ಗಂಡು ಮಗುವಿಗೆ ಜನ್ಮ ನೀಡದೆ ಹೆಣ್ಣು ಹೆತ್ತ ಹಿನ್ನೆಲೆ!! ಮಧ್ಯಾಹ್ನ ಮನೆಕೆಲಸ ಮಾಡಿ ಮಲಗಿದ್ದ ಸೊಸೆಗೆ ಅತ್ತೆ-ಮಾವ ನಿಂದ ಹಲ್ಲೆ!! ಹಲ್ಲೆಗೆ ಪತಿಯ ಸಾಥ್ -ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಮನೆಕೆಲಸವೆಲ್ಲಾ ಆಯಿತು, ಇನ್ನೇನು ಸ್ವಲ್ಪ ಮಲಗಿಬಿಡೋಣ ಎಂದು ನಿದ್ದೆಗೆ ಜಾರಿದ್ದ ಸೊಸೆಗೆ ಅತ್ತೆ ಮಾವ ಸೇರಿಕೊಂಡು ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದ್ದು,ಕೌಟುಂಬಿಕ ಹಿಂಸೆಯ ಪ್ರಕರಣ ದಾಖಲಾಗಿದೆ.

Ad Widget

ಘಟನೆ ವಿವರ:ಗುಜರಾತಿನ ಅಹ್ಮದಾಬಾದ್ ನಲ್ಲಿ ಈ ಘಟನೆ ನಡೆದಿದ್ದು, ಮನೆ ಕೆಲಸ ಮಾಡಿ ಮಧ್ಯಾಹ್ನ ಮಲಗಿದ್ದ ಸೊಸೆಯ ಮೇಲೆ ಅತ್ತೆಮಾವ ಸೇರಿಕೊಂಡು ಏಕಾಏಕಿ ಹಲ್ಲೆ ನಡೆಸಿದ್ದು, ಪತಿಯು ಇದಕ್ಕೆ ಸಹಕರಿಸಿದ್ದಾನೆ ಎನ್ನಲಾಗಿದೆ. ಈ ಮೊದಲು ಮಹಿಳೆಯ ಮೇಲೆ ಪತಿ ಹಲ್ಲೆ ನಡೆಸಿದ್ದು ಪ್ರಕರಣ ರಾಜಿಯಲ್ಲಿ ಅಂತ್ಯವಾಗಿತ್ತು.

Ad Widget . . Ad Widget . Ad Widget . Ad Widget

Ad Widget

ಇದಾದ ಬಳಿಕ ಆಕೆ ಗರ್ಭಿಣಿಯಾಗಿದ್ದು, ಆ ಸಮಯದಲ್ಲಿ ಪತಿಮನೆಯಲ್ಲಿ ಕಿರುಕುಳ ಕೊಡಲಾರಾಂಭಿಸಿದ್ದರು. ಗಂಡು ಹೆತ್ತಿಲ್ಲ ಎಂಬ ಕಾರಣಕ್ಕೆ ಈ ರೀತಿಯಾಗಿ ಹಲ್ಲೆ ನಡೆಸಿ,ಮನೆಯಿಂದ ಹೊರಹಾಕಿದ್ದರು.

Ad Widget
Ad Widget Ad Widget

ಅದಲ್ಲದೇ ಗರ್ಭಿಣಿಯಾದ ಸಮಯದಲ್ಲಿ ಹೆಚ್ಚು ಕಿರುಕುಳ ಕೊಟ್ಟರಲ್ಲದೆ, ತವರು ಮನೆಗೂ ಕಳುಹಿಸದೆ ಹಿಗ್ಗಾಮುಗ್ಗ ಥಳಿಸಿದ್ದಾರೆ ಎಂದು ಮಹಿಳೆ ಪೊಲೀಸರ ಮೊರೆಹೋಗಿದ್ದಾಳೆ.

Leave a Reply

error: Content is protected !!
Scroll to Top
%d bloggers like this: