ನಟ ದರ್ಶನ್ ಮೊನ್ನೆ ಉದುರಿಸಿದ ‘ ಪುಡಾಂಗು ‘ ಪದ ಎದ್ದು ಬಿದ್ದು ಓಡ್ತಿದೆ | ಏನೀ ವೈರಲ್ ಆಗ್ತಿರೋ ಪದದ ಅರ್ಥ ?!

ಬೆಂಗಳೂರು: ನಟ ದರ್ಶನ್ ನಿರ್ದೇಶಕ ಪ್ರೇಮ್ ವಿರುದ್ಧ ಬಳಸಿದ ಪುಡಾಂಗು ಎಂಬ ಪದ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಎರಡೇ ಎರಡು ದಿನಗಳ ಕೆಳಗೆ ನಟ ದರ್ಶನ್ ಅವರು ಮೈಸೂರಿನ ತಮ್ಮ ಫಾರ್ಮ್ ಹೌಸ್‌ನಲ್ಲಿ ತಮ್ಮ ವಿರುದ್ಧ ಕೇಳಿ ಬಂದ ಹಲವು ಆರೋಪಗಳಿಗೆ ವಿವರಣೆ ನೀಡುವ ಪ್ರಯತ್ನ ಮಾಡಿದ್ದರು. ಈ ವೇಳೆ  ‘ ಪುಡಾಂಗ್ ‘ ಎನ್ನುವ ಹೋದ ಪದವನ್ನು ‘ ಕಾಯಿನ್ ‘ ಮಾಡಿದ್ದರು.

“ನಾನು ಪ್ರೇಮ್ ಸಿನಿಮಾಗೆ 100 ದಿನಗಳ ಕಾಲ ಕೆಲಸ ಮಾಡಿದ್ದೆ ಎಂದು ಚರ್ಚೆಯಾಯ್ತು ಎಂದು ಹೇಳಿದರು. ಈ ವೇಳೆ ಪ್ರೇಮ್ ಏನು ದೊಡ್ಡ ಪುಡಾಂಗಾ..?” ಎಂದಿದ್ದರು ದರ್ಶನ್.

ಇದೀಗ ಪುಡಾಂಗು ಪದದ ಬಗ್ಗೆ ಇದೀಗ ವ್ಯಾಪಕ ಚರ್ಚೆಯಾಗುತ್ತಿದೆ.  ಕನ್ನಡದಲ್ಲಿ ಪುಡಾಂಗ್ ಪದ ಸದ್ಯಕ್ಕೆ ಬಳಕೆ ಕಮ್ಮಿ. ಇದೀಗ ಪುಡಾಂಗ್ ಫೇಮಸ್ ಆದ ಕಾರಣ ಮುಂದೆ ಅದರ ಬಳಕೆ ಹೆಚ್ಚಾಗಬಹುದು. ಯಾರಿಗೆ ಗೊತ್ತು, ಇಷ್ಟರಲ್ಲಿ ಒಬ್ಬ ನಿರ್ದೇಶಕ-ನಿರ್ಮಾಪಕ ಈ ಪದವನ್ನು ತಮ್ಮ ಹೊಸ ಚಿತ್ರಕ್ಕೆ ಇಟ್ಟರೂ ಅಚ್ಚರಿ ಇಲ್ಲ.

Ad Widget


Ad Widget


Ad Widget

ಅಷ್ಟಕ್ಕೂ ಪುಡಾಂಗ್ ಎಂದರೇನು ? ಇದು ಯುವಕರು, ಯುವತಿಯರು ಕೂಡ ಒಬ್ಬರನ್ನೊಬ್ಬರು ಕಿಚಾಯಿಸುವ ಪದ. ಕಾಲೆಳೆಯಲು ಉಪಯೋಗಿಸುವ ಪದವಾಗಿ ಈ ಪದ ‘ನೀನೇನು ದೊಡ್ಡ ಪುಡಾಂಗಾ..? ಎನ್ನುವ ಬಹುಸಾಮಾನ್ಯ ವಾಕ್ಯ ಬಳಕೆಯಲ್ಲಿ ಹೆಚ್ಚಾಗಿ ಉಪಯೋಗಿಸಲ್ಪಡುತ್ತಿದೆ.

ಈ ಪದದ ಅರ್ಥ ನೀನೇನು ದೊಡ್ಡ ಜನಾನಾ?, ನೀನ್ ದೊಡ್ದ ಲೀಡರಾ?, ನೀ ಮಲ್ಲ ಅಣ್ಣನಾ? ಹೀಗೆ  ಹಂಗಿಸಿ ಮಾತಾಡಲು ಬಳಸುವ ಪದವಾಗಿ ಅರ್ಥ ಕಲ್ಪಿಸುತ್ತದೆ ಪುಡಾಂಗ್. ‘ಯಿ ಮಲ್ಲ ಯೇ ‘ ನಾ ಅನ್ನುವುದು ಪುಡಾಂಗ್ ಪದದ ತುಳು ಸಮನಾರ್ಥಕ ಪದವಿರಬಹುದು.

ಅಲ್ಲದೇ ಪುಡಾಂಗು ಅಂದ್ರೆ ದಾದಾ (ಗ್ಯಾಂಗ್ ಲೀಡರ್) ಎಂಬ ಅರ್ಥದಲ್ಲೂ ಬಳಸಲಾಗ್ತಿದೆ. ಈ ಪದ ಮಚ್ಚಾ ಪದದ ಥರಾನೆ. ಮಚ್ಚಾ ತಮಿಳಿನಿಂದ ಬಂದಿದೆ. ಇದು ಕೂಡ ಹಾಗೆ ಎಲ್ಲಿಂದಲೋ ಬಂದಿದೆ. ಯುವ ಪೀಳಿಗೆ ಬಳಸುತ್ತಿದ್ದಾರೆ. ಪುಡಾಂಗ್ ಪದವೂ ಸಹ ಹೀಗೆ ಬಳಕೆಯಾಗಿರಬಹುದು. ಈಗ ಸಿನಿಮಾದವರು ಪಬ್ಲಿಕ್ ಆಗಿ ಬಳಸಿದ್ದಾರೆ. ಮುಂದೊಂದು ದಿನ ಇದನ್ನು ರಾಜಕೀಯ ಎದುರಾಳಿಗಳು ಕೂಡ ಬಳಸಲು ಶುರು ಮಾಡುತ್ತಾರೆ. ಮಚ್ಚನ ಥರ ಕೂಡಾ ಪುಡಾಂಗ್ ಕೂಡಾ ಲೈನ್ ಲೈಟಿಗೆ ಬರ್ತಾನೆ, ಕಾದು ನೋಡಿ !

Leave a Reply

Ad Widget
Ad Widget Ad Widget
error: Content is protected !!
Scroll to Top
%d bloggers like this: