ಕರ್ನಾಟಕದ ರೈತರು ಬಳಸುವ ಡೀಸೆಲ್,ಪೆಟ್ರೋಲ್ ಪ್ರತೀ ಲೀಟರ್‌ಗೆ 20 ರೂ.ಸಬ್ಸಿಡಿ

ಕರ್ನಾಟಕದ ರೈತರಿಗೆ ಗುಡ್‌ನ್ಯೂಸ್ ಒಂದಿದ್ದು,ಅದೇನೆಂದರೆ ತಾವು ಬಳಸುವ ಲೀಟರ್, ಪೆಟ್ರೋಲ್ ಗೆ ಪ್ರತೀ ಲೀಟರ್ ಗೆ 20 ರೂ ಸಬ್ಸಿಡಿ ನೀಡುವ ಯೋಜನೆಗೆ ಕೃಷಿ ಇಲಾಖೆ ಮುಂದಾಗಿದೆ.

ಇಂತಹ ಯೋಚನೆ ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದ್ದಾಗಲಿದೆ.

ಚಿತ್ರದುರ್ಗದ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಮುರುಘಾಮಠದಲ್ಲಿ ಆಯೋಜಿಸಿದ್ದ ಕೃಷಿ ಮತ್ತು ಕೈಗಾರಿಕೆ ಮೇಳ ಉದ್ಘಾಟಿಸಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರೈತರು ಬಳಸುವ ಡೀಸೆಲ್ ಗೆ ಸಬ್ಸಿಡಿ ನೀಡಲು ಸಮ್ಮತಿಸಿದ್ದರು.

ಕೊರೊನಾ ಕಾರಣದಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದರ ಬಗ್ಗೆ ಸಕಾರಾತ್ಮಕ ನಿಲುವು ತೋರಿದ್ದಾರೆ. ಯೋಜನೆ ಜಾರಿಯಾದಲ್ಲಿ ರೈತರಿಗೆ ಡೀಸೆಲ್ ಗೆ ಸಬ್ಸಿಡಿ ನೀಡಿದ ಮೊದಲ ರಾಜ್ಯವೆಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಲಿದೆ ಎಂದು ಸಚಿವರು ಹೇಳಿದ್ದಾರೆ.

Leave A Reply

Your email address will not be published.