ಬೆಳ್ತಂಗಡಿ, ಸುಬ್ರಮಣ್ಯ | ಮಗಳನ್ನು ಮದುವೆ ಮಾಡಿ ಕೊಡಲ್ಲ ಅಂದದ್ದೆ ತಪ್ಪಾಯ್ತು, ಅಳಿಯನಾಗಲು ಹೊರಟವ ಅವಾಚ್ಯವಾಗಿ ಬೈದು ಮಂಡೆಕತ್ತಿ ಬೀಸಿದ !

ಬೆಳ್ತಂಗಡಿ;  ಮಗಳನ್ನು ಮದುವೆ ಮಾಡಿಕೊಡುವುದಿಲ್ಲ ಎಂದು ತಂದೆ ಹೇಳಿದ್ದೇ ತಪ್ಪಾಯಿತು. ಭಾವೀ ಅಳಿಯನಾಗಳು ಆಸೆಪಟ್ಟು ವ್ಯಕ್ತಿಯೇ ಕಟ್ಟಿ ಬೀಸಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

ಕಡಬ ತಾಲೂಕು ಸುಬ್ರಹ್ಮಣ್ಯ ಕೈಕಂಬ ನಿವಾಸಿ ದಿನೇಶ ಎಂಬಾತ ಲಾಯಿಲ ಗ್ರಾಮದ ವಿವೇಕಾನಂದ ನಗರ ಸೋಮನಾಥ ಕುಲಾಲ್ ಎಂಬವರಿಗೆ ಕತ್ತಿಯಿಂದ ಕಡಿದು ಗಾಯಗೊಳಿಸಿದ ಘಟನೆ ಜು.11 ರಂದು ಬೆಳಿಗ್ಗೆ ನಡೆದಿದೆ.

ಆರೋಪಿಯು ಕೆಎ 51 ಇಜೆ174 ನಂಬರ್‌ನ ಬೈಕಿನಲ್ಲಿ ವಿವೇಕಾನಂದ ನಗರದ ಸೋಮನಾಥ ಕುಲಾಲ್ ಅವರ ಮನೆಯ ಸಿಟೌಟ್‌ ಗೆ ಏಕಾಏಕಿ ನುಗ್ಗಿ ಬಂದಿದ್ದ. ಅಲ್ಲಿದ್ದ ಸೋಮನಾಥ ಅವರ ಪತ್ನಿ  ಮತ್ತು ಮಗಳನ್ನು ಕಂಡು ಮಗಳನ್ನು ಮದುವೆ ಮಾಡಿಕೊಡುವಂತೆ ಬೆದರಿಸಿದ್ದಾನೆ. ಕೊನೆಗೆ ಅವಾಚ್ಯವಾಗಿ ಶಬ್ದ ಪ್ರಯೋಗ ಮಾಡಿದ್ದಾನೆ.

Ad Widget


Ad Widget


Ad Widget

‌ಆನಂತರ ಆತನ ಕೈಯಲ್ಲಿದ್ದ ಬ್ಯಾಗಿನಿಂದ ಮಂಡೆಕತ್ತಿಯೊಂದನ್ನು ತೆಗೆದು ಸೋಮನಾಥ ಅವರ ತಲೆಗೆ ಗುರಿ ಇಟ್ಟು ಬೀಸಿದ್ದಾರೆ ಎನ್ನಲಾಗಿದೆ. ಆಗ ತಲೆಗೆ ಕಡಿಯುವ ಸಮಯ ಅವರು ತಡೆಯುವ ವೇಳೆ ಎಡಕೈಯ ಅಂಗೈಗೆ ಸೀಳಿದ ರಕ್ತಗಾಯವಾಗಿದ್ದು ,  ಬಿಡಿಸಲು ಬಂದ ಪಕ್ಕದ ಮನೆಯ ಮಹೇಶರವರಿಗೆ ಕೈಗೆ ತಾಗಿ ರಕ್ತಗಾಯವಾಗಿರುತ್ತದೆ.  ಆ ಸಮಯ ಬೊಬ್ಬೆ ಕೇಳಿ ಇತರರು ಬರುವುದನ್ನು ಕಂಡು ಆರೋಪಿಯು ಕೊಲೆಬೆದರಿಕೆಯೊಡ್ಡಿ ಪರಾರಿಯಾಗಿದ್ದಾನೆ.

ಇದೀಗ ಆರೋಪಿ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಐಪಿಸಿ ಸೆಕ್ಷನ್ ಕಲಂ: 448,504,307,324, 506ರಂತೆ ಎಫ್‌ಐಆರ್ ದಾಖಲಾಗಿದೆ.

Leave a Reply

Ad Widget
Ad Widget Ad Widget
error: Content is protected !!
Scroll to Top
%d bloggers like this: