ಗುತ್ತಿಗಾರು : ಬಾರ್‌ನಲ್ಲಿ ರಾತ್ರಿ ಹೊಡೆದಾಟ : ಐವರ ವಿರುದ್ಧ ಪ್ರಕರಣ ದಾಖಲು

ಸುಬ್ರಹ್ಮಣ್ಯ: ಗುತ್ತಿಗಾರಿನ ಬಾರ್‌ವೊಂದರಲ್ಲಿ ರಾತ್ರಿ ಎರಡು ಹೊಡೆದಾಟ ನಡೆದಿದ್ದು ಐವರ ಮೇಲೆ ಸುಬ್ರಹ್ಮಣ್ಯ ಠಾಣೆಯಲ್ಲಿ ಎಫ್ ಐ ಆರ್ ದಾಖಲಾದ ಬಗ್ಗೆ ವರದಿಯಾಗಿದೆ.

ಗುತ್ತಿಗಾರಿನ ಮಧು ಬಾರ್ & ರೆಸ್ಟೋರೆಂಟ್‌ ನಲ್ಲಿ ಈ ಘಟನೆ ಭಾನುವಾರ ರಾತ್ರಿ ನಡೆದಿದೆ ಬಾರ್ ಗೆ ಆಗವಿಸಿದ ಯುವಕರು ಬಿಲ್ ವಿಚಾರವಾಗಿ ಕ್ಯಾಶಿಯರ್ ಬಳಿ ಚೌಕಾಸಿ ಮಾಡಿದ್ದು, ಈ ಬಗ್ಗೆ ಕ್ಯಾಶಿಯರ್ ಬಾರ್ ಮಾಲಕರೊಂದಿಗೆ ಅವರೊಂದಿಗೆ ಚರ್ಚಿಸುವಂತೆ ಹೆಳಿದ್ದರೆನ್ನಲಾಗಿದೆ.

ಯುವಕರು ಬಾರ್ ಮಾಲಿಕರೊಂದಿಗೆ ಅವರೊಂದಿಗೆ ಮಾತನಾಡುತ್ತಾ ಹಲ್ಲೆ ನಡೆಸಿಗೆ ಮುಂದಾಗಿದ್ದಾರೆ ಎನ್ನಲಾಗಿದೆ ಈ ಬಗ್ಗೆ ಬಾರ್ ಮಾಲಕ ಹರ್ಷಿತ್ ಅವರು ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನ ಹಿನ್ನೆಲೆಯಲ್ಲಿ ಸಚಿನ್, ದಿನೇಶ್, ವರ್ಷಿತ್, ಹರ್ಷಿತ್, ರಕ್ಷಿತ್‌ಐವರ ಮೇಲೆ ಎಫ್ ಐ ಆರ್ ದಾಖಲಾಗಿರುವುದಾಗಿ ತಿಳಿದುಬಂದಿದೆ. ಹಲ್ಲೆ ಸಂದರ್ಭ ಸ್ಥಳದಲ್ಲಿದ್ದ ಮತ್ತೋರ್ವ ವ್ಯಕ್ತಿಗೂ ಇದೇ ಯುವಕರು ಹೊಡೆದಿರುವುದಾಗಿ ತಿಳಿದು ಬಂದಿದ್ದು, ಅವರೂ ಠಾಣೆಗೆ ದೂರು ಕೊಟ್ಟಿರುವುದಾಗಿ ತಿಳಿದುಬಂದಿದೆ.

Leave A Reply

Your email address will not be published.