ಧರ್ಮಸ್ಥಳ | ಧರ್ಮಾಧಿಕಾರಿಗಳ ಮುಡಿಗೇರಿತು ಮತ್ತೊಂದು ಪಟ್ಟ | ‘ಏಷ್ಯಾ ಖಂಡದ ಶ್ರೇಷ್ಠ ನಾಯಕರು’ ನಮ್ಮ ಖಾವಂದರು

Share the Article

ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಪ್ರತಿಷ್ಠಿತ ‘ಏಷ್ಯಾ ಖಂಡದ ಶ್ರೇಷ್ಠ ನಾಯಕರು’ ಎಂಬ ಪ್ರಶಸ್ತಿಯ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

“ಏಷ್ಯಾವನ್” ಜಾಗತಿಕ ಪತ್ರಿಕೆಯು ಏಷ್ಯಾ ಖಂಡದ ಸಾಮಾಜಿಕ ನಾಯಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತದೆ. ಈ ಬಾರಿ ಏಷ್ಯಾವನ್ 14ನೇ ಆವೃತ್ತಿಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆ.27ರಂದು ಶುಕ್ರವಾರ ಆನ್‌ಲೈನ್ ಮೂಲಕ ಆಯೋಜಿಸಲಾಗಿತ್ತು.

ಈ ಬಾರಿಯ ಪ್ರತಿಷ್ಠಿತ “ಏಷ್ಯಾ ಖಂಡದ ಶ್ರೇಷ್ಠ ನಾಯಕರು” ಎಂಬ ಪ್ರಶಸ್ತಿಯು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯದ
ಕುಲಪತಿಗಳಾದ ಶ್ರೀ ಕ್ಷೇತ್ರ ಧರ್ಮಸ್ಥಳದ
ಧರ್ಮಾಧಿಕಾರಿ ಪೂಜ್ಯ ವೀರೇಂದ್ರ ಹೆಗ್ಗಡೆಯವರಿಗೆ ದೊರಕಿದೆ.

ಹಲವು ವರ್ಷಗಳಿಂದ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿಗಳಾಗಿ ಧರ್ಮದ ಹಾದಿಯಲ್ಲಿ ನಡೆಯುತ್ತಿದ್ದಾರೆ. ಸಮಾಜ ಸೇವೆಗೆ ಇವರು ಸಾಕಷ್ಟು ಪ್ರಸಿದ್ಧರಾಗಿದ್ದು, ಸರಳತೆಗೆ ಮತ್ತೊಂದು ಹೆಸರೇ ಇವರು.

ಹಲವು ಪ್ರಶಸ್ತಿಗಳನ್ನು ಈಗಾಗಲೇ ಮುಡಿಗೇರಿಸಿಕೊಂಡಿರುವ ಕೀರ್ತಿ ಇವರದ್ದಾಗಿದ್ದು ,ಇದೀಗ ಆನ್ಲೈನ್ ಮೂಲಕ ಏಷ್ಯಾ ಖಂಡದ ಶ್ರೇಷ್ಠ ನಾಯಕ ಪ್ರಶಸ್ತಿಯನ್ನು ಇವರಿಗೆ ಪ್ರದಾನ ಮಾಡಿ ಗೌರವಿಸಲಾಗಿದೆ.

Leave A Reply

Your email address will not be published.