ಮೂರನೇ ವಿಶ್ವಯುದ್ಧಕ್ಕೆ ನಾಂದಿ ಹಾಡಲಿವೆಯಂತೆ ಏಲಿಯನ್ ಗಳು | ಹೊರಬಿದ್ದಿದೆ ಸ್ಫೋಟಕ ಮಾಹಿತಿ

ಈ ಬ್ರಹ್ಮಾಂಡದಲ್ಲಿ ನಾವು ಏಕಾಂಗಿಯೇ?ಇನ್ನೆಲ್ಲೋ ಮತ್ತೊಂದು ಗ್ರಹದಲ್ಲಿ ಜೀವ ಸಂಕುಲ ಇದೆಯೇ? ಏಲಿಯನ್ಸ್ ಥಿಯರಿ ನಿಜಕ್ಕೂ ನಿಜವೇ? ಎಂಬೆಲ್ಲ ಪ್ರಶ್ನೆಗಳು ಇಂದು-ನಿನ್ನೆಯದಲ್ಲ. ಅದೆಷ್ಟೋ ವಿಜ್ಞಾನಿಗಳು ಇದರ ಸಂಶೋಧನೆ ನಡೆಸಿ ಇರುವಿಕೆಯ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ್ದಾರೆ. ಆದರೂ ಇದುವರೆಗೂ ಅವುಗಳ ಇರುವಿಕೆ ದೃಢಪಟ್ಟಿಲ್ಲ.

ಏಲಿಯನ್ ಇರುವಿಕೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ, ಅವುಗಳ ಅಸ್ತಿತ್ವದ ಬಗ್ಗೆ ಇದುವರೆಗೂ ಯಾವುದೇ ಸ್ಪಷ್ಟತೆ ದೊರೆತಿಲ್ಲ. ಏಲಿಯನ್ ಗಳು ಕಾಣಿಸಿಕೊಳ್ಳುವ ಬಗ್ಗೆ ಆಗಾಗ ಸುದ್ದಿಯಾದರೂ ಕೂಡ ಜನರಲ್ಲಿ ಅವುಗಳ ಅಸ್ತಿತ್ವದ ಪ್ರಶ್ನೆ ಹಾಗೆಯೇ ಉಳಿದಿದೆ. ಸಾಕಷ್ಟು ಸಂಶೋಧನೆಗಳು, ಸಿದ್ಧಾಂತಗಳು ಹೊರಬಂದರೂ ಕೂಡ ಏಲಿಯನ್‌ಗಳ ಸಂಗತಿ ನಿಗೂಢವಾಗಿಯೇ ನಮ್ಮ ನಡುವೆ ಉಳಿದಿದೆ.

ಇದೀಗ ಏಲಿಯನ್‌ಗಳ ಬಗ್ಗೆ ಯುಎಸ್‌ನ ಮಾಜಿ ಮಿಲಿಟರಿ ಅಧಿಕಾರಿಯೊಬ್ಬರು ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ. ಮೂರನೇ ವಿಶ್ವಯುದ್ಧ ಏಲಿಯನ್‌ಗಳಿಂದ ಶುರುವಾಗಲಿದೆ ಎಂದಿದ್ದಾರೆ. ಯುಎಸ್ ವಾಯುಪಡೆಯ ಉನ್ನತ ಸ್ಥಾನದಲ್ಲಿ ಕಾರ್ಯ ನಿರ್ವಹಿಸಿರುವ ರಾಬರ್ಟ್ ಸಲಾಸ್ ಅವರು ಈ ವಾದವನ್ನು ಮಂಡಿಸಿದ್ದಾರೆ.

Ad Widget
Ad Widget

Ad Widget

Ad Widget

ಏಲಿಯನ್‌ಗಳು ಪರಮಾಣು ಕ್ಷಿಪಣಿ ವಿಚಾರದಲ್ಲಿ ಹಸ್ತಕ್ಷೇಪ ಮಾಡುತ್ತಿವೆ. ಇದಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಅತಿ ಶೀಘ್ರದಲ್ಲೇ ಯುಎಸ್ ವಾಯುಪಡೆಯ ನಾಲ್ವರು ಮಾಜಿ ಮುಖ್ಯಸ್ಥರು ಬಿಡುಗಡೆ ಮಾಡಲಿದ್ದಾರೆ ಎಂದು ರಾಬರ್ಟ್ ಸಲಾಸ್ ಹೇಳಿದ್ದಾರೆ. ಅಂದಹಾಗೆ ಸಲಾಸ್ ಅವರು ಯುಎಸ್ ವಾಯುಪಡೆಯ ಶಸ್ತ್ರಾಸ್ತ್ರ ನಿಯಂತ್ರಕರಾಗಿದ್ದರು.

ಏಲಿಯನ್‌ಗಳು ಪರಮಾಣು ಕ್ಷಿಪಣಿ ವಿಚಾರದಲ್ಲಿ ಹಸ್ತಕ್ಷೇಪ ಮಾಡುತ್ತಿವೆ. ಇದಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಅತಿ ಶೀಘ್ರದಲ್ಲೇ ಯುಎಸ್ ವಾಯುಪಡೆಯ ನಾಲ್ವರು ಮಾಜಿ ಮುಖ್ಯಸ್ಥರು ಬಿಡುಗಡೆ ಮಾಡಲಿದ್ದಾರೆ ಎಂದು ರಾಬರ್ಟ್ ಸಲಾಸ್ ಹೇಳಿದ್ದಾರೆ. ಅಂದಹಾಗೆ ಸಲಾಸ್ ಅವರು ಯುಎಸ್ ವಾಯುಪಡೆಯ ಶಸ್ತ್ರಾಸ್ತ್ರ ನಿಯಂತ್ರಕರಾಗಿದ್ದರು. ಅಲ್ಲದೆ, ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಮೇಲ್ವಿಚಾರಕರಾಗಿ, ಟೈಟಾನ ಕಾರ್ಯಕ್ರಮದಲ್ಲಿ ವಾಯುಪಡೆಯ ಕ್ಷಿಪಣಿ ಚಾಲನಾ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದಾರೆ. 1971 ರಿಂದ 1973 ರವರೆಗೆ ಸ್ಪೇಸ್ ಶಟಲ್ ಡಿಸೈನ್ ಪ್ರಪೋಸಲ್ ಕುರಿತು ಮಾರ್ಟಿನ್-ಮಾರಿಟಾ ಏರೋಸ್ಪೇಸ್ ಮತ್ತು ರಾಕ್‌ವೆಲ್ ಇಂಟರ್‌ನ್ಯಾಷನಲ್‌ಗೆ ಸಲಾಸ್ ವಿಶ್ವಾಸಾರ್ಹ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದಾರೆ.

ಸಲಾಸ್ ಅವರ ಪ್ರಕಾರ ಬೇರೆ ಗ್ರಹದಲ್ಲಿರುವ ಏಲಿಯನ್ ಗಳು ಪರಮಾಣ ಗುರಿಗಳನ್ನು ತಮ್ಮ ಶಸ್ತ್ರಾಸ್ತ್ರ ವ್ಯವಸ್ಥೆಯ ಮೂಲಕ ತಿರುಚಿ, ಕ್ಷಿಪಣಿಗಳನ್ನು ಅಶಕ್ತಗೊಳಿಸುತ್ತಿವೆ. ಉಡಾವಣಾ ಅನುಕ್ರಮವನ್ನು ಪ್ರಾರಂಭಿಸುವ ಮೂಲಕ ಕ್ಷಿಪಣಿಗಳನ್ನು ಸಕ್ರಿಯಗೊಳಿಸಲು ಪ್ರಾರಂಭಿಸಿವೆ ಎಂದು ಸಾಲಾಸ್ ಬಹಿರಂಗಪಡಿಸಿದ್ದಾರೆ. ಒಟ್ಟು 10 ಅಂತಾರಾಷ್ಟ್ರೀಯ ಬ್ಯಾಲಿಸ್ಟಿಕ್ಸ್ ಕ್ಷಿಪಣಿಗಳನ್ನು ಏಲಿಯನ್ ಗಳು ಅಶಕ್ತಗೊಳಿಸಿವೆ ಎಂದು ಹೇಳಿದ್ದಾರೆ.

1967 ಮಾರ್ಚ್ 24ರಂದು ಸ್ಥಾಪನೆಯಾದ ಮಾಲ್ಟ್ಸ್ಟೋಮ್ ವಾಯುನೆಲೆಯಲ್ಲಿ ಭೂಗತ ಉಡಾವಣಾ ನಿಯಂತ್ರಣ ಸೌಲಭ್ಯದ ಕಮಾಂಡರ್ ಆಗಿ ಸೇವೆ ಸಲ್ಲಿಸಿರುವ ಸಲಾಸ್, ಕ್ಷಿಪಣಿಗಳನ್ನು ಏಲಿಯನ್‌ಗಳು ನಿಯಂತ್ರಿಸುವ ಘಟನೆ 1967 ಮಾರ್ಚ್ 16ರಂದು ಬೇರೆ ಲಾಂಚ್ ಕಂಟ್ರೋಲ್ ಫೆಸಿಲಿಟಿಯಲ್ಲಿ ಹಿಂದೊಮ್ಮೆ ನಡೆದಿತ್ತು ಎಂದಿದ್ದಾರೆ. ಹೀಗಾಗಿ ಈ ಬಗ್ಗೆ ಅಧ್ಯಯನ ನಡೆಸುವಂತೆ ಯುಎಸ್ ಕಾಂಗ್ರೆಸ್ ಮೇಲೆ ಒತ್ತಡ ಏರಲ ಪ್ರಯತ್ನಿಸುತ್ತಿದ್ದೇವೆ ಎಂದು ಸಲಾಸ್ ಮಾಹಿತಿ ನೀಡಿದ್ದಾರೆ.

Leave a Reply

error: Content is protected !!
Scroll to Top
%d bloggers like this: