Day: August 9, 2021

ಎಸ್.ಎಸ್.ಎಲ್.ಸಿ.ಯಲ್ಲಿ ಸವಣೂರು ವಿದ್ಯಾರಶ್ಮಿಗೆ 100% ಫಲಿತಾಂಶದೊಂದಿಗೆ 10 ವಿಶಿಷ್ಟ ಶ್ರೇಣಿ

ಜುಲೈ 2021ರಲ್ಲಿ ಜರುಗಿದ ಹತ್ತನೇ ತರಗತಿಯ ಅಂತಿಮ ಪರೀಕ್ಷೆಯಲ್ಲಿ ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯಕ್ಕೆ ಉತ್ತಮ ಫಲಿತಾಂಶ ಲಭ್ಯವಾಗಿದೆ. ಪರೀಕ್ಷೆಗೆ ಹಾಜರಾದ ಒಟ್ಟು 32 ವಿದ್ಯಾರ್ಥಿಗಳ ಪೈಕಿ 10 ಮಂದಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. (1. ಮುಜೂರು ಮನೆ ಐತೂರು ಸುಂಕದಕಟ್ಟೆಯ ಅಬ್ದುಲ್ ಸತ್ತಾರ್ ಮತ್ತು ಆಯಿಷಾ ಇವರ ಮಗಳು ಶಮ್ರೀನಾ (623), 2. ವಿದ್ಯಾನಗರ, ಬೀದರ್‍ನ ರಮೇಶ್ ಮತ್ತು ಶ್ರೀದೇವಿ ಇವರ ಮಗಳು ಹರ್ಷಿತಾ (617), 3. ಕಾರ್ಲಾಡಿ ಕುದ್ಮಾರ್‍ನ ಲೋಕನಾಥ್ ಮತ್ತು ಶಶಿಕಲಾ ಇವರ ಮಗ …

ಎಸ್.ಎಸ್.ಎಲ್.ಸಿ.ಯಲ್ಲಿ ಸವಣೂರು ವಿದ್ಯಾರಶ್ಮಿಗೆ 100% ಫಲಿತಾಂಶದೊಂದಿಗೆ 10 ವಿಶಿಷ್ಟ ಶ್ರೇಣಿ Read More »

ಎಸ್ಸೆಸ್ಸೆಲ್ಸಿ ಪರೀಕ್ಷೆ : ಮಂಜುನಾಥನಗರ ಸರಕಾರಿ ಪ್ರೌಢ ಶಾಲೆಗೆ ಶೇ.100

ಸವಣೂರು : ಪಾಲ್ತಾಡಿ ಗ್ರಾಮದ ಮಂಜುನಾಥನಗರ ಸರಕಾರಿ ಪ್ರೌಢಶಾಲೆಗೆ ಈ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಾಗಿದೆ. ಪರೀಕ್ಷೆಗೆ ಹಾಜರಾದ 10 ವಿದ್ಯಾರ್ಥಿಗಳೂ ತೇರ್ಗಡೆಯಾಗಿದ್ದಾರೆ. ಶಾಲೆಯಲ್ಲಿ ದಾಮಿನಿ ಬಿ 585 (93.6% A+ ), ಮಹೇಶ್ ಕುಮಾರ್ 546 (87.36% A),ರಮ್ ಝೀನಾ 538 (86.08%A ) ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದುಕೊಂಡಿದ್ದಾರೆ ಎಂದು ಶಾಲಾ ಮುಖ್ಯಗುರು ಯಶೋಧಾ ,ಶಾಲಾಭಿವೃದ್ದಿ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ‌.ರಮೇಶ್ ತಿಳಿಸಿದ್ದಾರೆ.

ಬ್ರೈನ್ ಟ್ಯೂಮರ್‌ನಿಂದ ಬಳಲುತ್ತಿದ್ದ ಚಿತ್ರನಟಿ ಶರಣ್ಯ ಶಶಿ ಇನ್ನಿಲ್ಲ

ಬ್ರೇನ್ ಟ್ಯೂಮರ್‌ನಿಂದ ಬಳಲುತ್ತಿದ್ದ ಮಲಯಾಳಂನ ಖ್ಯಾತ ಚಲನಚಿತ್ರ ಮತ್ತು ಕಿರುತೆರೆ ನಟಿ ಶರಣ್ಯ ಶಶಿ ಆ.09ರಂದು ಕೊನೆಯುಸಿರೆಳೆದಿದ್ದಾರೆ. 35 ವರ್ಷದ ನಟಿ ಶರಣ್ಯಗೆ 2012 ರಲ್ಲಿ ಬ್ರೈನ್ ಟ್ಯೂಮರ್ ಪತ್ತೆಯಾಗಿತ್ತು. 11 ಮೇಜರ್ ಸರ್ಜರಿಗೆ ಒಳಗಾಗಿದ್ದ ಈ ನಟಿಗೆ ಕಳೆದ ಮೇ 23 ರಂದು ಕೋವಿಡ್ ರೋಗಲಕ್ಷಣಗಳು ಕಾಣಿಸಿಕೊಂಡಿತ್ತು. ಕೋವಿಡ್ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಕೋವಿಡ್ ವಿರುದ್ಧ ಸೆಣಸಿ ಗುಣಮುಖರಾಗಿ ಮನೆಗೆ ವಾಪಾಸ್ ಆಗಿದ್ದರು. ಕಳೆದ ಕೆಲ ದಿನಗಳ ಹಿಂದೆ ಮತ್ತೆ ಅನಾರೋಗ್ಯದಿಂದ ತಿರುವನಂತಪುರದ …

ಬ್ರೈನ್ ಟ್ಯೂಮರ್‌ನಿಂದ ಬಳಲುತ್ತಿದ್ದ ಚಿತ್ರನಟಿ ಶರಣ್ಯ ಶಶಿ ಇನ್ನಿಲ್ಲ Read More »

ಬಿಜೆಪಿ,ಸಂಘ ಪರಿವಾರದ ಕಾರ್ಯಕರ್ತರ ಮೇಲಿನ ಸುಳ್ಳು ದೂರು ಹಿಂಪಡೆಯುವಂತೆ ಗೃಹ ಸಚಿವರಿಗೆ ಕೋಟ ಮನವಿ

ಬಿಜೆಪಿ ಮತ್ತು ಹಿಂದೂಪರ ಸಂಘ ಪರಿವಾರದ ಕಾರ್ಯಕರ್ತರ ಮೇಲಿನ ದುರುದ್ದೇಶ ಪೂರ್ವಕ ಹಾಗೂ ಸುಳ್ಳು ಪ್ರಕರಣಗಳ ಮೊಕದ್ದಮೆಗಳನ್ನು ಹಿಂಪಡೆಯುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಕೋಟ ಶ್ರೀನಿವಾಸ ಅವರು ಮನವಿ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಗಳೂ ಸೇರಿದಂತೆ ರಾಜ್ಯದಾದ್ಯಂತ ಅನೇಕ ಕಡೆಗಳಲ್ಲಿ ಬಿಜೆಪಿ ಮತ್ತು ಹಿಂದೂಪರ ಸಂಘ ಪರಿವಾರದ ಕಾರ್ಯಕರ್ತರನ್ನು ಗುರಿಯಾಗಿಟ್ಟುಕೊಂಡು ಸಮಾಜದ ಕೆಲವೊಂದು ಪಟ್ಟಭದ್ರ ಹಿತಾಸಕ್ತಿಗಳು ಸೇರಿ ದುರುದ್ದೇಶ ಪೂರ್ವಕವಾಗಿ ಸುಳ್ಳು ಪ್ರಕರಣಗಳು ದಾಖಲಾಗಿರುತ್ತವೆ.ಈ ರೀತಿಯ ದುರುದ್ದೇಶದ ಸುಳ್ಳು ಪ್ರಕರಣಗಳನ್ನು …

