Chaitra Kundapura : ಚೈತ್ರ ಕುಂದಾಪುರ ಅವರ ನಿಜವಾದ ವಯಸ್ಸೆಷ್ಟು? ಅವರು ಓದಿರುವುದು ಏನು?

Chaitra Kundapura : ಹಿಂದೂ ಫೈಯರ್ ಬ್ರಾಂಡ್ ಎಂದು ಗುರುತಿಸಿಕೊಂಡು ವಿವಾದದ ಸುಳಿಯಲ್ಲಿ ಸಿಲುಕಿದ್ದ ಚೈತ್ರ ಕುಂದಾಪುರ ಅವರಿಗೆ ಬಿಗ್ ಬಾಸ್ ಹೊಸ ಬದುಕನ್ನು ನೀಡಿದೆ. ಬಿಗ್ ಬಾಸ್ ಮನೆಯೊಳಗೆ ತಮ್ಮ ಮಾತಿನ ದಾಟಿಯಿಂದಲೇ, ಕಿರಿಚಾಟಗಳಿಂದಲೇ ಫೇಮಸ್ ಆಗಿದ್ದ ಚೈತ್ರ ಇದೀಗ ದೊಡ್ಡಮನೆಯಿಂದ ಔಟ್ ಆಗಿದ್ದಾರೆ. ಈ ಬೆನ್ನಲ್ಲೇ ಚೈತ್ರ ಅವರ ನಿಜವಾದ ವಯಸ್ಸೆಷ್ಟು? ಅವರು ಏನು ಓದಿದ್ದಾರೆ? ಮೊದಲು ಏನೆಲ್ಲಾ ಕೆಲಸ ಮಾಡುತ್ತಿದ್ದರು? ಎಂಬುದು ಹಲವರ ಪ್ರಶ್ನೆ. ಇದಕ್ಕೆ ಇಲ್ಲಿದೆ ನೋಡಿ ಉತ್ತರ.
ಚೈತ್ರ ಅವರ ಶಿಕ್ಷಣ:
ಚೈತ್ರಾ ಹುಟ್ಟಿದ್ದು ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ. ಇಲ್ಲಿನ ತೆಕ್ಕಟ್ಟೆ ಎಂಬಲ್ಲಿ ಶಾಲಾ ಹಾಗೂ ಪಿಯುಸಿ ಶಿಕ್ಷಣವನ್ನು ಮುಗಿಸಿದ ಬಳಿಕ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಚೈತ್ರ ಮಾಡಿದ ಉದ್ಯೋಗ:
ಶಿಕ್ಷಣ ಪೂರ್ತಿಗೊಳಿಸಿದ ನಂತರ ಉದ್ಯೋಗಕ್ಕೆ ಸೇರಿಕೊಂಡ ಚೈತ್ರಾ ಮೊದಲಿಗೆ ಸುದ್ದಿ ವಾಹಿನಿಯೊಂದರಲ್ಲಿ ಕೆಲಸ ಮಾಡಿದರು. ಆನಂತರ ಉಡುಪಿಯ ಸ್ಪಂದನಾ ಟಿವಿ, ಮುಕ್ತ ನ್ಯೂಸ್, ಉದಯವಾಣಿ ಪತ್ರಿಕೆಯಲ್ಲೂ ಉಪಸಂಪಾದಕಿಯಾಗಿ ಕೆಲಸ ಮಾಡಿದ್ದರು. ಒಂದಷ್ಟು ಕಾಲ ಉಡುಪಿಯ ಅಜ್ಜರಕಾಡಿನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿದ್ದ ಚೈತ್ರಾ ಕುಂದಾಪುರ, ಪತ್ರಕರ್ತೆಯಾಗಿ, ನಿರೂಪಕಿಯಾಗಿ, ಭಾಷಣಕಾರರಾಗಿ ಗಮನ ಸೆಳೆದಿದ್ದಾರೆ.
ಸಾರ್ವಜನಿಕವಾಗಿ ಗುರುತಿಸಿಕೊಂಡ ಚೈತ್ರ:
ಚೈತ್ರ ಕುಂದಾಪುರ ಅವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಲ್ಲಿ ನ್ಯಾಷನಲ್ ಎಕ್ಸಿಕ್ಯೂಟಿವ್ ಕಮಿಟಿ ಮೆಂಬರ್ ಹಾಗೂ ಸೆಂಟ್ರಲ್ ವರ್ಕಿಂಗ್ ಕಮಿಟಿ ಮೆಂಬರ್ ಕೂಡ ಆಗಿದ್ದರು. ಅಲ್ಲದೆ ಹಿಂದುತ್ವದ ಬಗ್ಗೆ ಅಪಾರ ಜ್ಞಾನವುಳ್ಳ ಚೈತ್ರಾ ಕುಂದಾಪುರ, ತಮ್ಮ ಭಾಷಣಗಳಿಂದಲೇ ಜನರ ಗಮನ ಸೆಳೆದಿದ್ದರು.
ಚೈತ್ರ ಅವರ ವಯಸ್ಸು:
ಚೈತ್ರಾ ಅವರಿಗೆ ಈಗ 28 ವರ್ಷ ವಯಸ್ಸು ಎನ್ನಲಾಗಿದೆ. ಗೂಗಲ್ ನೀಡಿದ ಮಾಹಿತಿ ಅನುಸಾರ ಈಕೆ ವಯಸ್ಸು 28 ಎನ್ನಲಾಗುತ್ತಿದೆ.
Comments are closed.