ಕೊರೋನಾ ಲಾಕ್ಡೌನ್ ನಿಂದ ಮನೆಯಲ್ಲಿಯೇ ಕುಳಿತು ದಪ್ಪಗಾಗಿದ್ದ ಹುಡುಗ-ಹುಡುಗಿ ತಮ್ಮ ಮದುವೆಯಲ್ಲಿ ಮಾಡಿದ್ದೇನು ಗೊತ್ತಾ ?

ಕೊರೋನಾ ಲಾಕ್‍ಡೌನ್ ಸಮಯದಲ್ಲಿ ಎಲ್ಲರೂ ದೈಹಿಕ ಚಟುವಟಿಕೆಗಳನ್ನು ನಡೆಸದೇ ಆಲೂಗಡ್ಡೆಯಂತೆ ದಪ್ಪಗಾಗಿರುವುದು ಸಾಮಾನ್ಯ. ಆದರೆ ದೈಹಿಕ ಚಟುವಟಿಕೆಗಳು ನಮ್ಮ ಸೋಮಾರಿತನವನ್ನು ಹೋಗಲಾಡಿಸಿ ದಿನಚರಿಯನ್ನು ಆರಂಭಿಸಲು ಸ್ಫೂರ್ತಿದಾಯಕವಾಗಿದೆ. ಇಡೀ ದಿನ ನಮ್ಮನ್ನು ಲವಲವಿಕೆಯಿಂದ ಇಡುತ್ತದೆ.

ಹೀಗಿರುವಾಗ ಮದುವೆ ಸಮಾರಂಭದಲ್ಲಿ ಜೋಡಿಯೊಂದು ಫಿಟ್ನೆಸ್ ಮಂತ್ರ ಹೇಳಿದ ಘಟನೆ ನಡೆದಿದೆ. ವಧು-ವರ ಇಬ್ಬರೂ ತಮ್ಮ ಮದುವೆಯಲ್ಲಿ ಪುಶ್ ಅಪ್ಸ್ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಹೌದು, ಸಾಮಾನ್ಯವಾಗಿ ಮದುವೆ ಸಮಾರಂಭದಲ್ಲಿ ವಧು ಹಾಗೂ ವರರು ಬಂದ ಅತಿಥಿಗಳೊಂದಿಗೆ ಫೋಟೋಗೆ ಪೋಸ್ ನೀಡುವುದನ್ನು ನೋಡಿರುತ್ತೇವೆ. ಕೆಲವು ಜೋಡಿಗಳು ಹಾಡು ಅಥವಾ ಕಪಲ್ ಡ್ಯಾನ್ಸ್ ಪ್ರದರ್ಶಿಸುವ ಮೂಲಕ ಮನರಂಜನೆ ನೀಡುತ್ತಾರೆ. ಆದರೆ ಇಲ್ಲಿ ಜೋಡಿಯೊಂದು ಮದುವೆ ಕಾರ್ಯಕ್ರಮದಲ್ಲಿ ಅತಿಥಿಗಳಿರುವುದನ್ನು ಲೆಕ್ಕಿಸದೇ ನೀನಾ-ನಾನಾ ಎಂಬಂತೆ ಪುಶ್ ಅಪ್ಸ್ ಮಾಡಿದ್ದಾರೆ. ಇದನ್ನು ಕಂಡು ಅಲ್ಲಿದ್ದವರೆಲ್ಲಾ ಬೆರಗಾಗಿದ್ದಾರೆ.

Ad Widget
Ad Widget

Ad Widget

Ad Widget

ಸದ್ಯ ಈ ವೀಡಿಯೋವನ್ನು ವಿಟ್ಟಿ-ವೆಡ್ಡಿಂಗ್ ಎಂಬ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ವಧು ವರ ಇಬ್ಬರು ಮದುವೆಯ ಉಡುಪಿನಲ್ಲಿಯೇ ವೇದಿಕೆಯ ಮೇಲೆ ಪುಶ್ ಅಪ್ಸ್ ಮಾಡಿದ್ದಾರೆ. ವೀಡಿಯೋದಲ್ಲಿ ವಧು ಕೆನೆ ಮತ್ತು ಕೆಂಪು ಬಣ್ಣದ ಲೆಹೆಂಗಾ, ಭಾರೀ ಚಿನ್ನಾಭರಣಗಳಲ್ಲಿ ಮಿಂಚುತ್ತಿದ್ದರೆ, ವರ ಗುಲಾಬಿ ಬಣ್ಣದ ಶೇರ್ವಾನಿ ಧರಿಸಿದ್ದಾರೆ. ಮದುವೆ ಉಡುಪು ಧರಿಸಿದ್ದರೂ ಇಬ್ಬರು ಬಹಳ ಸುಲಭವಾಗಿ ಪುಶ್ ಅಪ್ಸ್ ಮಾಡಿದ್ದಾರೆ.

Leave a Reply

error: Content is protected !!
Scroll to Top
%d bloggers like this: