ಐಸ್​ಕ್ಯಾಂಡಿ ಇಡ್ಲಿ ಆಯ್ತು, ಈಗ ಚಾಕ್ಲೇಟ್ ಹಾಗೂ ಸ್ಟ್ರಾಬೆರಿ ಫ್ಲೇವರ್ ನಲ್ಲಿ ಮುಳುಗೆದ್ದ ಸಮೋಸದ್ದೇ ಹವಾ!! | ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಈ ಸಮೋಸ

ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯ ದೇಶಿಯ ತಿನಿಸುಗಳ ಹೊಸ ಫ್ಯೂಷನ್ ನಡೆಯುತ್ತಲಿದೆ. ಪಾಕಪ್ರವೀಣರ ಹೊಸ ಹೊಸ ಪ್ರಯೋಗಗಳು ಇದೀಗ ಸಖತ್ ವೈರಲ್ ಆಗುತ್ತಿದೆ. ಇತ್ತೀಚೆಗೆ ಐಸ್​ಕ್ಯಾಂಡಿ ಇಡ್ಲಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿತ್ತು. ಈಗ ಅದೇ ರೀತಿ ಇನ್ನೊಂದು ಬಗೆಯ ಫ್ಯೂಷನ್ ತಿನಿಸು ಎಲ್ಲೆಡೆ ಹರಿದಾಡುತ್ತಿದೆ.

ಹೌದು, ಇದೀಗ ಚಾಕೊಲೇಟ್-ಸ್ಟ್ರಾಬೆರಿಯಲ್ಲಿ ಮುಳುಗೆದ್ದ ಸಮೋಸ ಚಿತ್ರಗಳು ವೈರಲ್ ಆಗುತ್ತಿವೆ. ಪಾಕಪ್ರವೀಣರ ಹೊಸ ಪ್ರಯೋಗಗಳು ಇಂಟರ್ನೆಟ್​ನಲ್ಲಿ ಜೋರಾಗಿಯೇ ಸದ್ದು ಮಾಡುತ್ತಿವೆ. ವೈರಲ್ ವಿಡಿಯೊ ನೋಡಿದ ಸಾಮಾಜಿಕ ಮಾಧ್ಯಮ ಬಳಕೆದಾರರು ಇಷ್ಟಪಟ್ಟು ಹಂಚಿಕೊಳ್ಳುತ್ತಿದ್ದಾರೆ. ಎರಡು ವಿಭಿನ್ನ ಸವಿಯ ಖಾದ್ಯಗಳನ್ನು ಬೆಸೆದಿರುವ ವಿಧಾನದ ಬಗ್ಗೆ ಗೊಂದಲದೊಂದಿಗೆ ಆಶ್ಚರ್ಯವನ್ನೂ ಸೂಚಿಸುತ್ತಿದ್ದಾರೆ.

ಇಂಥದ್ದೊಂದು ವಿಡಿಯೊ ಟ್ವೀಟ್ ಮಾಡಿರುವ ಕೈಗಾರಿಕೋದ್ಯಮಿ ಹರ್ಷ್​ ಗೋಯೆಂಕಾ, ‘ಲಾಲಿಪಾಪ್ ಇಡ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡಿದ್ದೇನೋ ಸರಿ. ಆದರೆ ಇದರ ಬಗ್ಗೆ ಏನು ಹೇಳುವುದು’ ಎಂದು ಕೇಳಿದ್ದಾರೆ. ವೈರಲ್ ಆಗಿರುವ ವಿಡಿಯೊವನ್ನು ಈವರೆಗೆ ಸುಮಾರು 24 ಸಾವಿರ ಮಂದಿ ನೋಡಿದ್ದಾರೆ. 18 ಸೆಕೆಂಡ್​ಗಳ ಕ್ಲಿಪ್​ನಲ್ಲಿ ವ್ಯಕ್ತಿಯೊಬ್ಬರು ಹಲವು ಬಗೆಯ ಸಮೋಸಗಳನ್ನು ಪ್ರದರ್ಶಿಸಿದ್ದಾರೆ. ಇದರಲ್ಲಿ ಚಾಕೊಲೇಟ್ ಮತ್ತು ಸ್ಟ್ರಾಬೆರಿ ಫ್ಲೇವರ್​ಗಳಲ್ಲಿ ಅದ್ದಿ ತೆಗೆದ ಸಮೋಸಗಳೂ ಸೇರಿವೆ. ಮತ್ತೊಂದು ವಿಧದ ಸಮೋಸದ ಒಳಗೆ ಸಿಹಿಯಾದ ಜಾಮ್ ತುಂಬಲಾಗಿದೆ. ಮಗದೊಂದು ಬಗೆಯ ಸಮೋಸಾದಲ್ಲಿ ತಂದೂರಿ ಪನೀರ್​ನ ಹೂರಣವಿದೆ.

Ad Widget
Ad Widget

Ad Widget

Ad Widget

ಆದರೆ ಬಹುತೇಕರಿಗೆ ಈ ಫ್ಯೂಷನ್ ಇಷ್ಟವಾಗಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಪ್ರಾಯ ಬರೆದುಕೊಂಡಿರುವ ಒಬ್ಬರು, ‘ಚೀಸ್ ಯಾಕೆ ಹಾಕಿಲ್ಲ? ಇಷ್ಟಪಟ್ಟು ತಿನ್ನುವ ಬೀದಿ ತಿನಿಸಿಗೆ ಏಕಿಂಥ ಅವಸ್ಥೆ?’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Leave a Reply

error: Content is protected !!
Scroll to Top
%d bloggers like this: