ಲಾಕ್ ಡೌನ್ ನಲ್ಲಿ ಅತ್ತೆಯ ಮನೆಯಲ್ಲೇ ಕೂತುಂಡ ಗಂಡ ಕೊನೆಗೆ ಮೂಗು ಕಚ್ಚಿದ !

ಧಾರವಾಡ: ಪತಿಯೊಬ್ಬ ತನ್ನ ಪ್ರೀತಿಯ ಪತ್ನಿಯ ಮೂಗು ಕಚ್ಚಿದ್ದಾನೆ. ಇದೆಲ್ಲ ಪತ್ನಿಯ ತವರು ಮನೆಯಲ್ಲೇ ನಡೆದಿದೆ. ಮದ್ಯದ ಅಮಲಿನಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ.

ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆರೋಪಿ ಉಮೇಶ್ ಈ ಕೃತ್ಯ ಎಸಗಿದ್ದಾನೆ. ಮೂಲತ: ಬೈಲ ಹೊಂಗಲ ನಿವಾಸಿಯಾಗಿರುವ ಉಮೇಶ, ಕಳೆದ ಆರು ತಿಂಗಳಿನಿಂದ ಹೆಂಡತಿ ಮನೆಯಲ್ಲಿ ವಾಸಿಸುತ್ತಿದ್ದ ಎಂದು ವರದಿಯಾಗಿದೆ. ಲಾಕ್ ಡೌನ್ ನ ಸಂದರ್ಭದಲ್ಲಿ ಕೆಲಸವಿಲ್ಲದೆ ಮನೆಯಲ್ಲಿ ವಾಸಿಸುತ್ತಿದ್ದ ಆತನಿಗೆ ಪತ್ನಿ ಪ್ರೀತಿ ನೀಡುತ್ತಿರಲಿಲ್ಲ. ಮೊನ್ನೆ ಬಲವಂತದ ಮುತ್ತಿಕ್ಕಲು ಹೋದವ,  ಕೊನೆಗೆ ಮೂಗು ಕಚ್ಚುವ ಹಂತಕ್ಕೆ ತಲುಪಿದೆ.

ಗಂಭೀರವಾಗಿ ಮೂಗಿನಿಂದ ರಕ್ತ ಸೋರಿ ಗಾಯಗೊಂಡಿರುವ ಪತ್ನಿ ಗೀತಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆ ಸಂದರ್ಭ ಅಡ್ಡಬಂದ ಅತ್ತೆ ಮೇಲೆ ಕೂಡ ಉಮೇಶ ಹಲ್ಲೆ ನಡೆಸಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Ad Widget


Ad Widget


Ad Widget

Leave a Reply

Ad Widget
Ad Widget Ad Widget
error: Content is protected !!
Scroll to Top
%d bloggers like this: