ಬೆಳ್ಳಾರೆಯ ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ (ರಿ) ಮತ್ತು ಎಸ್ಕೆ ಎಸ್ ಎಸ್ ಎಫ್ ಬೆಳ್ಳಾರೆ ವತಿಯಿಂದ ಆಂಬ್ಯುಲೆನ್ಸ್ ಲೋಕಾರ್ಪಣೆ ಹಾಗೂ ತುರ್ತು ಸಂದರ್ಭದಲ್ಲಿ ಬೇಕಾಗುವ ಪರಿಕರಗಳ ಹಸ್ತಾಂತರ ಕಾರ್ಯಕ್ರಮ

ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ (ರಿ) ಬೆಳ್ಳಾರೆ ,ಎಸ್ಕೆ ಎಸ್ ಎಸ್ ಎಫ್ ಬೆಳ್ಳಾರೆ ವತಿಯಿಂದ ಆಂಬ್ಯುಲೆನ್ಸ್ ಲೋಕಾರ್ಪಣೆ ,ತುರ್ತು ಸಂದರ್ಭದಲ್ಲಿ ಬೇಕಾಗುವ ಆರೋಗ್ಯ ಪರಿಕರ ಸೇರಿದಂತೆ ಇನ್ನಿತರ ಅಗತ್ಯ ಸಂದರ್ಭದಲ್ಲಿ ಬೇಕಾಗುವ ಪರಿಕರಗಳನ್ನು ಹಸ್ತಾಂತರ ಮಾಡುವ ಕಾರ್ಯಕ್ರಮವು ಆಗಸ್ಟ್ 27 ಶುಕ್ರವಾರದಂದು ಸಂಜೆ 4 ಗಂಟೆಗೆ ಸರಿಯಾಗಿ ನಡೆಯಲಿದೆ.

ಈ ಕಾರ್ಯಕ್ರಮ ವು ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ (ರಿ) ಬೆಳ್ಳಾರೆ ಸ್ಥಾಪಕಧ್ಯಕ್ಷರಾದ ಯು ಹೆಚ್ ಅಬೂಬಕ್ಕರ್ ಹಾಜಿಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.ಎಸ್ಕೆ ಎಸ್ ಎಸ್ ಎಫ್ ದ.ಕ ಜಿಲ್ಲಾಧ್ಯಕ್ಷರಾದ ಅಮೀರ್ ತಂಙಳ್ ಹಾಗೂ ಅಹ್ಮದ್ ಪುಕೋಯ ತಂಙಳ್ ಪುತ್ತೂರು ದುವಾರ್ಶೀವಚನಕ್ಕೆ ನೇತೃತ್ವ ನೀಡಲಿದ್ದಾರೆ. ಪಾರಪಳ್ಳಿ ಕಾಂಞಗಾಡ್ ಜುಮಾ ಮಸೀದಿಯ ಖತೀಬರಾದ ಹಸನ್ ಅರ್ಶದಿ ಬೆಳ್ಳಾರೆ ಉದ್ಘಾಟನೆಗೈಯಲಿದ್ದಾರೆ.ಎಸ್ಕೆ ಎಸ್ ಎಸ್ ಎಫ್ ಕರ್ನಾಟಕ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಹಾಗೂ ಎಸ್ಕೆ ಎಸ್ ಎಸ್ ಎಫ್ ಟ್ರೆಂಡ್ ಕೇಂದ್ರ ಸಮಿತಿ ಸದಸ್ಯ ಇಕ್ಬಾಲ್ ಬಾಳಿಲ ಪ್ರಾಸ್ತಾವಿಕ ಭಾಷಣ ಗೈಯಲಿದ್ದಾರೆ.

ವಿಖಾಯ ಚೇರ್ಮನ್ ಎಸ್ಕೆ ಎಸ್ ಎಸ್ ಎಫ್ ದ.ಕ ಜಿಲ್ಲಾಧ್ಯಕ್ಷ ಇಸ್ಮಾಯಿಲ್ ತಂಙಳ್ ಉಪ್ಪಿನಂಗಡಿ ,ನೂರುಲ್ ಹುದಾ ಮಾಡನ್ನೂರು ಪ್ರಿನ್ಸಿಪಾಲ್ ಅಡ್ವಕೇಟ್ ಹನೀಫ್ ಹುದವಿ ದೇಲಂಪಾಡಿ , ಇಸ್ಹಾಕ್ ಹಾಜಿ ಪಾಜಪಳ್ಳ , ಬೆಳ್ಳಾರೆ ಪೋಲಿಸ್ ಠಾಣೆಯ ಠಾಣಾಧಿಕಾರಿ ಆಂಜನೇಯ ರೆಡ್ಡಿ , ಅಬ್ದುಲ್ ಖಾದರ್ ಹಾಜಿ ಬಯಂಬಾಡಿ,ಕೇಂದ್ರ ಜುಮಾ ಮಸೀದಿ ಮಳಲಿ ಖತೀಬರಾದ ತಾಜುದ್ದೀನ್ ರಹ್ಮಾನಿ ,ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ l ಗಿರೀಶ್ ಎಂ ,ಅಶ್ವಿನಿ ಕ್ಲೀನಿಕ್ ಬೆಳ್ಳಾರೆ ಯ ಡಾ l ತಿಲಕ್ ಎಸ್ ಭಟ್ , ಲೈಫ್ ಕೇರ್ ಕ್ಲೀನಿಕ್ ಬೆಳ್ಳಾರೆ ಯ ಡಾ l ರಿಝ್ವಾನ್ , ಬೆಳ್ಳಾರೆ ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ ಪನ್ನೆ , ಬೆಳ್ಳಾರೆ ಸಿ ಎ ಬ್ಯಾಂಕ್ ಅಧ್ಯಕ್ಷ ಅನಿಲ್ ರೈ ಚಾವಡಿಬಾಗಿಲು ,ಬೆಳ್ಳಾರೆ ವರ್ತಕರ ಸಂಘದ ಅಧ್ಯಕ್ಷ ಮಾಧವ ಗೌಡ ಬೆಳ್ಳಾರೆ , ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಶೇಖರ ಕಾಮತ್ , ಪೆರುವಾಜೆ ಗ್ರಾ.ಪಂ ಸದಸ್ಯ ಪದ್ಮನಾಭ ಶೆಟ್ಟಿ ಪೆರುವಾಜೆ, ಸುಳ್ಯ ವಲಯ ಎಸ್ಕೆ ಎಸ್ ಎಸ್ ಎಫ್ ಅಧ್ಯಕ್ಷ ಜಮಾಲುದ್ದೀನ್ ಕೆ ಎಸ್ , ಎಸ್ಕೆ ಎಸ್ ಎಸ್ ಎಫ್ ಬೆಳ್ಳಾರೆ ಕ್ಲಸ್ಟರ್ ಅಧ್ಯಕ್ಷ ಸಿದ್ದೀಕ್ ಮಾಲೆಂಗೇರಿ ,ಎಸ್ಕೆ ಎಸ್ ಎಸ್ ಎಸ್ ಎಫ್ ಬೆಳ್ಳಾರೆ ಯೂನಿಟ್ ಅಧ್ಯಕ್ಷ ಮಹಮ್ಮದ್ ಅಂದ್ರು ಅಲ್ಲದೆ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆಯೆಂದು ಕಾರ್ಯಕ್ರಮ ಸಂಘಟಕರು ತಿಳಿಸಿದ್ದಾರೆ.

Ad Widget / / Ad Widget

Leave a Reply

error: Content is protected !!
Scroll to Top
%d bloggers like this: