ಐಟಿಐ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ!! ರೈಲ್ವೇ ಇಲಾಖೆಯಲ್ಲಿ 3366 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ರೈಲ್ವೇ ಇಲಾಖೆಯಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ನಡೆಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅಭ್ಯರ್ಥಿಗಳು ನವೆಂಬರ್ 03 ರ ಒಳಗಾಗಿ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೋರಲಾಗಿದೆ.

ವಿದ್ಯಾರ್ಹತೆ:ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ಎಸ್ಎಸ್ ಎಲ್ ಸಿ ತೇರ್ಗಡೆ ಹೊಂದಿದ್ದು, ಐಟಿಐ ಯಲ್ಲಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳನ್ನು ಐಟಿಐ ಅಂಕಗಳ ಅನುಸಾರ ಆಯ್ಕೆ ಹಾಗೂ ನೇಮಕಾತಿ ನಡೆಸಲಾಗುತ್ತದೆ. ಅಭ್ಯರ್ಥಿಗಳು ಕನಿಷ್ಠ 18 ಹಾಗೂ ಗರಿಷ್ಠ 24 ವರ್ಷ ವಯಸ್ಸಿನವರಾಗಿರಬೇಕು.
ಅರ್ಜಿ ಶುಲ್ಕ 100 ರೂಪಾಯಿ ಪಾವತಿಸಬೇಕಾಗಿದೆ.

Leave A Reply

Your email address will not be published.