ಕುದ್ಮಾರು ಅನ್ಯಾಡಿ ಶ್ರೀ ಶಿರಾಡಿ ರಾಜನ್ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ –ಸಮಾಲೋಚನಾ ಸಭೆ

ಕಾಣಿಯೂರು: ದೈವ, ದೇವರುಗಳ ಇಚ್ಚೆ ಹಾಗೂ ಭಕ್ತರ ಶ್ರದ್ದೆಯಿಂದ ಜೀರ್ಣೋದ್ದಾರಕ್ಕೆ ಸಮಯ ಕೂಡಿಬಂದಿದ್ದು, ಗ್ರಾಮದ ಪ್ರತಿಯೊಬ್ಬರು ಒಗ್ಗಟ್ಟಿನಿಂದ ಶಕ್ತಿಮೀರಿ ಪಾಲ್ಗೊಂಡು ಬ್ರಹ್ಮಕಲಶೋತ್ಸವ ಸಂಭ್ರಮ ಹೆಚ್ಚಿಸಲು ಎಲ್ಲರ ಸಹಕಾರ ಅಗತ್ಯ ಎಂದು ಶಾಂತಿಮೊಗರು ಶ್ರೀ ಸುಬ್ರಹ್ಮಣೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರು, ಕುದ್ಮಾರು ಅನ್ಯಾಡಿ ಶ್ರೀ ಶಿರಾಡಿ ರಾಜನ್ ದೈವಸ್ಥಾನದ ಸಮಿತಿ ನೂತನ ಅಧ್ಯಕ್ಷರಾದ ಸತೀಶ್ ಕುಮಾರ್ ಕೆಡೆಂಜಿ ಹೇಳಿದರು.

ಅವರು ಕುದ್ಮಾರು ಅನ್ಯಾಡಿ ಶ್ರೀ ಶಿರಾಡಿ ರಾಜನ್ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯದ ಕುರಿತು ನ.28ರಂದು ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ಒಂದು ಊರಿನ ದೇವಸ್ಥಾನ, ದೈವಸ್ಥಾನ ಅಭಿವೃದ್ಧಿಯಾದರೆ ಅ ಊರೇ ಅಭಿವೃದ್ಧಿಗೊಂಡಂತೆ. ಗ್ರಾಮದ ಎಲ್ಲಾ ಜನತೆಯ ಸಹಕಾರದಿಂದ ದೈವಸ್ಥಾನವು ಅತೀ ಸುಂದರವಾಗಿ ರಚನೆಗೊಂಡು ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ನಡೆಯುವ ನಿಟ್ಟಿನಲ್ಲಿ ಕಾರ್ಯಕ್ರಮದ ಯಶಸ್ವಿಗೆ ಎಲ್ಲರು ಮುಂದಾಗಬೇಕು ಎಂದರು.

ಸಭೆಯ ಅಧ್ಯಕ್ಷತೆಯನ್ನು ಅನ್ಯಾಡಿ ಬಾರಿಕೆ ಕುಟುಂಬದ ಆಡಳಿತ ಸಮಿತಿ ಅಧ್ಯಕ್ಷ ಯೋಗೀಶ್ ಕೆಡೆಂಜಿ ವಹಿಸಿದರು.ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈ, ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಅನುವಂಶೀಯ ಮೊಕ್ತೇಸರರಾದ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು, ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ವೆಂಕಟೇಶ್ ಭಟ್ ಕೊಯಕ್ಕುಡೆ, ಶಾಂತಿಮೊಗರು ಶ್ರೀ ಸುಬ್ರಹ್ಮಣೇಶ್ವರ ದೇವಸ್ಥಾನದ ಆಡಳಿತ ಸಮಿತಿ ಕಾರ್ಯದರ್ಶಿ ಶೂರಪ್ಪ ಗೌಡ ಪಟ್ಟೆತ್ತಾನ, ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮೊಕ್ತೇಸರರಾದ ಜನೇಶ್ ಭಟ್ ಬರೆಪ್ಪಾಡಿ ಅನಿಸಿಕೆ ವ್ಯಕ್ತ ಪಡಿಸಿದರು. ಬೆಳಂದೂರು ಗ್ರಾ.ಪಂ. ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ, ದೇವಪ್ಪ ಗೌಡ ನಡುಮನೆ, ಸವಣೂರು ಸಿ.ಎ ಬ್ಯಾಂಕ್ ಮಾಜಿ ಅಧ್ಯಕ್ಷ ಚೆನ್ನಪ್ಪ ಗೌಡ ನೂಜಿ, ಹಿರಿಯರಾದ ಪದ್ಮಯ್ಯ ಗೌಡ ಅನ್ಯಾಡಿ, ಪದ್ಮಯ್ಯ ಗೌಡ ಕೆಡೆಂಜಿ, ಮೋನಪ್ಪ ಗೌಡ ಅನ್ಯಾಡಿ, ದೇವಣ್ಣ ಗೌಡ ಅನ್ಯಾಡಿ ಉಪಸ್ಥಿತರಿದ್ದರು. ಆನಂದ ಅನ್ಯಾಡಿ, ಚೆನ್ನಪ್ಪ ಗೌಡ ಅನ್ಯಾಡಿ, ದಯಾನಂದ ಅನ್ಯಾಡಿ, ಪೂವಣಿ ಗೌಡ, ಸೋಮಪ್ಪ ಗೌಡ, ನಾರ್ಣಪ್ಪ ಗೌಡ ಕೆಡೆಂಜಿ, ದಿನೇಶ್ ಗೌಡ ಅನ್ಯಾಡಿ, ಪ್ರವೀಣ ಕೆಡೆಂಜಿ, ದಿನೇಶ್ ಅನ್ಯಾಡಿ, ಅಶೊಕ್ ಅನ್ಯಾಡಿ, ವಿಠಲ ಅನ್ಯಾಡಿ, ಜಯರಾಮ ಅನ್ಯಾಡಿ, ವಿಶ್ವನಾಥ ಅನ್ಯಾಡಿ ಅತಿಥಿಗಳಿಗೆ ವೀಳ್ಯದೆಲೆ, ಅಡಿಕೆ ನೀಡಿ ಗೌರವಿಸಿದರು. ನವ್ಯ, ಕುಮುದಾ, ತಾರಾ ಪ್ರಾರ್ಥಿಸಿದರು. ಕುದ್ಮಾರು ಅನ್ಯಾಡಿ ಶ್ರೀ ಶಿರಾಡಿ ರಾಜನ್ ದೈವಸ್ಥಾನದ ಗ್ರಾಮ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗೇಶ್ ಕೆ. ಕೆಡೆಂಜಿ ಪ್ರಾಸ್ತಾವಿಕ ಮಾತನಾಡಿದರು.

ಜನಾರ್ದನ ಗೌಡ ಅನ್ಯಾಡಿ ಸ್ವಾಗತಿಸಿ, ರಂಜಿತ್ ಕೆಡೆಂಜಿ ವಂದಿಸಿದರು. ಸವಣೂರು ವಿದ್ಯಾರಶ್ಮೀ ವಿದ್ಯಾಸಂಸ್ಥೆಯ ಉಪನ್ಯಾಸಕ ಮುರಳೀಧರ ಕೆ.ಎಲ್ ಕಾರ್ಯಕ್ರಮ ನಿರೂಪಿಸಿದರು.

ಡಿಸೆಂಬರ್ 28,29ರಂದು ದೈವಗಳ ಪುನಃ ಪ್ರತಿಷ್ಠಾಪನೆ

ಡಿಸೆಂಬರ್ 28,29 ರಂದು ವಿವಿಧ ವೈಧಿಕ ಕಾರ್ಯಕ್ರಮಗಳೊಂದಿಗೆ ದೈವಗಳ ಪುನಃ ಪ್ರತಿಷ್ಠಾಪನೆ ನಡೆಯಲಿದೆ ಎಂದರು.

Leave A Reply

Your email address will not be published.