ಕೋಡಿಂಬಾಳ: ಮಾಲೇಶ್ವರ-ಪೊರಂತ್-ಬೊಳ್ಳೂರು ಸಂಪರ್ಕ ರಸ್ತೆ ದುರಸ್ತಿಗೆ ಗ್ರಾಮಸ್ಥರಿಂದ ಮನವಿ

ಕಡಬ: ಕೋಡಿಂಬಾಳ ಗ್ರಾಮದ ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಾಲೇಶ್ವರ-ಪೊರಂತ್-ಅಜಲಡ್ಕ-ಬೊಳ್ಳೂರು ಸಂಪರ್ಕ ರಸ್ತೆಯನ್ನು ದುರಸ್ತಿಗೊಳಿಸುವಂತೆ ಆಗ್ರಹಿಸಿ ಆ ಭಾಗದ ನಾಗರಿಕರು ಕಡಬ ಪಟ್ಟಣ ಪಂಚಾಯತ್ ಗೆ ಮನವಿ ನೀಡಿದ್ದಾರೆ.

ಆ.24ರಂದು ಮೊಹಿದಿನ್ ಮದರ್ ಇಂಡಿಯ ಇವರ ನೇತೃತ್ವದಲ್ಲಿ ಕಡಬ ಪಟ್ಟಣ ಪಂಚಾಯತ್ ಅಧಿಕಾರಿಗಳಿಗೆ ಹಾಗೂ ಕಡಬ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮೊಹಿದಿನ್ ಅವರು, ಹಲವಾರು ವರ್ಷಗಳಿಂದ ಮಾಲೇಶ್ವರ-ಪೊರಂತು-ಅಜಲಡ್ಕ-ಬೊಳ್ಳೂರು ಭಾಗದ ಸುಮಾರು 350ಕ್ಕಿಂತಲೂ ಹೆಚ್ಚು ಮನೆಯವರು ಈ ರಸ್ತೆಯನ್ನು ಬಳಸುತ್ತಿದ್ದಾರೆ, ಆದರೆ ಈ ರಸ್ತೆಯೂ ಹೊಂಡ ಗುಂಡಿಗಳಿಂದ ಕೂಡಿದ್ದು ಅಲ್ಲದೆ ಮಳೆಗಾಲದಲ್ಲಿ ಕೆಸರುಮಯವಾಗಿದ್ದು ರಸ್ತೆ ವಾಹನ ಸಂಚಾರಕ್ಕೂ ಅಯೋಗ್ಯವಾಗಿದೆ. ಸಾರ್ವಜನಿಕರಿಗೆ ರಸ್ತೆಯಲ್ಲಿ ನಡೆದಾಡಲು ಕಷ್ಟವಾಗಿದೆ, ಈ ರಸ್ತೆಯ ಅಭಿವೃದ್ದಿಯ ಬಗ್ಗೆ ಯಾರು ಗಮನಹರಿಸಿಲ್ಲ, ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ ಕೂಡಲೇ ರಸ್ತೆ ದುರಸ್ತಿ ಮಾಡಬೇಕು, ಈ ರಸ್ತೆಯ ವಿಚಾರವಾಗಿ ಈ ಭಾಗದ ಜನರು ಜಾತಿ, ಮತ, ಪಕ್ಷ ಭೇಧ ಮರೆತು ಒಂದಾಗಿದ್ದೇವೆ, ರಸ್ತೆಯ ದುರಸ್ತಿಯ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ಚುನಾವಣೆ ಬಹಿಷ್ಕರಿಸುವುದಾಗಿ ಅವರು ಹೇಳಿದರು.
ಕಡಬ ಪಟ್ಟಣ ಪಂಚಾಯತ್ಯಲ್ಲಿ ಮುಖ್ಯಾಧಿಕಾರಿ ಅನುಪಸ್ಥಿತಿಯಲ್ಲಿ ಪಂಚಾಯತ್ ಅಧಿಕಾರಿಗಳಾದ ವಾರಿಜಾ ಮತ್ತು ಹರೀಶ್ ಬೆದ್ರಾಜೆಯವರು ಮನವಿ ಸ್ವೀಕರಿಸಿದರು, ಕಡಬ ತಾಲೂಕು ಕಛೇರಿಯಲ್ಲಿ ತಹಸೀಲ್ದಾರ್ ಅನಂತಶಂಕರ್ ಅವರು ಮನವಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಹರೀಶ್ ಉದೇರಿ, ವಿಶ್ವನಾಥ ರೈ, ಪುಷ್ಪರಾಜ್ ಪೂಜಾರಿ, ವಿಠಲ ರೈ, ಪ್ರವೀಣ್, ಜೋಸೆಫ್ ತೋರೆಸ್, ರೋಯಿಡನ್ ತೊರೆಸ್, ಶೇಖರ ಪೂಜಾರಿ, ಅದ್ದಾದ್ ಪೊರಂತ್, ಆದಂ ಪಿ.ಎಂ., ಫಯಾಜ್ ಸಾಗರ್, ಕಮರುದ್ದೀನ್ ಅಲೆಕ್ಕಾಡಿ, ಶಾಕೀರ್ ಎ.ಜೆ.ಎಸ್.ಹನೀಫ್ ಪಿ.ಎಂ., ಇಬ್ರಾಹಿಂ ಕುಂಡೋಳಿ, ಅಝೀಝ್ ಚಾಲ್ಕೆರೆ, ಮುನ್ನ ಪೊರಂತ್, ನಾಸೀರ್ ಕುಂಡೋಳಿ, ಸಾಬಿತ್ ಪೊರಂತ್, ಶೊಯಿಬ್ ಅಲೆಕ್ಕಾಡಿ, ನಯಾಝ್ ಸಾಗರ್. ಸಚಿನ್ ಪೂಜಾರಿ, ಶಿಯಾಬ್, ಸಮೀರ್ ಕುಂಡೋಳಿ, ಹಮ್ರಾಝ್, ಅಝೀಝ್ ಕುಂಡೋಳಿ ಮೊದಲಾದವರು ಉಪಸ್ಥಿತರಿದ್ದರು

Leave A Reply

Your email address will not be published.