ಚೆರಿಯಪರಂಬು ಗ್ರಾಮಸ್ಥರಿಂದ ಶ್ರಮದಾನ ಕಾರ್ಯಕ್ರಮ

ನಾಪೋಕ್ಲು : ಚೆರಿಯಪರಂಬು ಸರ್ಕಾರಿ ಪ್ರಾಥಮಿಕ ಶಾಲೆಗೆ ತೆರಳುವ ರಸ್ತೆಯ ಎರಡೂ ಬದಿಗಳಲ್ಲಿ ಕಾಡುಗಳು ತುಂಬಿಕೊಂಡು ವಾಹನ ಸವಾರರು ಮತ್ತು ಪಾದಚಾರಿಗಳು ತೊಂದರೆ ಅನುಭವಿಸುವುದನ್ನು ಕಂಡ ಗ್ರಾಮಸ್ಥರು ದಿನಾಂಕ : 18.07.2021 ರಂದು ಕಾಡುಗಳನ್ನು ಕಡಿದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

 

ನಂತರ ಮಾತನಾಡಿದ ಗ್ರಾಮಸ್ಥರು ಈ ಒಂದು ರಸ್ತೆಯೂ ಮಣ್ಣಿನ ರಸ್ತೆಯಾಗಿದ್ದು, ಪ್ರತಿ ನಿತ್ಯ ಇದೇ ರಸ್ತೆಯ ಮುಖಾಂತರ ಶಾಲಾ ವಿದ್ಯಾರ್ಥಿಗಳು ಮದ್ರಸಾ ವಿದ್ಯಾರ್ಥಿಗಳು ತೆರಳುತ್ತಾರೆ. ಅಲ್ಲದೆ ಈ ಭಾಗದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ದೇವಸ್ಥಾನ, ದರ್ಗಾ ಶರೀಫ್, ಅಂಗನವಾಡಿ ಮುಂತಾದ ಕೇಂದ್ರಗಳಿದ್ದು, ಹಲವಾರು ಜನರು ಈ ರಸ್ತೆ ಮುಖಾಂತರ ತೆರಳುವುದರಿಂದ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದೂ ವಾಹನ ಸವಾರರು ವಾಹನದಿಂದ ಇಳಿದು ತಳ್ಳುವಂತಹ ಪರಿಸ್ಥಿತಿ ಎದುರಾಗಿದೆ. ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಶಾಶ್ವತ ಪರಿಹಾರ ಒದಗಿಸಿಕೊಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಪರವಂಡ ಅಬ್ದುಲ್ ಖಾದರ್ ಹಾಜಿ, ಯೂಸುಫ್ ಹಾಜಿ, MJM ಮಾಜಿ ಸದಸ್ಯರಾದ ಪರವಂಡ ಹನೀಫ್, MJM ಮಾಜಿ ಅಧ್ಯಕ್ಷರಾದ ಪರವಂಡ ಹಾರಿಸ್ ITC, ಪರವಂಡ ಆಲಿ, MJM ಪ್ರಧಾನ ಕಾರ್ಯದರ್ಶಿ ಪರವಂಡ ಸಿರಾಜ್, MJM ಮಾಜಿ ಕಾರ್ಯದರ್ಶಿ ಪರವಂಡ ಝುಬೈರ್, ಪರವಂಡ ಸಂಸು, MJM ಸದಸ್ಯರಾದ ಬಿ ಎ ಹನೀಫ, ಪರವಂಡ ಹನೀಫ್,ಪರವಂಡ ಮಿರ್ಷಾದ್, ಪರವಂಡ ಸಫೀಕ್,ಪರವಂಡ ರಶೀದ್, ಉಸ್ತಾದ್ ಅಬಿದ್ ನಹೀಮಿ,ಮುಂತಾದವರು ಹಾಜರಿದ್ದರು.

Leave A Reply

Your email address will not be published.