ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಸಂಯುಕ್ತ ಆಶ್ರಯದಲ್ಲಿ 11 ಭಾಷೆಗಳಲ್ಲಿ ಆನ್‌ಲೈನ್ ‘ಗುರುಪೂರ್ಣಿಮಾ ಮಹೋತ್ಸವ’ಗಳ ಆಯೋಜನೆ !

ಮಂಗಳೂರು – ರಾಷ್ಟ್ರ ಮತ್ತು ಧರ್ಮ ಸಂಕಟದಲ್ಲಿದ್ದಾಗ ಧರ್ಮಸಂಸ್ಥಾಪನೆಯ ಕಾರ್ಯವನ್ನು ‘ಗುರು-ಶಿಷ್ಯ’ ಪರಂಪರೆಯು ಮಾಡಿದೆ. ಭಗವಾನ ಶ್ರೀಕೃಷ್ಣನು ಅರ್ಜುನನ ಮಾಧ್ಯಮದಿಂದ ಮತ್ತು ಆರ್ಯ ಚಾಣಕ್ಯರು ಸಾಮ್ರಾಟ ಚಂದ್ರಗುಪ್ತನ ಮಾಧ್ಯಮದಿಂದ ಆದರ್ಶ ಧರ್ಮಾಧಿಷ್ಠಿತ ರಾಜ್ಯವ್ಯವಸ್ಥೆಯನ್ನು ಸ್ಥಾಪಿಸಿದರು. ಇಂದು ವಿವಿಧ ಮಾಧ್ಯಮಗಳಿಂದ ಹಿಂದೂ ಧರ್ಮ, ಸಮಾಜ ಮತ್ತು ರಾಷ್ಟ್ರದ ಮೇಲೆ ಅನೇಕ ಆಘಾತಗಳು ಆಗುತ್ತಿವೆ. ಜಾತ್ಯತೀತ ವ್ಯವಸ್ಥೆಯ ಹೆಸರಿನಲ್ಲಿ ಜನರ ಲೂಟಿ ಮತ್ತು ಶೋಷಣೆ ಮಾಡುವ ಈ ವ್ಯವಸ್ಥೆಗೆ ಪರ್ಯಾಯವಾಗಿ ರಾಮರಾಜ್ಯದಂತಹ ಆದರ್ಶ ‘ಹಿಂದೂ ರಾಷ್ಟ್ರ’ವನ್ನು ಸ್ಥಾಪಿಸುವುದು ಕಾಲಾನುಸಾರ ಶ್ರೀಗುರುಸೇವೆಯೇ ಆಗಿದೆ.

ಈ ಉದ್ದೇಶಕ್ಕಾಗಿ 23 ಜುಲೈ 2021 ರಂದು ಹಿಂದೂ ಜನಜಾಗೃತಿ ಸಮಿತಿ ಮತ್ತು ಸನಾತನ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ದೇಶದಾದ್ಯಂತ ‘ಆನ್‌ಲೈನ್’ ಗುರುಪೂರ್ಣಿಮಾ ಮಹೋತ್ಸವವನ್ನು ಆಚರಿಸಲಾಗುವುದು. ಕೊರೋನಾ ಮಹಾಮಾರಿಯಿಂದಾಗಿ ಈ ವರ್ಷ ‘ಆನ್‌ಲೈನ್’ ಮೂಲಕ ಕಾರ್ಯಕ್ರಮ ನಡೆಯಲಿವೆ.


ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಮರಾಠಿ, ಆಂಗ್ಲ, ಗುಜರಾತಿ, ಪಂಜಾಬಿ, ಬಂಗಾಲಿ ಮತ್ತು ಒಡಿಯಾ ಈ 11 ಭಾಷೆಗಳಲ್ಲಿ ‘ಆನ್‌ಲೈನ್’ ಗುರುಪೂರ್ಣಿಮಾ ಮಹೋತ್ಸವವು ನಡೆಯಲಿದೆ. ಈ ಮಹೋತ್ಸವಗಳಲ್ಲಿ, ಶ್ರೀಗುರುಪೂಜೆ, ಸನಾತನ ಸಂಸ್ಥೆಯ ಸಂಸ್ಥಾಪಕ ಪರಾತ್ಪರ ಗುರು (ಡಾ.) ಜಯಂತ ಆಠವಲೆಯವರು ಮಾಡಿದ ಮಾರ್ಗದರ್ಶನಗಳ ಸಂಗ್ರಹದ ಭಾಗ, ಸ್ವರಕ್ಷಣೆಯ ಪ್ರಾತ್ಯಕ್ಷಿಕೆಗಳು, ಆಪತ್ಕಾಲದ ದೃಷ್ಟಿಯಿಂದ ಮಾಡಬೇಕಾದ ಸಿದ್ಧತೆ (ವಿಡಿಯೋಚಿತ್ರ), ಅದೇ ರೀತಿ ಹಿಂದೂಗಳ ರಕ್ಷಣೆ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆ ಈ ವಿಷಯದ ಬಗ್ಗೆ ವಕ್ತಾರರಿಂದ ಮಾರ್ಗದರ್ಶನ ಇರಲಿದೆ.


ಕೋರೊನಾ ಮಹಾಮಾರಿಯಂತಹ ಸಂಕಟವನ್ನು ಎದುರಿಸಲು ಆಧ್ಯಾತ್ಮಿಕ ಶಕ್ತಿಯ ಆವಶ್ಯಕತೆಯಿದ್ದು, ಈ ಮಹೋತ್ಸವದಲ್ಲಿ ಭಾಗವಹಿಸುವುದರಿಂದ ಗುರುವಿನ ಆಶೀರ್ವಾದ ಸಿಗಲಿದೆ, ಹಾಗೆಯೇ ಹಿಂದೂಗಳ ಧಾರ್ಮಿಕ ಸಂಘಟನೆಯೂ ಆಗುತ್ತದೆ. ಆದ್ದರಿಂದ ಎಲ್ಲ ರಾಷ್ಟ್ರ ಮತ್ತು ಧರ್ಮ ಪ್ರೇಮಿ ಹಿಂದೂಗಳು ಕುಟುಂಬ ಸಮೇತರಾಗಿ ಆನ್‌ಲೈನ್‌ನಲ್ಲಿ ‘ಗುರುಪೂರ್ಣಿಮಾ ಮಹೋತ್ಸವ’ದ ಲಾಭವನ್ನು ಪಡೆದುಕೊಳ್ಳಿ ಮತ್ತು ತಮ್ಮ ಸ್ನೇಹಿತರು, ಕುಟುಂಬದವರು, ಪರಿಚಯದವರು ಮತ್ತು ಸಂಬಂಧಿಕರಿಗೂ ಆಮಂತ್ರಣ ನೀಡಿ ಎಂದು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮನವಿ ಮಾಡಿದೆ.

ಕನ್ನಡ ಭಾಷೆಯಲ್ಲಿ ‘ಆನ್‌ಲೈನ್’ ಗುರುಪೂರ್ಣಿಮಾ ಮಹೋತ್ಸವವು ಜುಲೈ 23 ರಂದು ಸಾಯಂಕಾಲ 5.30 ಕ್ಕೆ ನಡೆಯಲಿದ್ದು, ಅದನ್ನು ‘ಯೂ-ಟ್ಯೂಬ್’ನಲ್ಲಿ ವೀಕ್ಷಿಸಬಹುದು. ಇದರ ಲಿಂಕ್‌ಗಳು ಹೀಗಿವೆ:

  1. Youtube.com/hjskarnataka
  2. www.sanatan.org/kannada

ಇತರ ಭಾಷೆಗಳ ಗುರುಪೂರ್ಣಿಮಾ ಮಹೋತ್ಸವಗಳ ಮಾಹಿತಿಯು ಈ ಕೆಳಗಿನ ಲಿಂಕ್‌ನಲ್ಲಿ ನೀಡಲಾಗಿದೆ
www.sanatan.org/mr/gurupurnima

Leave A Reply

Your email address will not be published.