ತನ್ನ ಪ್ರೀತಿಗೆ ಅಡ್ಡಿಯಾದ ಪ್ರೇಯಸಿಯ ತಂದೆಯನ್ನೇ ಕೊಂದ ಪ್ರಿಯಕರ!!

ಮಗಳನ್ನು ಪ್ರೀತಿಸಿದ ಯುವಕ ಆಕೆಯ ತಂದೆಗೆ ಇಷ್ಟವಾಗದ ಕಾರಣ ‘ನನ್ನ ಮಗಳನ್ನು ಪ್ರೀತಿಸಬೇಡ’ ಎಂದದಕ್ಕೆ ಕೋಪಗೊಂಡ ಯುವಕ ಪ್ರೇಯಸಿಯ ತಂದೆಯನ್ನೇ ಕೊಂದ ಘಟನೆ ನೆಲಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ಬೆತ್ತನಗೆರೆಯಲ್ಲಿ ನಡೆದಿದೆ.

ಯುವಕನೊಂದಿಗೆ ಗಲಾಟೆ ಮಾಡಿದ್ದ ಯುವತಿಯ ತಂದೆಯನ್ನು ಆತ ಹೊಂಚು ಹಾಕಿ ಕುಳಿತು ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.

55 ವರ್ಷ ವಯಸ್ಸಿನ ಯುವತಿಯ ತಂದೆ ನಾಗಪ್ಪ ಎಂಬುವವರು ಹತ್ಯೆಗೀಡಾಗಿರುವವರಾಗಿದ್ದಾರೆ.ನರೇಶ್ ಎಂಬಾತ ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ.

Ad Widget / / Ad Widget

ಆರೋಪಿ ಬೆಸ್ಕಾಂ ಕಚೇರಿ ಮುಂಭಾಗದಲ್ಲಿ ಟೀ ಅಂಗಡಿ ನಡೆಸುತ್ತಿದ್ದು, ಇದರ ಜೊತೆಗೆ ಗೋದಾಮುವೊಂದರಲ್ಲಿ ಕೂಡ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ನಾಗಪ್ಪನ ಮಗಳನ್ನು ನರೇಶ್ ಪ್ರೀತಿಸುತ್ತಿದ್ದ ಎನ್ನಲಾಗಿದ್ದು,ನರೇಶ್ ಹಾಗೂ ನಾಗಪ್ಪ ಕುವೆಂಪು ನಗರದಲ್ಲಿ ಎದುರುಬದುರು ನಿವಾಸಿಗಳಾಗಿದ್ದರು.ಈ ವಿಚಾರಕ್ಕೆ ಸಂಬಂಧಿಸಿದಂತೆ ನಾಗಪ್ಪ, ನನ್ನ ಮಗಳನ್ನು ಬಿಟ್ಟು ಬಿಡು, ನೀನು ನಮ್ಮ ಕುಟುಂಬದ ಗೌರವಕ್ಕೆ ಸರಿಬರುವುದಿಲ್ಲ ಎಂದು ಹೇಳಿದ್ದರು ಎನ್ನಲಾಗಿದೆ.

ಇದೇ ವಿಚಾರವಾಗಿ ಇವರಿಬ್ಬರ ನಡುವೆ ರಾತ್ರಿ ಜಗಳ ನಡೆದಿತ್ತು ಎಂದು ಹೇಳಲಾಗಿದೆ. ಈ ವೇಳೆ ಇಬ್ಬರನ್ನು ಕೂಡ ಸ್ಥಳೀಯರು ಸಮಾಧಾನಗೊಳಿಸಿ ಮನೆಗೆ ಕಳುಹಿಸಿದ್ದರು ಎನ್ನಲಾಗಿದೆ.

ಆದರೆ ಕೋಪಗೊಂಡಿದ್ದ ನರೇಶ್,ಇಂದು ಬೆಳಗ್ಗೆ ನಾಗಪ್ಪ ಹಾಗೂ ಅವರ ಮಗ ಬೆತ್ತನಗೆರೆಯಲ್ಲಿ ವಾಯುವಿಹಾರ ಮಾಡುತ್ತಿದ್ದಾಗ ಹಿಂಬಾಲಿಸಿಕೊಂಡು ಬಂದು ರಾಡ್ ನಿಂದ ನಾಗಪ್ಪನ ತಲೆಗೆ ಹೊಡೆದಿದ್ದಾನೆ. ತಕ್ಷಣ ಆತ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಮಾಹಿತಿ ತಿಳಿದ ನಗರ ಠಾಣೆ ವೃತ್ತ ನಿರೀಕ್ಷಕ ಎ.ವಿ.ರವಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ನರೇಶ್ ಪತ್ತೆಗೆ ಬಲೆ ಬೀಸಿದ್ದಾರೆ.

Leave a Reply

error: Content is protected !!
Scroll to Top
%d bloggers like this: