ಸುಳ್ಯ : ಫುಲ್ ಟೈಟಾಗಿ ಕಾರು ಚಲಾವಣೆ | ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಕಾರಿಗೆ ಡಿಕ್ಕಿ

ಸುಳ್ಯ : ಫುಲ್ ಟೈಟಾಗಿ ವ್ಯಕ್ತಿಯೋರ್ವರು ಕಾರು ಚಲಾಯಿಸಿದ ಪರಿಣಾಮ ರೋಗಿಯನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ಇನ್ನೊಂದು ಕಾರಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದು ರಸ್ತೆಯ ಬದಿಯ ತಡೆಬೇಲಿಗೆ ಢಿಕ್ಕಿ ಹೊಡೆದ ಘಟನೆ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ವಿನೋಬನಗರದಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಸುಳ್ಯದಿಂದ ಜಾಲ್ಸೂರು ಕಡೆಗೆ ತೆರಳುತ್ತಿದ್ದ ಪೇರಾಲಿನ ಹುಕ್ರಪ್ಪ ಗೌಡ ಎಂಬವರ ಮಗ ಮಂಜುನಾಥ್ ಚಲಾಯಿಸುತ್ತಿದ್ದ ಮಾರುತಿ ಕಾರು ಸುಳ್ಯ ಕಡೆಯಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಕಾರಿನ ಹಿಂಬದಿಗೆ ಢಿಕ್ಕಿ ಹೊಡೆದಿದ್ದು, ನಿಯಂತ್ರಣಕ್ಕೆ ಸಿಗದೆ ರಸ್ತೆ ಬದಿಯ ತಡೆಬೇಲಿಗೆ ಢಿಕ್ಕಿ ಹೊಡೆದಿದೆ.

ಘಟನೆಯಲ್ಲಿ ಎರಡೂ ಕಾರುಗಳು ಜಖಂಗೊಂಡಿದ್ದು, ವಿಪರೀತ ಮದ್ಯಸೇವಿಸಿ ನಡೆಯುವ ಸ್ಥಿತಿಯಲ್ಲಿಲ್ಲದ ಕಾರು ಚಾಲಕ ಸೇರಿದಂತೆ ಕಾರಿನಲ್ಲಿದ್ದ ಇಬ್ಬರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ. ಸುಳ್ಯ ಪೊಲೀಸರು ಸ್ಥಳಕ್ಕಾಗಮಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Ad Widget


Ad Widget


Ad Widget

Ad Widget


Ad Widget

Leave a Reply

Ad Widget >>^
Ad Widget
error: Content is protected !!
Scroll to Top
%d bloggers like this: