ಹುಟ್ಟುಹಬ್ಬದ ದಿನದಂದು ಬರೋಬ್ಬರಿ 550 ಕೇಕ್ ಗಳನ್ನು ಕತ್ತರಿಸಿದ ವ್ಯಕ್ತಿ !! | ವೈರಲ್ ಆಗಿದೆ ಆತನ ಕೇಕ್ ಕಟ್ಟಿಂಗ್ ವಿಡಿಯೋ

ಹುಟ್ಟುಹಬ್ಬ ಅಂದರೆ ಸಡಗರ ಸಂಭ್ರಮ. ಪ್ರತಿ ವರ್ಷದ ಹುಟ್ಟು ಹಬ್ಬದ ದಿನದಂದು ಏನಾದರೂ ಹೊಸದನ್ನು ಮಾಡಲು ಕೆಲವರು ಇಷ್ಟಪಡುತ್ತಾರೆ. ಕೆಲವರು ರಕ್ತದಾನ, ಇನ್ನೂ ಕೆಲವರು ಅನಾಥಾಶ್ರಮ/ ವೃದ್ಧಾಶ್ರಮ ಭೇಟಿ ಹೀಗೆ ಉತ್ತಮ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವವರೂ ಇದ್ದಾರೆ.

ಅಂತೂ ಇಂತೂ ಹುಟ್ಟುಹಬ್ಬದ ದಿನ ಏನಾದರು ನೆನಪಿನಲ್ಲಿ ಉಳಿಯುವಂತಹ ಕೆಲಸವನ್ನು ಮಾಡಲು ಇಷ್ಟಪಡುತ್ತಾರೆ. ಹಾಗೆಯೇ ಇಲ್ಲಿ ವ್ಯಕ್ತಿಯೊಬ್ಬ 550 ಕೇಕ್ ಕಟ್ ಮಾಡಿ ವಿಶೇಷವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗಿದ್ದಾನೆ.

ಹುಟ್ಟುಹಬ್ಬಕ್ಕೆ ಎಲ್ಲರೂ ತಮ್ಮ ಸ್ನೇಹಿತರ ಜೊತೆ ಮತ್ತು ಕುಟುಂಬದವರ ಜೊತೆ ಕೇಕ್ ಕಟ್ ಮಾಡಿ ಆಚರಣೆ ಮಾಡಿಕೊಳ್ಳುತ್ತಾರೆ. ಹೆಚ್ಚು ಎಂದರೂ 10 ಕೇಕ್ ಕಟ್ ಮಾಡಬಹುದು. ಆದರೆ ಇಲ್ಲೊಬ್ಬ ವ್ಯಕ್ತಿ 550 ಕೇಕ್ ಕಟ್ ಮಾಡಿದ್ದು, ಆ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.

Ad Widget / / Ad Widget

ಮುಂಬೈನ ಕಾಂಡಿವಲಿ ಪಶ್ಚಿಮ ನಿಲ್ದಾಣದ ಬಳಿ ಸೂರ್ಯ ರಾತುರಿ ತನ್ನ ಹುಟ್ಟುಹಬ್ಬವನ್ನು ಏಕಕಾಲದಲ್ಲಿ 550 ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಂಡಿದ್ದಾರೆ.

ಮೂರು ದೊಡ್ಡ ಟೇಬಲ್‍ಗಳಲ್ಲಿ 550 ವರ್ಣರಂಜಿತ ಕೇಕ್‍ಗಳನ್ನು ಇರಿಸಲಾಗಿದ್ದು, ಆ ಎಲ್ಲ ಕೇಕ್ ನನ್ನು ಸೂರ್ಯ ತನ್ನ ಎರಡು ಕೈಯಲ್ಲಿ ಚಾಕು ಹಿಡಿದುಕೊಂಡು ಒಂದೊಂದಾಗಿ ಕತ್ತರಿಸಿದ್ದಾರೆ. ಸೂರ್ಯ ಅವರ ಸುತ್ತಲೂ ಒಂದು ದೊಡ್ಡ ಜನಸಮೂಹ ಜಮಾಯಿಸಿದ್ದು, ಹಲವರು ತಮ್ಮ ಫೋನ್‍ಗಳಲ್ಲಿ ಈ ವಿಶೇಷ ದಿನವನ್ನು ಸೆರೆ ಹಿಡಿದಿದ್ದಾರೆ.

ಈ ವೀಡಿಯೋ ವೀಕ್ಷಿಸಿದ ಜನರು, ಆಚರಣೆ ವೇಳೆ ಯಾರಲ್ಲೂ ಸಾಮಾಜಿಕ ಅಂತರ ಕಾಣಿಸುತ್ತಿಲ್ಲ. ಅದರಲ್ಲಿಯೂ ಒಬ್ಬರ ಮುಖದ ಮೇಲೆಯೂ ಮಾಸ್ಕ್ ಇಲ್ಲ. ಕೊರೊನಾ ನಿಯಮವನ್ನು ಯಾರು ಪಾಲಿಸುತ್ತಿಲ್ಲ ಎಂದು ಕಿಡಿಕಾರಿದ್ದಾರೆ. ಇದಕ್ಕೆ ತಕ್ಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯ ಪೊಲೀಸರಿಗೆ ಒತ್ತಾಯಿಸಿದ್ದಾರೆ.

Leave a Reply

error: Content is protected !!
Scroll to Top
%d bloggers like this: