ಆಗಸ್ಟ್ ತಿಂಗಳಲ್ಲಿ ಭಾರತದ ಬರೋಬ್ಬರಿ 20 ಲಕ್ಷ ವಾಟ್ಸಾಪ್ ಖಾತೆಗಳು ಬ್ಯಾನ್ !! | ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ ವಾಟ್ಸಪ್

ವಾಟ್ಸಪ್ ಇದೀಗ ಭಾರತೀಯ ಫೋನ್ ನಂಬರ್ ಗಳನ್ನು ನಿಷೇಧ ಮಾಡಿರುವ ಸುದ್ದಿ ಹೊರಬಿದ್ದಿದೆ. ಆಗಸ್ಟ್ ತಿಂಗಳಿನಲ್ಲಿ ಬರೋಬ್ಬರಿ 20 ಲಕ್ಷ ಭಾರತೀಯ ಫೋನ್ ನಂಬರ್ ಗಳನ್ನು ನಿಷೇಧಿಸಿದೆ ಎಂದು ವರದಿಯಾಗಿದೆ

ಮಂಗಳವಾರ ಬಿಡುಗಡೆ ಮಾಡಿದ ತನ್ನ ಇತ್ತೀಚಿನ ವರದಿಯಲ್ಲಿ, ಒಟ್ಟು 20,70,000 ಭಾರತೀಯ ಖಾತೆಗಳನ್ನು ನಿಷೇಧಿಸಿದೆ ಎಂದು ಹೇಳಿದೆ. ಭಾರತೀಯ ಖಾತೆಯನ್ನು +91 ಫೋನ್‌ ಸಂಖ್ಯೆಯ ಮೂಲಕ ಗುರುತಿಸಲಾಗಿದೆ ಎಂದು ವಾಟ್ಸಪ್ ತಿಳಿಸಿದೆ.

ಮೇ 26 ರಂದು ಹೊಸ ಐಟಿ ನಿಯಮಗಳು ಜಾರಿಯಾದ ಬಳಿಕ 50 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಬಳಕೆದಾರರು ಇರುವ ಸಾಮಾಜಿಕ ಜಾಲತಾಣಗಳು ಮತ್ತು ಮೆಸೇಂಜಿಂಗ್ ಅಪ್ಲಿಕೇಶನ್ ಗಳು ಸರ್ಕಾರಕ್ಕೆ ವರದಿ ಸಲ್ಲಿಸುವುದನ್ನು ಕಡ್ಡಾಯ ಮಾಡಲಾಗಿದೆ.

ಎಷ್ಟು ದೂರುಗಳು ಬಂದಿದೆ? ದೂರಿಗೆ ಯಾವ ಕ್ರಮವನ್ನು ಕೈಗೊಳ್ಳಲಾಗಿದೆ ಈ ಎಲ್ಲ ವಿವರಗಳನ್ನು ಸರ್ಕಾರಕ್ಕೆ ಸಲ್ಲಿಸಬೇಕಾಗುತ್ತದೆ. ಸುಳ್ಳು ಸುದ್ದಿ ಜೊತೆಗೆ ನಕಲಿ ವಿಡಿಯೋಗಳು ಹರಿದಾಡಿ ಘರ್ಷಣೆಗೆ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಕಠಿಣ ನಿಯಮ ಜಾರಿ ಮಾಡಿದೆ.

ಹಾಗಾಗಿ ಸುಳ್ಳು ಸುದ್ದಿ ಹಾಗೂ ವಿಡಿಯೋಗಳನ್ನು ಹಾರಿಬಿಟ್ಟ 20 ಲಕ್ಷ ಜನರ ವಾಟ್ಸಪ್ ನಂಬರನ್ನು ನಿಷೇಧಿಸಿದೆ ಎಂದು ತಿಳಿದುಬಂದಿದೆ. ಹಾಗಾಗಿ ನಾವು ಇಂತಹ ಅಪ್ಲಿಕೇಶನ್ ಗಳ ದುರುಪಯೋಗ ಮಾಡಿಕೊಳ್ಳಬಾರದು. ಇಲ್ಲದಿದ್ದರೆ ಇಂತಹ ದೊಡ್ಡ ಶಿಕ್ಷೆಗೆ ಗುರಿಯಾಗಬೇಕಾದೀತು.

Leave A Reply

Your email address will not be published.