ಬಿಜೆಪಿ,ಸಂಘ ಪರಿವಾರದ ಕಾರ್ಯಕರ್ತರ ಮೇಲಿನ ಸುಳ್ಳು ದೂರು ಹಿಂಪಡೆಯುವಂತೆ ಗೃಹ ಸಚಿವರಿಗೆ ಕೋಟ ಮನವಿ Read More »

ಗುತ್ತಿಗಾರು : ಸಚಿವ ಅಂಗಾರ ಅವರಿಂದ ವಿದ್ಯುತ್ ಸಬ್ ಸ್ಟೇಶನ್ ಗೆ ಪ್ರಾಯೋಗಿಕ ಚಾಲನೆ | ಜನ ಒತ್ತಡ ತಂದಾಗ ಅಭಿವೃದ್ಧಿ ಕಾರ್ಯಗಳಿಗೆ ವೇಗ

ಗುತ್ತಿಗಾರಿನ ಬಹುದಿನಗಳ ಬೇಡಿಕೆಯಾಗಿದ್ದ 33/11ಕೆವಿ ವಿದ್ಯುತ್‌ ಸಬ್ ಸ್ಟೇಶನ್ ಸುಮಾರು 13 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು ದ.ಕ ಜಿಲ್ಲಾ ಉಸ್ತುವಾರಿ ಹಾಗೂ ಬಂದರು ಮತ್ತು ಮೀನುಗಾರಿಕಾ ಸಚಿವ ಎಸ್. ಅಂಗಾರ ಪ್ರಾಯೋಗಿಕ ವಿದ್ಯುತ್‌ ಚಾಲನೆ ನೀಡಿ ಮಾತನಾಡಿದರು. ಜನ ಒತ್ತಡ ತಂದಾಗ ಅಭಿವೃದ್ಧಿ ಕಾರ್ಯಗಳಿಗೆ ವೇಗ ಸಿಗುತ್ತದೆ. ಜತೆಗೆ ಜನ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡಿದಾಗ ಮಾತ್ರ ನಿರೀಕ್ಷಿತ ಅಭಿವೃದ್ಧಿ ಸಾಧ್ಯ ಎಂದರು. ಬೆಳ್ಳಾರೆಯಿಂದ ಗುತ್ತಿಗಾರಿಗೆ ಹೊಸದಾಗಿ ಅಳವಡಿಸಿರುವ ವಿದ್ಯುತ್‌ ಲೈನ್ ಬಾಳಿಲ, ನಿಂತಿಕಲ್ಲು, ಪಂಜ, …

ಗುತ್ತಿಗಾರು : ಸಚಿವ ಅಂಗಾರ ಅವರಿಂದ ವಿದ್ಯುತ್ ಸಬ್ ಸ್ಟೇಶನ್ ಗೆ ಪ್ರಾಯೋಗಿಕ ಚಾಲನೆ | ಜನ ಒತ್ತಡ ತಂದಾಗ ಅಭಿವೃದ್ಧಿ ಕಾರ್ಯಗಳಿಗೆ ವೇಗ Read More »

ಹನಿಟ್ರ್ಯಾಪ್ ಪ್ರಕರಣ : ಇನ್ನೋರ್ವ ಆರೋಪಿಯ ಬಂಧನ

ಪುತ್ತೂರು: ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಇನ್ನೋರ್ವ ಆರೋಪಿಯನ್ನು ಸಂಪ್ಯ ಪೊಲೀಸರು ಬಂಧಿಸಿದ್ದಾರೆ. ಅನಾಮಧೇಯ ನಂಬರ್‌ನಿಂದ ಯುವಕರೊಬ್ಬರಿಗೆ ಮಸೇಜ್ ಕಳುಹಿಸಿ ಪರಿಚಯ ಮಾಡಿಸಿಕೊಂಡು ಬಳಿಕ ವಿಡಿಯೋ ಕಾಲ್ ಮಾಡಿ ಬಟ್ಟೆ ಬರೆಗಳನ್ನು ಬಿಚ್ಚಲು ಪ್ರೇರೇಪಿಸಿ ನಗ್ನ ದೇಹದ ವಿಡಿಯೋವನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದು ತನ್ನ ಸಹಚರರೊಂದಿಗೆ ಸೇರಿಕೊಂಡು ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿ ರೂ. 30ಲಕ್ಷ ಹಣ ಪಡೆದುಕೊಂಡ ಬಗ್ಗೆ ದೂರು ನೀಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿತ್ತು,ಈಗ ಇನ್ನೋರ್ವ ಆರೋಪಿ ಅಬ್ದುಲ್ ನಾಸೀರ್ …

ಹನಿಟ್ರ್ಯಾಪ್ ಪ್ರಕರಣ : ಇನ್ನೋರ್ವ ಆರೋಪಿಯ ಬಂಧನ Read More »

ಸುಬ್ರಹ್ಮಣ್ಯ:ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿನಿಯರು ರಾಜ್ಯಕ್ಕೇ ಪ್ರಥಮ| ಅನನ್ಯ ಹಾಗೂ ವೆನೆಸಾ ಶರೀನಾ ಈ ಬಾರಿಯ ಟಾಪರ್

ಈ ಬಾರಿಯ ಎಸ್ಎಸ್ಎಲ್ ಸಿ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿನಿಯರಾದ ಅನನ್ಯ ಹಾಗೂ ವೆನೆಸಾ ಶರಿನಾ ಡಿಸೋಜ 625ರಲ್ಲಿ 625 ಅಂಕ ಪಡೆದು ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದಿದ್ದಾರೆ. ಫಲಿತಾಂಶ ಪ್ರಕಟವಾಗುತ್ತಲೇ ರಾಜ್ಯದಲ್ಲೇ ಕಡಬ ತಾಲೂಕಿನ ಸುಬ್ರಹ್ಮಣ್ಯದ ಕುಮಾರಸ್ವಾಮಿ ಶಾಲೆ ಮತ್ತೆ ಸುದ್ದಿಯಾಗಿದೆ. ಕಳೆದ ಬಾರಿ ಅನುಷ್ ಎಲ್. ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಪಾಸಾಗಿದ್ದರು. ಈ ಬಾರಿಯೂ ಕೂಡ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿನಿಯರಾದ ಅನನ್ಯ ಹಾಗೂ ವೆನೆಸಾ ಶರಿನಾ ಡಿಸೋಜ …

ಸುಬ್ರಹ್ಮಣ್ಯ:ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿನಿಯರು ರಾಜ್ಯಕ್ಕೇ ಪ್ರಥಮ| ಅನನ್ಯ ಹಾಗೂ ವೆನೆಸಾ ಶರೀನಾ ಈ ಬಾರಿಯ ಟಾಪರ್ Read More »

ಕಡಬ : ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಬಿದ್ದ ಟಾಟಾ ಏಸ್ | ಚಾಲಕನಿಗೆ ಗಾಯ

ಕಡಬ : ಟಾಟಾ ಏಸ್ ಗೂಡ್ಸ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಮರಿಗೆ ಉರುಳಿದ ಪರಿಣಾಮ ವಾಹನ ಚಾಲಕ ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪದ ಕಲ್ಲಾಜೆ ಎಂಬಲ್ಲಿ ಸೋಮವಾರ ಸಂಭವಿಸಿದೆ. ಸುಂಕದಕಟ್ಟೆಯಿಂದ ಮರ್ಧಾಳ ಕಡೆಗೆ ಬರುತ್ತಿದ್ದ ಗೂಡ್ಸ್ ವಾಹನ ಕಲ್ಲಾಜೆ ಸಮೀಪ ರಸ್ತೆ ಬದಿಯ ಕಮರಿಗೆ ಉರುಳಿದೆ. ಘಟನೆಯಲ್ಲಿ ವಾಹನ ಚಾಲಕ, ಮರ್ಧಾಳದ ಗಣೇಶ್ ವೆಲ್ಡಿಂಗ್ ವರ್ಕ್ಸ್ ಮಾಲಕ ಮಂಡೆಕರ ನಿವಾಸಿ ರಾಮಚಂದ್ರ ಎಂಬವರ ಕಾಲು …

ಕಡಬ : ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಬಿದ್ದ ಟಾಟಾ ಏಸ್ | ಚಾಲಕನಿಗೆ ಗಾಯ Read More »

ಪ.ಜಾತಿಯ ಕುಟುಂಬಕ್ಕೆ ಮನೆ ನಿರ್ಮಾಣದ ಅನುದಾನ 5 ಲಕ್ಷಕ್ಕೆ ಏರಿಕೆ -ಕೋಟ ಶ್ರೀನಿವಾಸ ಪೂಜಾರಿ

ಪ.ಜಾತಿಯ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ನೀಡುತ್ತಿರುವ ಅನುದಾನವನ್ನು ತಲಾ 5 ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಅವರು ಸೋಮವಾರ ವಿಕಾಸಸೌಧದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ,ಈಗ ಪರಿಶಿಷ್ಟ ಜಾತಿಯ ಪ್ರತಿ ಕುಟುಂಬಕ್ಕೆ ಮನೆ ನಿರ್ಮಾಣಕ್ಕೆ 1.70 ಲಕ್ಷ ನೆರವು ನೀಡಲಾಗುತ್ತಿದೆ. ಈ ಮೊತ್ತದಿಂದ ಒಳ್ಳೆಯ ಮನೆ ನಿರ್ಮಿಸಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿ ಫಲಾನುಭವಿಗೆ 5 ಲಕ್ಷ ಅನುದಾನ ನೀಡಲು …

ಪ.ಜಾತಿಯ ಕುಟುಂಬಕ್ಕೆ ಮನೆ ನಿರ್ಮಾಣದ ಅನುದಾನ 5 ಲಕ್ಷಕ್ಕೆ ಏರಿಕೆ -ಕೋಟ ಶ್ರೀನಿವಾಸ ಪೂಜಾರಿ Read More »

ಮೊದಲ ಬಾರಿಗೆ ದಾಖಲೆಯ ಎಸ್ಎಸ್ಎಲ್ ಸಿ ಫಲಿತಾಂಶ | ಈ ಬಾರಿ ಒಬ್ಬ ವಿದ್ಯಾರ್ಥಿಯನ್ನು ಬಿಟ್ಟು, ಉಳಿದೆಲ್ಲರೂ ಪಾಸ್

ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟವಾಗಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಫಲಿತಾಂಶ ಬಿಡುಗಡೆ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.99.99ರಷ್ಟು ಫಲಿತಾಂಶ ರಾಜ್ಯದಲ್ಲಿ ದಾಖಲಾಗಿದೆ. ಎ + ಗ್ರೇಡ್ 1,28,931, ಎ ಗ್ರೇಡ್ 2,50,317, ಬಿ ಗ್ರೇಡ್ 2,87,684, ಸಿ ಗ್ರೇಡ್ 1,13,610 ವಿದ್ಯಾರ್ಥಿಗಳು ಪಡೆದಿದ್ದಾರೆ. ಶೇ.9 ರಷ್ಟು ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ ನೀಡಿ ಪಾಸ್ ಮಾಡಲಾಗಿದೆ. 157 ವಿದ್ಯಾರ್ಥಿಗಳು 625/625 ಅಂಕಗಳನ್ನು ಪಡೆದಿದ್ದಾರೆ. ರಾಜ್ಯದಲ್ಲಿ ಬೆಂಗಳೂರು ಉತ್ತರ ಪ್ರಥಮ …

ಮೊದಲ ಬಾರಿಗೆ ದಾಖಲೆಯ ಎಸ್ಎಸ್ಎಲ್ ಸಿ ಫಲಿತಾಂಶ | ಈ ಬಾರಿ ಒಬ್ಬ ವಿದ್ಯಾರ್ಥಿಯನ್ನು ಬಿಟ್ಟು, ಉಳಿದೆಲ್ಲರೂ ಪಾಸ್ Read More »

error: Content is protected !!
Scroll to Top