು ಮರಳಿ ಕ್ಯಾರಿಯರ್‌ನಲ್ಲಿ ಆಕೆ ಇಡುತ್ತಿರಲಿಲ್ಲ,” ಎಂದು ಹೇಳಿದ್ದಾರೆ.

ಸಾಕು ಪ್ರಾಣಿಗಳನ್ನು ವಿಮಾನದಲ್ಲಿ ಒಯ್ಯಬಹುದೇ?: ಸಾಕು ಪ್ರಾಣಿಗಳಿಗೆ ವಿಮಾನದಲ್ಲಿ ನಿರ್ಬಂಧಗಳನ್ನು ವಿಧಿಸುವುದಿಲ್ಲ. ಮಾಲೀಕರು ಸೂಕ್ತ ದಾಖಲೆಗಳು ಮತ್ತು ಪರವಾನಗಿಗಳನ್ನು ಹೊಂದಿದ್ದರೆ ವಿಮಾನದಲ್ಲಿ ಸಾಕು ಪ್ರಾಣಿಗಳನ್ನು ತೆಗೆದುಕೊಂಡು ಹೋಗಲು ಅವಕಾಶವಿದೆ. ಎಲ್ಲಿಗೆ ಪ್ರಯಾಣಿಸುತ್ತೀರಿ, ಪ್ರಾಣಿಯ ತೂಕವೆಷ್ಟು ಸೇರಿದಂತೆ ಹಲವು ಮಾನದಂಡಗಳನ್ನು ವಿಧಿಸಿರುತ್ತಾರೆ. ಸಾಕುಪ್ರಾಣಿಗಳೊಂದಿಗೆ ಪ್ರಯಾಣಿಸಲು, ನೀವು ಮೊದಲು ಟಿಕೆಟ್ ಖರೀದಿಸಿದ ವಿಮಾನಯಾನ ಸಂಸ್ಥೆಯಿಂದ ಅನುಮತಿ ಪಡೆಯಬೇಕು. ಸ್ಥಾಪಿತ ನಿಯಮಗಳ ಪ್ರಕಾರ, ವಿಮಾನದಲ್ಲಿ 5 ಕ್ಕಿಂತ ಹೆಚ್ಚು ಪ್ರಾಣಿಗಳು ಇರಬಾರದು. ಪ್ರಾಣಿಗಳ ತೂಕವು 8 ಕೆಜಿಗಿಂತ ಹೆಚ್ಚಿರಬಾರದು. (ಹೆಚ್ಚು ಇದ್ದರೆ ಮಾನದಂಡಗಳು ಬೇರೆ) ಇದಕ್ಕೆಂದೇ ವಿಶೇಷ ಪಂಜರವನ್ನು ಮಾಡಿರಬೇಕು. ಮಾತ್ರವಲ್ಲ ಅದರಲ್ಲಿ ಪ್ರಾಣಿಯು ಹಾಯಾಗಿರಬೇಕು. ಮಲಗಲು, ನಿಲ್ಲಲು ಸಾಕಷ್ಟು ಜಾಗವಿರಬೇಕು. ಪಶುವೈದ್ಯಕೀಯ ಪ್ರಥಮ ಚಿಕಿತ್ಸಾ ಕಿಟ್ ಹೊಂದಿರಬೇಕು. ಏರ್ ಕ್ಯಾರಿಯರ್ ನಿಂದ ಅನುಮತಿ ಪಡೆಯದೆ ಸಾಕುಪ್ರಾಣಿಗಳೊಂದಿಗೆ ವಿಮಾನ ನಿಲ್ದಾಣಕ್ಕೆ ಬಂದರೆ, ಪ್ರಯಾಣಿಕನನ್ನು ವಿಮಾನ ಹತ್ತುವುದಕ್ಕೂ ನಿಷೇಧಿಸಲಾಗುತ್ತದೆ.

ಅಂತರಾಷ್ಟ್ರೀಯ ವಿಮಾನಗಳಲ್ಲಿ ಸಾಕು ಪ್ರಾಣಿ ಕರೆದುಕೊಂಡು ಹೋಗಲು ಅನುಮತಿಸುವ ವಿಮಾನ ಸಂಸ್ಥೆಗಳು ಯಾವುವೆಂದರೆ, ವಿಶ್ವದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಿ, ಅಮೆರಿಕನ್ ಏರ್ಲೈನ್ಸ್ ಸಹ ಅತ್ಯಂತ ಸಾಕುಪ್ರಾಣಿ ಸ್ನೇಹಿಯಾಗಿದೆ. ಮಿಕ್ಕಂತೆ ಜೆಟ್ ಬ್ಲೂ, ಏರ್ ಕೆನಡಾ, ಡೆಲ್ಟಾ, ಏರ್ ಇಂಡಿಯಾ, ಏರ್ ಫ್ರಾನ್ಸ್, ಸ್ವಿಸ್ ಇಂಟರ್ನ್ಯಾಷನಲ್ ಏರ್ಲೈನ್ಸ್, ಟರ್ಕಿಶ್ ಏರ್ಲೈನ್ಸ್.

Leave a Reply

error: Content is protected !!
Scroll to Top
%d bloggers like this: