Kalaburagi: ಎಣ್ಣೆ ಹೊಡೆದು, ಬೇಕಾಬಿಟ್ಟಿ ಕಾರು ಓಡಿಸಿ, ಅರೆಬೆತ್ತಲಾಗಿ ಗ್ರಾಮಸ್ಥರ ಕೈಗೆ ತಗಲಾಕ್ಕೊಂಡ ಪ್ರಸಿದ್ಧ ಮಠದ ಸ್ವಾಮಿ..!

Kalaburagi: ನಮ್ಮ ಸನಾತನ ಧರ್ಮದಲ್ಲಿ ಮಠಮಾನ್ಯಗಳಿಗೆ ವಿಶೇಷ ಸ್ಥಾನಮಾನವಿದೆ. ಅಂತಯೇ ಮಠದ ಮಠಾಧಿಪತಿಗಳಿಗೂ ಕೂಡ ಅಷ್ಟೇ ಗೌರವ ಮನ್ನಣೆಗಳನ್ನು ನೀಡುತ್ತೇವೆ. ಅವರನ್ನು ಗುರುವಿನ ಸ್ಥಾನದಲ್ಲಿಟ್ಟು ಪೂಜಿಸುತ್ತೇವೆ ಇವುಗಳನ್ನು ಉಳಿಸಿಕೊಂಡು, ಕಾಪಾಡಿಕೊಂಡು ಹೋಗುವುದು ಮಠದ ಪೀಠಾಧಿಪತಿಗಳ ಕರ್ತವ್ಯ. ಆದರೆ ಇನ್ನೊಂದು ಮಠದ ಸ್ವಾಮಿ ಒಬ್ಬರು ತಾನು ಮಠದ ಪೀಠಾಧಿಪತಿ ಎಂಬುದನ್ನು ಮರೆತು ರಂಪಾಟ ಮಾಡಿದ್ದಾರೆ. ಅಷ್ಟೇ ಅಲ್ಲ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿ ಅಪಘಾತ ಮಾಡಿದ್ದಾರೆ.

ಹೌದು, ಕಲಬುರಗಿ(Kalaburagi) ಜಿಲ್ಲೆ ಅಫಜಲ್ಪುರ ತಾಲೂಕಿನ ಉಡಚಾಣ ಗ್ರಾಮದ ಪ್ರಸಿದ್ದ ಶಂಕರಲಿಂಗೇಶ್ವರ ಸಂಸ್ಥಾನ ಹಿರೇಮಠದ ಮಠಾಧಿಪತಿ ಶ್ರೀ ಶಾಂತಲಿಂಗ ಶಿವಾಚಾರ್ಯರು ಜನವರಿ 8 ರಂದು ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಕಂಠ ಪೂರ್ತಿ ಮದ್ಯ ಸೇವಿಸಿ ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ಚಲಾಯಿಸಿ ಅಪಘಾತ ನಡೆಸಿದ್ದು, ಗ್ರಾಮಸ್ಥರ ಕೈಗೆ ತಗ್ಲಾಕೊಂಡಿದ್ದಾನೆ. ಆ ಗ್ರಾಮಸ್ಥರು ಸ್ವಾಮಿಯನ್ನ ಯಗ್ಗಾಮುಗ್ಗ ತರಾಟೆ ತೆಗೆದುಕೊಂಡಿದ್ದಾರೆ.

ಇಷ್ಟೇ ಅಲ್ಲದೆ ಈ ಅಸಾಮಿ ಅರ್ಧಂಬರ್ಧ ಬಟ್ಟೆ ಬಿಚ್ಚಿಕೊಂಡು ಅಲೆದಾಡುತ್ತಿದ್ದರು. ಸ್ಥಳೀಯರು ಪರಿಚಯ ಕೇಳಿದಾಗ ಸುಳ್ಳು ಮಾಹಿತಿ ನೀಡಿ ಪರಾರಿಯಾಗಲು ಯತ್ನಿಸಿದ್ದರು. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಅವರನ್ನು ತರಾಟೆಗೆ ತೆಗೆದುಕೊಂಡು ಗ್ರಾಮದಲ್ಲಿಯೇ ಹಿಡಿದಿಟ್ಟುಕೊಂಡಿದ್ದರು.ವಿಷಯ ಗೊತ್ತಾಗುತ್ತಿದ್ದಂತೆ ಉಡಚಾಣ ಗ್ರಾಮಸ್ಥರು ಸ್ಥಳಕ್ಕೆ ಹೋಗಿ, ಸ್ಥಳೀಯರ ಮನವೊಲಿಸಿ, 22000 ರುಪಾಯಿ ದಂಡ ಕಟ್ಟಿ ಅವರನ್ನು ಬಿಡಿಸಿಕೊಂಡು ಬಂದಿದ್ದರು.

ಶ್ರೀಗಳ ನಡವಳಿಕೆಗೆ ಬೇಸತ್ತ ಗ್ರಾಮಸ್ಥರು ಸೋಮವಾರ ಸಭೆ ನಡೆಸಿದರು. ಬುಧವಾರ ಶಾಸಕ ಎಂ. ವೈ ಪಾಟೀಲರನ್ನು ಭೇಟಿಯಾಗಿ ಉಜ್ಜಯಿನಿ ಜಗದ್ಗುರುಗಳ ಬಳಿ ಗ್ರಾಮಸ್ಥರ ನಿಯೋಗ ತೆರಳಿ ಮಠಾಧ್ಯಕ್ಷರ ಬದಲಾವಣೆಗೆ ಮನವಿ ಸಲ್ಲಿಸಲು ತೀರ್ಮಾನ ತೆಗೆದುಕೊಂಡಿದ್ದಾರೆ. ಮಠಕ್ಕೆ ಹೊಸ ಮಠಾಧಿಪತಿ ನೇಮಿಸುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.

Comments are closed.