ಪರಾಕಾಷ್ಠೆ ತಲುಪಿದ ಪತಿಯ ಅನುಮಾನ | ಪರ ಪುರುಷರೊಂದಿಗೆ ಆಕೆ ಸೆಕ್ಸ್ ಮಾಡಿಬಿಟ್ಟರೆ ಎಂದು ಆಕೆಯ ಯೋನಿಯನ್ನೇ ಹೊಲಿದ ಹೊಲಸುಗಾರ !

ಪತ್ನಿಯ ಶೀಲ ಶಂಕಿಸಿ ಬೇರೆ-ಬೇರೆ ರೀತಿಯಲ್ಲಿ ಶಿಕ್ಷೆ ಕೊಡುವಂತಹ ಗಂಡಂದಿರನ್ನು ನೀವು ನೋಡಿರಬಹುದು. ಆದರೆ ಇಲ್ಲೊಬ್ಬ ಪಾಪಿ ಪತಿ ಮಹಾಶಯ ತನ್ನ ಪತ್ನಿಯ ಮೇಲೆ ಸಂಶಯ ಪಟ್ಟು, ಎಂತಹ ಕೃತ್ಯ ನಡೆಸಿದ್ದಾನೆಂದು ತಿಳಿದರೆ ನೀವೇ ದಿಗ್ಭ್ರಮೆಗೊಳ್ಳುತ್ತೀರಿ.

ಹೌದು, ಪಾಪಿ ಪತಿಯೊಬ್ಬ ತನ್ನ ಪತ್ನಿಯ ಮೇಲೆ ಅನುಮಾನ ಪಟ್ಟು, ಆಕೆಯ ಜನನಾಂಗವನ್ನು ಸೂಜಿಯಿಂದ ಹೊಲಿದಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ಸಿಂಗೌಲಿ ಜಿಲ್ಲೆಯ ರೈಲಾ ಗ್ರಾಮದಲ್ಲಿ ನಡೆದಿದೆ.

ಗಂಡನ ಕೃತ್ಯದ ಬಗ್ಗೆ ಪತ್ನಿ ಮಾಹಿತಿ ನೀಡಿದ ಬೆನ್ನಲ್ಲೇ ಆತನ ವಿರುದ್ಧ ದೂರು ದಾಖಲಾಗಿದೆ ಎಂದು ಸಿಂಗೌಲಿಯ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಸೋಂಕ ತಿಳಿಸಿದ್ದಾರೆ. ಸದ್ಯ ಆರೋಪಿ ಪತಿ ಪರಾರಿಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Ad Widget
Ad Widget

Ad Widget

Ad Widget

ಕ್ರೂರಿ ಗಂಡ ಕ್ಷಮಿಸಲಾರದ ತಪ್ಪನ್ನು ಎಸಗಿದ್ದರೂ ಸಹ ಆತನೆಡೆಗೆ ಕರುಣೆ ತೋರಿರುವ ಪತ್ನಿ ಯಾವುದೇ ಕಠಿಣ ಕ್ರಮ ತೆಗೆದುಕೊಳ್ಳಬೇಡಿ, ಆತನನ್ನು ಬಂಧಿಸಬೇಡಿ ಎಂತ ಪೊಲೀಸರ ಬಳಿ ಅಂಗಲಾಚಿ ಬೇಡಿಕೊಂಡಿದ್ದಾಳೆ. ಅಲ್ಲದೆ, ಗಂಡನಿಗೆ ಬುದ್ಧಿವಾದ ಹೇಳಿ, ಆತನಿಗೆ ಬೇಕಾದರೆ ಒಂದೆರೆಡು ಮಾತು ಬೈಯಿರಿ, ಮುಂದೆ ಇಂತಹ ಕೃತ್ಯ ಎಸಗದಂತೆ ತಿಳಿ ಹೇಳಿರಿ ಎಂದು ಮನವಿ ಮಾಡಿಕೊಂಡಿದ್ದಾಳೆ.

ಸದ್ಯ ಸಂತ್ರಸ್ತೆ ಸಿಂಗೌಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ಆರೋಗ್ಯ ಸ್ಥಿರವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

error: Content is protected !!
Scroll to Top
%d bloggers like this: