ಟೋಲ್‌ಗೇಟ್ ಗೆ ಮಿನಿ ಲಾರಿಡಿಕ್ಕಿ | ಪವಾಡ ಸದೃಶ ಪಾರಾದ ಚಾಲಕ,ಟೋಲ್‌ಗೇಟ್ ಸಿಬ್ಬಂದಿ

ಟೋಲ್ ಗೇಟಿಗೆ ಮಿನಿ ಲಾರಿ ಡಿಕ್ಕಿ ಹೊಡೆದು ಸಿನಿಮೀಯ ರೀತಿಯಲ್ಲಿ ಚಾಲಕ ಮತ್ತು ಟೋಲ್ ಸಿಬ್ಬಂದಿಗಳು ಪಾರಾಗಿರುವ ಘಟನೆ ಚಿಕ್ಕೋಡಿ ಜಿಲ್ಲೆಯ ನಿಪ್ಪಾಣಿ – ಮುಧೋಳ ರಾಜ್ಯ ಹೆದ್ದಾರಿಯ ಚಿಕ್ಕೋಡಿ ತಾಲೂಕಿನ ಚಿಂಚಣಿ ಆದಿತ್ಯವಾರ ನಡೆದಿದೆ.

ಮಿನಿ ಲಾರಿ ಚಾಲಕ ಉದಯ ಕುಂಬಾರ ಸೇರಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.
ಎಂಸ್ಯಾಂಡ್ ತುಂಬಿಕೊಂಡು ಅತೀ ವೇಗವಾಗಿ ಹೋಗುತ್ತಿದ್ದ ಮಿನಿ ಲಾರಿ ಚಾಲಕನ ನಿಯಂತ್ರಣ ತಪ್ಪಿ ಟೋಲ್‌ಗೇಟ್ ಗೆ ಡಿಕ್ಕಿ ಹೊಡೆದಿದೆ ಎಂಬುದು ಸ್ಥಳಿಯರು ಹೇಳಿದ್ದಾರೆ.

ಅಪಘಾತದ ರಭಸಕ್ಕೆ ಮಿನಿ ಲಾರಿ ನುಜ್ಜುಗುಜ್ಜಾಗಿದೆ. ಟೋಲ್ ಗೇಟಿಗೂ ಹಾನಿಯಾಗಿದೆ. ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave A Reply

Your email address will not be published.