ಡ್ರೈವಿಂಗ್ ವೇಳೆ ಬ್ಲೂಟೂತ್, ಇಯರ್​​ ಫೋನ್ ಬಳಕೆ ಮಾಡುವವರೇ ಎಚ್ಚರ!!|ಇನ್ನು ಮುಂದೆ ಚಾಲನೆ ವೇಳೆ ಎಲೆಕ್ಟ್ರಾನಿಕ್ ಸಾಧನ ಬಳಸಿದರೂ ಬೀಳಲಿದೆ ದಂಡ

ಬೆಂಗಳೂರು: ​ಡ್ರೈವಿಂಗ್​ ವೇಳೆ ಹೆಚ್ಚಿನ ಜನರು ಮನೋರಂಜನೆಯಾಗಿ ಅಥವಾ ಫೋನ್ ಕಾಲ್ ಗಾಗಿ ಬ್ಲ್ಯೂಟೂತ್​, ಇಯರ್​​ ಫೋನ್ ಬಳಕೆ ಮಾಡುವವರ ಸಂಖ್ಯೆ ಅತಿಯಾಗೆ ಇದೆ. ಇದೀಗ ಇದರ ವಿರುದ್ಧ ಬೆಂಗಳೂರು ಪೋಲಿಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

ಹೌದು, ಒಂದು ವೇಳೆ ನೀವು ಬ್ಲ್ಯೂಟೂತ್​ ಅಥವಾ ಹೆಡ್​ಫೋನ್​ ಬಳಸಿ ವಾಹನ ಚಾಲನೆ ಮಾಡಿದ್ರೆ ನಿಮ್ಮ ವಿರುದ್ದ ಕಾನೂನು ಕ್ರಮವನ್ನು ತೆಗೆದುಕೊಳ್ಳಲಿದ್ದು, ಪೋಲಿಸರು ಈ ವೇಳೆ 1000 ರೂಪಾಯಿಯ ದಂಡ ವಿಧಿಸಿ ರಶೀದಿ ನೀಡಲಿದ್ದಾರಂತೆ.

ಸಂಚಾರಿ ನಿಯಮ ಉಲ್ಲಂಘನೆ ಅಡಿಯಲ್ಲಿ ಹೆಲ್ಮೆಟ್​ ಧರಿಸಿ ಅದರಡಿಯಲ್ಲಿ ಇಯರ್​ ಫೋನ್​ ಹಾಕಿಕೊಂಡರು ಕೂಡ ಅದು ಕಾನೂನು ಬಾಹಿರವಾಗಿದೆ. ಇದಲ್ಲದೇ ಕಾನೂನಿನ ಪ್ರಕಾರ ವಾಹನಗಳನ್ನು ಚಲಾಯಿಸುವಾಗ ಯಾವುದೇ ರೀತಿಯ ಎಲೆಕ್ಟ್ರಾನಿಕ್​ ಸಾಧನಗಳನ್ನು ಉಪಯೋಗಿಸುವುದು ಕಾನೂನು ಬಾಹಿರ.

ಇನ್ನೂ ಕಿವಿಗೆ ಇಯರ್‌ ಫೋನ್‌ ಸಿಕ್ಕಿಸಿಕೊಂಡು ಹಾಡುಗಳನ್ನು ಕೇಳಿಕೊಂಡು ವಾಹನಗಳನ್ನು ಸವಾರಿ ಮಾಡುವ ವೇಳೆಯಲ್ಲಿ ವಾಹನಗಳ ಹಾರನ್‌ ಕೇಳಿಸದೇ ಅಪಘಾತವಾಗಿರುವ ಘಟನೆಗಳು ಕೂಡ ಹೆಚ್ಚು ನಮ್ಮಲ್ಲಿ ಸಂಭವಿಸಿದೆ ಕೂಡ. ಈ ನಿಟ್ಟಿನಲ್ಲಿ ನೀವು ಏನು ಆದ್ರು ವಾಹನ ಚಲಾಯಿಸುವ ವೇಳೆಯಲ್ಲಿ ಬ್ಲ್ಯೂಟೂತ್​, ಇಯರ್​​ ಫೋನ್‌ಗಳು ನಿಮ್ಮ ಕಿವಿಗೆ ಹಾಕಿಕೊಳ್ಳುವ ಮುನ್ನ ಎಚ್ಚರ ವಹಿಸಿ ಯಾಕಂದ್ರೆ ವಾಹನ ಚಲಾವಣೆ ವೇಳೆ ಎಲೆಕ್ಟ್ರಾನಿಕ್​ ಸಾಧನಗಳನ್ನು ಉಪಯೋಗಿಸುವುದು ಕಾನೂನು ಬಾಹಿರ.

Leave A Reply

Your email address will not be published.