ನಿಮ್ಮ ಬಳಿಯೂ ಎಸ್ ಬಿಐ ಕ್ರೆಡಿಟ್ ಕಾರ್ಡ್ ಇದೆಯೇ?? | ಹಾಗಾದರೆ ನೀವು ಗಳಿಸಬಹುದು 20 ಸಾವಿರ ರೂ. ಮೆಗಾ ಕ್ಯಾಶ್ ಬ್ಯಾಕ್ !!

ಹಬ್ಬಗಳ ಈ ಸಮಯದಲ್ಲಿ ಎಸ್ ಬಿಐ ಹೊಸ ಆಫರ್ ಒಂದನ್ನು ಗ್ರಾಹಕರಿಗೆ ನೀಡುತ್ತಿದ್ದು ಆಫರ್ ನಲ್ಲಿ ಗ್ರಾಹಕರಿಗೆ ಬಂಪರ್ ಕೊಡುಗೆಯೇ ಕಾದಿದೆ. ಇದರ ಲಾಭವನ್ನು ಪಡೆದುಕೊಳ್ಳಬೇಕಾದರೆ ಈ ಆಫರ್ ಬಗ್ಗೆ ತಿಳಿದುಕೊಳ್ಳಿ.

ಒಂದು ವೇಳೆ ನೀವು SBI ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. SBI ಕ್ರೆಡಿಟ್ ಕಾರ್ಡ್ ಗ್ರಾಹಕರು ತಮ್ಮ ಕಾರ್ಡಿನಲ್ಲಿ ಗರಿಷ್ಠ 20 ಸಾವಿರ ರೂಪಾಯಿಗಳ ಕ್ಯಾಶ್‌ಬ್ಯಾಕ್ ಪಡೆಯಬಹುದು. ಈ ಕೊಡುಗೆಯ ಗಡುವು ಡಿಸೆಂಬರ್ 31 ರವರೆಗೆ ಇರಲಿದೆ. ಈ ಆಫರ್‌ನ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ.

ಏನಿದು ಕೊಡುಗೆ?

ಆಯ್ದ LG ಕಂಪನಿಯ ಉತ್ಪನ್ನಗಳ ಮೇಲೆ ಈ ಕೊಡುಗೆ ಲಭ್ಯವಿದೆ. ನೀವು ಎಸ್‌ಬಿಐ ಕಾರ್ಡ್‌ನೊಂದಿಗೆ ಉತ್ಪನ್ನವನ್ನು ಖರೀದಿಸಿದರೆ ನೀವು ನೀವು ಶೇ. 20ರಷ್ಟು  ಕ್ಯಾಶ್‌ಬ್ಯಾಕ್ ಪಡೆಯಬಹುದು. ಪ್ರತಿ ಕಾರ್ಡ್‌ಗೆ ಗರಿಷ್ಠ 20,000 ರೂಗಳವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು. ಈ ಕೊಡುಗೆ EMI ವಹಿವಾಟಿನಲ್ಲಿ ಮಾತ್ರ ಲಭ್ಯವಿದೆ.  ಅಂದರೆ ನೀವು ಖರೀದಿಸಿದ LG ಉತ್ಪನ್ನದ ಪಾವತಿಯನ್ನು ನೀವು ಇಎಂಐ ಆಗಿ ಪರಿವರ್ತಿಸಿದರೆ ಮಾತ್ರ ನೀವು ಈ ಕೊಡುಗೆಯ ಲಾಭವನ್ನು ಪಡೆಯಬಹುದು.

ಈ ಕೊಡುಗೆಯನ್ನು ಕೇವಲ ಪಾಯಿನ್ ಲ್ಯಾಬ್ಸ್ ಸ್ವೈಪ್ ಮಶೀನ್ ಮೇಲೆ ಮಾಡಲಾಗಿರುವ ವಹಿವಾಟಿಗೆ ಮಾತ್ರ ಮಾನ್ಯವಿರಲಿದೆ. ಯಾವ LG ಯಾವ ಉತ್ಪನ್ನಗಳ ಮೇಲೆ ನೀವು ಈ ಕ್ಯಾಶ್ ಬ್ಯಾಕ್ ಪಡೆಯಬಹುದು ಎಂಬುದನ್ನೂ ಕೂಡ SBI ಹೇಳಿದೆ. https://www.sbicard.com/en/personal/offer/lg-oct21.page ಈ ಅಧಿಕೃತ ಲಿಂಕ್ ಮೇಲೆ ಕ್ಲಿಕ್ಕಿಸುವ ಮೂಲಕ ನೀವು ಈ ಮಾಹಿತಿಯನ್ನು ಪಡೆಯಬಹುದು.

ಇತ್ತೀಚೆಗಷ್ಟೇ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಮೆಗಾ ಫೆಸ್ಟಿವಲ್ ಕೊಡುಗೆ ‘ದಮ್ ದಾರ್ ದಸ್’  ಬಿಡುಗಡೆ ಮಾಡಿತ್ತು. ಇದರ ಅಡಿ ಯಾವುದೇ ರೀತಿಯ ಆನ್ಲೈನ್ ಶಾಪಿಂಗ್ ಮೇಲೆ ಶೇ 10ರಷ್ಟು ನಿಶ್ಚಿತ ಕ್ಯಾಶ್ ಬ್ಯಾಕ್ ನೀಡಲಾಗಿತ್ತು. ಆದರೆ, ಈ ಕೊಡುಗೆ ಮೂರು ದಿನಗಳವರೆಗೆ ಮಾತ್ರ ಸೀಮಿತವಾಗಿತ್ತು.

Leave A Reply

Your email address will not be published.