ಸಾರ್ವಜನಿಕ ಶೌಚಾಲಯದಿಂದ ಹೊರ ಬಂದ ಸಿಂಹವನ್ನು ನೋಡಿ ಬೆಚ್ಚಿಬಿದ್ದ ನೆಟ್ಟಿಗರು !! | ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಈ ವಿಡಿಯೋ

ಸಾಮಾಜಿಕ ಜಾಲತಾಣಗಳಲ್ಲಿ ಇಡೀ ದಿನ ನಾನಾ ತರದ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತದೆ. ಕೆಲವೊಮ್ಮೆ ತಮಾಷೆಯ ದೃಶ್ಯಗಳು ಹೆಚ್ಚು ಮನ ಗೆದ್ದಿದ್ದರೂ ಸಹ ಎಚ್ಚರಿಕೆಯ ಸಂದೇಶ ಸಾರುವ ಕೆಲವು ದೃಶ್ಯಗಳು ಫುಲ್ ವೈರಲ್ ಆಗುತ್ತವೆ. ಜನರನ್ನು ಬೆಚ್ಚಿ ಬೀಳಿಸುವ ಕೆಲವು ವಿಡಿಯೋಗಳು ಕೆಲವು ಬಾರಿ ಆಶ್ಚರ್ಯವನ್ನುಂಟು ಮಾಡುತ್ತವೆ. ಅಂತಹುದೇ ಒಂದು ವಿಡಿಯೋ ಇದೀಗ ನೆಟ್ಟಿಗರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದೆ.

ಹೌದು, ಸಾರ್ವಜನಿಕ ಶೌಚಾಲಯದ ಒಳಗಿದ್ದ ದೈತ್ಯ ಸಿಂಹವೊಂದು ಹೊರಬರುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಾರ್ವಜನಿಕ ಶೌಚಾಲಯವನ್ನು ಬಳಸುವಾಗ ಬಹಳ ಎಚ್ಚರಿಕೆಯಿಂದಿರಿ ಎಂಬ ಸಂದೇಶದೊಂದಿಗೆ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.

ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ವೈಲ್ಡ್‌ಲೈನ್ಸ್ ಇಕೋ ಫೌಂಡೇಶನ್ ವಿಡಿಯೋವನ್ನು ಹಂಚಿಕೊಂಡಿದೆ. ಸಾರ್ವಜನಿಕ ಶೌಚಾಲಯವನ್ನು ಬಳಸುವಾಗ ಜಾಗರೂಕರಾಗಿರಿ ಎಂಬ ಸಂದೇಶವನ್ನು ಸಾರುವ ದೃಷ್ಟಿಯಿಂದ ವಿಡಿಯೋ ಹಂಚಿಕೊಳ್ಳಲಾಗಿದೆ. ಶೌಚಾಲಯದಿಂದ ಹೊರ ಬಂದ ದೈತ್ಯ ಸಿಂಹವು ಒಮ್ಮೆಲೆ ಸುತ್ತ ಮುತ್ತಲೂ ನೋಡುತ್ತದೆ. ಬಳಿಕ ನಿಧಾನವಾಗಿ ಹೊರಬಂದು ದಾರಿಯಲ್ಲಿ ಸಾಗುತ್ತದೆ.

ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಾಗಿನಿಂದ ಕೆಲವರು ಈ ಘಟನೆಯ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಇನ್ನು ಕೆಲವರು ವಿಡಿಯೋ ನೋಡಿ ಆಶ್ಚರ್ಯಗೊಂಡಿದ್ದಾರೆ. ಇನ್ನು ಕೆಲವರು ತಮಾಷೆ ಮಾಡುತ್ತಾ ಕಾಮೆಂಟ್ ವಿಭಾಗದಲ್ಲಿ ಅಭಿಪ್ರಾಯ ತಿಳಿಸಿದ್ದಾರೆ.

ಆದರೆ ಆ ಹೊತ್ತಿನಲ್ಲಿ ಅಲ್ಲಿ ಯಾರು ಇಲ್ಲದ ಕಾರಣ ಯಾವುದೇ ರೀತಿಯ ಅವಘಡ ಸಂಭವಿಸಿಲ್ಲ. ಯಾರಾದರೂ ಸಿಂಹದ ಎದುರು ಸಿಕ್ಕಿದರೆ ಅವರ ಪರಿಸ್ಥಿತಿ ಏನಾಗುತ್ತಿತ್ತು ಎಂಬ ಕಾಮೆಂಟ್ಗಳು ಈ ವಿಡಿಯೋಗೆ ಸಿಕ್ಕಾಪಟ್ಟೆ ಬಂದಿದೆ. ಆದರೆ ಈ ವಿಡಿಯೋ ಹಲವರನ್ನು ಭಯಭೀತರನ್ನಾಗಿಸಿದೆ ಎಂಬುದು ಮಾತ್ರ ಸತ್ಯ.

Leave A Reply

Your email address will not be published.