ಪತ್ನಿಯನ್ನು ಕೊಂದು ಏನೂ ಅರಿವಿಲ್ಲದಂತೆ ನಟಿಸಿದ್ದ ಪತಿಮಹಾಶಯ!ಕಲ್ಲಿನಿಂದ ಜಜ್ಜಿದ ರಭಸಕ್ಕೆ ಆಕೆ ಮೇಲೇಳಲೇ ಇಲ್ಲ

ಪತ್ನಿಯ ಮೇಲೆ ಅನುಮಾನಗೊಂಡು,ಪತಿಯೇ ಆಕೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ನಡೆಸಿರುವ ಘಟನೆ ಗದಗ ದಲ್ಲಿ ನಡೆದಿದ್ದು,ಆರೋಪಿ ಪತಿ ಸೈಫ್ ಅಲಿ ಈಟಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಹುಬ್ಬಳ್ಳಿ ತಾಲೂಕಿನ ಕುಸಗಲ್ ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಸೈಫ್ ಅಲಿ ಈಟಿ ಎಂಬಾತನು ತನ್ನ ಪತ್ನಿಗೆ ಮೆಹರುನ್ನಿಸಾ ಬೇರೆಯವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಪ್ರತಿ ಜಗಳ ತೆಗೆಯುತ್ತಿದ್ದು, ಎಂದಿನಂತೆ ಮೊನ್ನೆಯ ದಿನವೂ ಜಗಳ ಪ್ರಾರಂಭವಾಗಿದೆ. ಈ ಸಂದರ್ಭದಲ್ಲಿ ಇಬ್ಬರಿಗೂ ಮಾತಿಗೆ ಮಾತು ಬೆಳೆದು ಅಲ್ಲೇ ಇದ್ದ ಕಲ್ಲನ್ನ ಪತ್ನಿಯ‌ ಮೇಲೆ ಎತ್ತಿ ಹಾಕಿದ್ದಾನೆ. ಕಲ್ಲು ಆಕೆಯ ಮೇಲೆ ಬಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಆಕೆಯನ್ನು ಕಿಮ್ಸ್‌ಗೆ ಅಡ್ಮಿಟ್ ಮಾಡಿದ್ದ.ಚಿಕಿತ್ಸೆ ಫಲಿಸದೇ ಆಕೆ ಕೊನೆಯುಸಿರೆಳೆದಿದ್ದು, ಸದ್ಯ ಆತನ ನಿಜ ಸ್ವರೂಪ ಬಯಲಾಗಿದೆ.

ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಗ್ರಾಮೀಣ ಠಾಣೆ ಪೊಲೀಸರು ಆರೋಪಿಯ ತನಿಖೆ ಮುಂದುವರೆದಿದೆ.

ದಂಪತಿಗಳು ಮದುವೆಯಾಗಿ ಹತ್ತು ವರ್ಷಗಳಾಗಿದ್ದು, ಇಬ್ಬರು ಮುದ್ದಾದ ಮಕ್ಕಳಿದ್ದಾರೆ.

Leave A Reply

Your email address will not be published.