Day: July 30, 2021

ಸುಳ್ಯ : ಫುಲ್ ಟೈಟಾಗಿ ಕಾರು ಚಲಾವಣೆ | ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಕಾರಿಗೆ ಡಿಕ್ಕಿ

ಸುಳ್ಯ : ಫುಲ್ ಟೈಟಾಗಿ ವ್ಯಕ್ತಿಯೋರ್ವರು ಕಾರು ಚಲಾಯಿಸಿದ ಪರಿಣಾಮ ರೋಗಿಯನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ಇನ್ನೊಂದು ಕಾರಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದು ರಸ್ತೆಯ ಬದಿಯ ತಡೆಬೇಲಿಗೆ ಢಿಕ್ಕಿ ಹೊಡೆದ ಘಟನೆ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ವಿನೋಬನಗರದಲ್ಲಿ ಶುಕ್ರವಾರ ಸಂಜೆ ನಡೆದಿದೆ. ಸುಳ್ಯದಿಂದ ಜಾಲ್ಸೂರು ಕಡೆಗೆ ತೆರಳುತ್ತಿದ್ದ ಪೇರಾಲಿನ ಹುಕ್ರಪ್ಪ ಗೌಡ ಎಂಬವರ ಮಗ ಮಂಜುನಾಥ್ ಚಲಾಯಿಸುತ್ತಿದ್ದ ಮಾರುತಿ ಕಾರು ಸುಳ್ಯ ಕಡೆಯಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಕಾರಿನ ಹಿಂಬದಿಗೆ ಢಿಕ್ಕಿ ಹೊಡೆದಿದ್ದು, ನಿಯಂತ್ರಣಕ್ಕೆ ಸಿಗದೆ …

ಸುಳ್ಯ : ಫುಲ್ ಟೈಟಾಗಿ ಕಾರು ಚಲಾವಣೆ | ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಕಾರಿಗೆ ಡಿಕ್ಕಿ Read More »

ಖ್ಯಾತ ಪತ್ರಕರ್ತ ಡ್ಯಾನಿಶ್ ಸಿದ್ಧಿಕಿಯನ್ನು ಕೊಂದದ್ದು ಮುಸ್ಲಿಂ ಧರ್ಮಭ್ರಾಂತರು | ಮಸೀದಿಗೆ ನುಗ್ಗಿ ಕೊಂದ ಬಗ್ಗೆ ಕೋಮು ಸಾಮರಸ್ಯ ಕೆದಕುವ ತಾಂಟ್ರೆ ಖ್ಯಾತಿಯ ಜನರದ್ದು ಯಾಕೆ ನಿರ್ಲಜ್ಜ ಮೌನ ?!

ಅಂದು ಇಡೀ ಮಾಧ್ಯಮ ಲೋಕ ಓರ್ವ ನಿಷ್ಠಾವಂತ ಪತ್ರಕರ್ತನ ಸಾವಿನ ಪ್ರಕರಣದ ವರದಿ ಮಾಡುವಲ್ಲಿ ಬಿಜಿ ಆಗಿತ್ತು. ಏಕೆಂದರೆ, ಇಲ್ಲಿ ಕಳೆದುಕೊಂಡದ್ದು ಭಾರತ ಹೆಮ್ಮೆ ಪಡುವ ಪತ್ತೇದಾರಿ ವರದಿಗಾರ ಸಿದ್ಧಿಕಿಯನ್ನು. ಇನ್ನೇನು ಆತನ ಹೊಸ ವರದಿಯೊಂದು ಮಾಧ್ಯಮದ ಮೂಲಕ ಜನರಿಗೆ ತಲುಪುವ ಮೊದಲೇ ವರದಿಗಾರನ ಕೊಲೆಯಾಗುತ್ತದೆ. ಮೊದಲಿಗೆ ಆಕಸ್ಮಿಕ ಸಾವು ಎಂದು ಪರಿಗಣಿಸಿದ್ದ ಪ್ರಕರಣದ, ಸತ್ಯಾಸತ್ಯತೆ ಇದೀಗ ಹೊರಬಿದ್ದಿದೆ. ಪಾಕಿಸ್ಥಾನದೊಂದಿಗೆ ಲಾಭದಾಯಕವಾಗಿ ಗಡಿ ದಾಟುವ ವಿಚಾರದಲ್ಲಿ ಹಾಗೂ ತಾಲಿಬಾನ್- ಅಫ್ಘಾನ್ ಪಡೆ ನಡುವೆ ನಡೆಯುವ ಹೋರಾಟವನ್ನು ವರದಿ …

ಖ್ಯಾತ ಪತ್ರಕರ್ತ ಡ್ಯಾನಿಶ್ ಸಿದ್ಧಿಕಿಯನ್ನು ಕೊಂದದ್ದು ಮುಸ್ಲಿಂ ಧರ್ಮಭ್ರಾಂತರು | ಮಸೀದಿಗೆ ನುಗ್ಗಿ ಕೊಂದ ಬಗ್ಗೆ ಕೋಮು ಸಾಮರಸ್ಯ ಕೆದಕುವ ತಾಂಟ್ರೆ ಖ್ಯಾತಿಯ ಜನರದ್ದು ಯಾಕೆ ನಿರ್ಲಜ್ಜ ಮೌನ ?! Read More »

ನೆಟ್ಟಣ: ವಿದ್ಯುತ್ ವಂಚಿತ ಮನೆಗೆ ವಿದ್ಯುತ್ ಸಂಪರ್ಕ

ಕಡಬ: ಕಡಬ ಬ್ಲಾಕ್ ಯೂತ್ ಕಾಂಗ್ರೆಸ್‌ ಅಧ್ಯಕ್ಷ ಅಭಿಲಾಷ್ ಪಿ.ಕೆ. ಅವರಿಂದ ಬಿಳಿನೆಲೆ ಗ್ರಾಮದ ನೆಟ್ಟಣ ಕೊರಗರ ಕಾಲನಿಯವರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು.ಬಿಳಿನೆಲೆ ಗ್ರಾಮದ ನೆಟ್ಟಣ ಆದಿನೆಲೆ ಕೊರಗರ ಕಾಲನಿಯ ಬಾಬು ಕೊರಗ ಅನೇಕ ವರ್ಷಗಳಿಂದ ಮೂಲಭೂತ ಸೌಕರ್ಯವಾದ ವಿದ್ಯುತ್ ಸಂಪರ್ಕದಿಂದ ವಂಚಿತರಾಗಿದ್ದರು. ಇವರ ಸಮಸ್ಯೆಯನ್ನು ಅರಿತ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಅವರ ಮನವಿಯ ಮೇರೆಗೆ ಕಡಬ ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್ ಪಿ.ಕೆ. ಅವರು ಸುಮಾರು 15000 ರೂ. …

ನೆಟ್ಟಣ: ವಿದ್ಯುತ್ ವಂಚಿತ ಮನೆಗೆ ವಿದ್ಯುತ್ ಸಂಪರ್ಕ Read More »

ರೈಲು ಡಿಕ್ಕಿಯಾಗಿ ನವಿಲು ಸಾವು

ರೈಲು ಡಿಕ್ಕಿಯಾಗಿ ನವಿಲೊಂದು ಸಾವೀಗೀಡಾದ ಬಗ್ಗೆ ಮಂಗಳೂರಿನ ಸೋಮೇಶ್ವರ ಕೋಟೆಕಾರು ಎಂಬಲ್ಲಿ ವರದಿಯಾಗಿದೆ. ಕೋಟೆಕಾರಿನ ಸ್ಟೆಲ್ಲಾ ಮೇರೀಸ್ ಶಾಲೆಯ ಹಿಂಭಾಗದಲ್ಲಿ ಶುಕ್ರವಾರ ಬೆಳಗ್ಗೆ ಸತ್ತಿರುವ ಸ್ಥಿತಿಯಲ್ಲಿ ಕಂಡು ಬಂದ ರಾಷ್ಟ್ರ ಪಕ್ಷಿ ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿರುವ ಬಗ್ಗೆ ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದಾರೆ. ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ವಾಣಿ ಆಳ್ವ ರವರು ಸ್ಥಳಕ್ಕೆ ಆಗಮಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಅರಣ್ಯ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ಕೋಟ ಶ್ರೀನಿವಾಸ ಪೂಜಾರಿ ಅವರ ವಾಸ್ತವ್ಯದ ಮನೆ ರಚನೆ ಕಟ್ಟಡದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಪಾದನೆ | ಸಮಗ್ರ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ಮನವಿ ಮಾಡಿದ ಕೋಟ

ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ವಾಸ್ತವ್ಯದ ಮನೆ ರಚನೆ ಕಟ್ಟಡದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸಿ ಮಾಡುತ್ತಿರುವ ಆಪಾದನೆ ಕುರಿತು ಸಮಗ್ರ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ಕೋಟ ಅವರು ಮನವಿ ಮಾಡಿಕೊಂಡಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ರಾಜ್ಯದಲ್ಲಿ ನಾನು ಮೇಲ್ಮನೆಯ ಶಾಸಕನಾಗಿ 3 ಬಾರಿ ಆಯ್ಕೆಯಾಗಿದ್ದು, 2 ಬಾರಿ ಸಂಪುಟ ದರ್ಜೆಯ ಮಂತ್ರಿಯಾಗಿದ್ದು, 1 ಬಾರಿ ವಿರೋಧ ಪಕ್ಷದ ನಾಯಕನಾಗಿರುತ್ತೇನೆ. ಶಾಸಕರಾದ ಹಿನ್ನಲೆಯಲ್ಲಿ ಪ್ರತೀ ವರ್ಷ ಲೋಕಾಯುಕ್ತರಿಗೆ ಆಸ್ತಿಪಾಸ್ತಿ ಮತ್ತು ಉತ್ತರದಾಯಿತ್ವ ವಿವರಗಳನ್ನೊಳಗೊಂಡ …

ಕೋಟ ಶ್ರೀನಿವಾಸ ಪೂಜಾರಿ ಅವರ ವಾಸ್ತವ್ಯದ ಮನೆ ರಚನೆ ಕಟ್ಟಡದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಪಾದನೆ | ಸಮಗ್ರ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ಮನವಿ ಮಾಡಿದ ಕೋಟ Read More »

ಪ್ರಧಾನಿ ಮೋದಿ ಭೇಟಿ ಮಾಡಿದ ಬಸವರಾಜ ಬೊಮ್ಮಾಯಿ

ರಾಜ್ಯ ಸರ್ಕಾರದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಬಸವರಾಜ ಬೊಮ್ಮಾಯಿಯವರು ಮೊದಲ ದೆಹಲಿ ಪ್ರವಾಸದಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದರು. ಮಧ್ಯಾಹ್ನ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ ನಂತರ ಅಮಿತ್ ಶಾ, ಅಧ್ಯಕ್ಷ ಜೆ ಪಿ ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರನ್ನು ಸಹ ಭೇಟಿ ಮಾಡಿದರು. ಇಂದಿನ ದೆಹಲಿ ಭೇಟಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ …

ಪ್ರಧಾನಿ ಮೋದಿ ಭೇಟಿ ಮಾಡಿದ ಬಸವರಾಜ ಬೊಮ್ಮಾಯಿ Read More »

ತವರು ನೆಲದಲ್ಲೇ ಜಪಾನ್ ಆಟಗಾರ್ತಿಯನ್ನು ಬಗ್ಗು ಬಡಿದ ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧೂ ಸೆಮಿಫೈನಲ್ ಗೆ ಲಗ್ಗೆ | ಒಂದು ಪದಕ ಫಿಕ್ಸ್

ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಟೋಕಿಯೋ ಒಲಿಂಪಿಕ್ಸ್ ನಲ್ಲಿ ಸೆಮಿ ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ. ಇದರೊಂದಿಗೆ ಭಾರತಕ್ಕೆ ಮತ್ತೊಂದು ಪದಕದ ಭರವಸೆ ಮೂಡಿದೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪಿ.ವಿ.ಸಿಂಧು ಜಪಾನ್ ನ ಅಕಾನೆ ಯಮಾಗುಚಿ ಅವರನ್ನು ಸೋಲಿಸಿದರು. ತವರು ನಾಡಿನ ಆಟಗಾರ್ತಿಯನ್ನು 21-13, 22-20 ಅಂತರದ ನೇರ ಸೆಟ್ ಗಳಿಂದ ಸೋಲಿಸಿದ ಭಾರತದ ಭರವಸೆಯ ಆಟಗಾರ್ತಿ ಸೆಮಿ ಫೈನಲ್ ಗೆ ಪ್ರವೇಶ ಗಿಟ್ಟಿಸಿದರು. 4 ಪಂದ್ಯಗಳನ್ನು ಸತತವಾಗಿ ಗೆಲ್ಲುವ ಮೂಲಕ ಸೆಮಿಫೈನಲ್ ಪ್ರವೇಶ ಪಡೆದಿದ್ದಾರೆ. ರಾಚನೋಕ್ …

ತವರು ನೆಲದಲ್ಲೇ ಜಪಾನ್ ಆಟಗಾರ್ತಿಯನ್ನು ಬಗ್ಗು ಬಡಿದ ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧೂ ಸೆಮಿಫೈನಲ್ ಗೆ ಲಗ್ಗೆ | ಒಂದು ಪದಕ ಫಿಕ್ಸ್ Read More »

ಅಪಘಾತ ತಪ್ಪಿಸಲು ಹೋಗಿ ಕೆರೆಗೆ ಉರುಳಿದ ಕೆಎಸ್ಸಾರ್ಟಿಸಿ ಬಸ್

ಹಲವು ಜನರಿದ್ದ ಕೆಎಸ್ಸಾರ್ಟಿಸಿ ಬಸ್ ಒಂದು ಎದುರಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಪಕ್ಕದಲ್ಲಿದ್ದ ಕೆರೆಗೆ ಉರುಳಿ ಬಿದ್ದಿದ್ದು, ಇದೀಗ ಸ್ಕೂಟಿ ಸವಾರನೊಬ್ಬ ಚಿಕಿತ್ಸೆ ಫಲಕಾರಿ ಆಗದೆ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾಸ್ಪಾಡಿಯಲ್ಲಿ ನಡೆದಿದೆ. ಇಂದು ಮುಂಜಾನೆ ಶಿವಮೊಗ್ಗ ಘಟಕಕ್ಕೆ ಸೇರಿದ ಬಸ್ ಸಾಗರದಿಂದ ವಾಪಸ್ ಶಿವಮೊಗ್ಗಕ್ಕೆ ಬರುತ್ತಿದ್ದ ವೇಳೆ, ಶಿವಮೊಗ್ಗದಿಂದ ಸಿಗಂಧೂರಿಗೆ ಹೊರಟಿದ್ದ ಯುವಕರು ಸ್ಕೂಟಿಯಲ್ಲಿ ವೇಗವಾಗಿ ಬರುತ್ತಿದ್ದರು. ಈ ವೇಳೆ ಸ್ಕೂಟಿಗೆ ಬಸ್ ಡಿಕ್ಕಿ ಹೊಡೆಯುವುದನ್ನು …

ಅಪಘಾತ ತಪ್ಪಿಸಲು ಹೋಗಿ ಕೆರೆಗೆ ಉರುಳಿದ ಕೆಎಸ್ಸಾರ್ಟಿಸಿ ಬಸ್ Read More »

ಇಂದಿನಿಂದ ಮಂಗಳೂರು ಮರವೂರು ಸೇತುವೆ ಮತ್ತೆ ಎಲ್ಲಾ ವಾಹನಗಳ ಸಂಚಾರಕ್ಕೆ ಲಭ್ಯ

ಮಂಗಳೂರು: ಮಳೆಯ ಕಾರಣ ಕುಸಿದಿದ್ದ ಮರವೂರು ಸೇತುವೆ ದುರಸ್ತಿ ಪೂರ್ಣಗೊಂಡಿದ್ದು ಇಂದಿನಿಂದ ಎಲ್ಲ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಿರಿಯ ಪರೀಕ್ಷಕ ಜಯಗೋಪಾಲ್ ನೇತ್ರತ್ವದಲ್ಲಿ ತಜ್ಞರು, ಸೇತುವೆ ವಾಹನ ಸಂಚಾರಕ್ಕೆ ಯೋಗ್ಯವಾಗಿದೆಯೇ ಎಂದು ಪರೀಕ್ಷಿಸಲು ರೋಡ್ ಟೆಸ್ಟ್ ನಡೆಸಿದ್ದಾರೆ. 28 ಟನ್, 30 ಟನ್ ಹೀಗೆ ವಿವಿಧ ಭಾರಗಳನ್ನು ಹಾಕಿದ ಟ್ರಕನ್ನು ಸೇತುವೆ ಮೇಲ್ಬಾಗದಲ್ಲಿ ನಿಲುಗಡೆಗೊಳಿಸಿ ಬೇರೆ ಬೇರೆ ವಿಧದಲ್ಲಿ ಪರೀಕ್ಷೆ ನಡೆಸಿದ್ದಾರೆ. ಪರೀಕ್ಷೆಯಲ್ಲಿ ಸೇತುವೆ ವಾಹನ ಸಂಚಾರಕ್ಕೆ ಸಂಪೂರ್ಣ ಫಿಟ್ ಆಗಿದೆ ಎಂದು ತಜ್ಞರು ತಿಳಿಸಿದ್ದಾರೆ. …

ಇಂದಿನಿಂದ ಮಂಗಳೂರು ಮರವೂರು ಸೇತುವೆ ಮತ್ತೆ ಎಲ್ಲಾ ವಾಹನಗಳ ಸಂಚಾರಕ್ಕೆ ಲಭ್ಯ Read More »

ಸ್ವಾತಂತ್ರ್ಯೋತ್ಸವದ ಭಾಷಣಕ್ಕೆ ಇಡೀ ದೇಶ ವಾಸಿಗಳಿಂದ ಸಲಹೆ ಕೇಳಿದ ಪ್ರಧಾನಿ ನರೇಂದ್ರ ಮೋದಿ | ನೀವೂ ಕೂಡ ಈ ಮೂಲಕ ಸಲಹೆ ನೀಡಬಹುದು…!

ಆಗಸ್ಚ್ 15ರಂದು ನಡೆಯಲಿರುವ 75 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ತಮ್ಮ ಭಾಷಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕರಿಂದ ಸಲಹೆ ಕೇಳಿದ್ದಾರೆ. ‘ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಭಾಷಣಕ್ಕಾಗಿ ನಿಮ್ಮ ಆಲೋಚನೆಗಳು ಮತ್ತು ವಿಚಾರಗಳನ್ನು ಹಂಚಿಕೊಳ್ಳಿ. ನಿಮ್ಮ ಸಲಹೆಗಳು ಕೆಂಪು ಕೋಟೆಯ ಗೋಡೆಗಳ ಮೇಲಿಂದ ಇಡೀ ದೇಶಕ್ಕೇ ಪ್ರತಿಧ್ವನಿಸುತ್ತವೆ’ ಎಂದು ಹೇಳಿ ಟ್ವೀಟ್ ಮಾಡಿದ್ದಾರೆ. ಪ್ರಧಾನ ಮಂತ್ರಿ ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಸರ್ಕಾರದ ಕಾರ್ಯಕ್ರಮಗಳು ಮತ್ತು ನೀತಿಗಳನ್ನು ದೇಶಕ್ಕೆ ತಿಳಿಸಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ …

ಸ್ವಾತಂತ್ರ್ಯೋತ್ಸವದ ಭಾಷಣಕ್ಕೆ ಇಡೀ ದೇಶ ವಾಸಿಗಳಿಂದ ಸಲಹೆ ಕೇಳಿದ ಪ್ರಧಾನಿ ನರೇಂದ್ರ ಮೋದಿ | ನೀವೂ ಕೂಡ ಈ ಮೂಲಕ ಸಲಹೆ ನೀಡಬಹುದು…! Read More »

error: Content is protected !!
Scroll to Top