Day: July 6, 2021

ನೆಟ್ಟಣ: ಮನೆಯೊಂದಕ್ಕೆ ಅರಣ್ಯಾಧಿಕಾರಿಗಳ ದಾಳಿ| ಕಾಡು ಪ್ರಾಣಿಯ ಮಾಂಸ ಪತ್ತೆ, ಓರ್ವ ವಶಕ್ಕೆ

ಕಡಬ : ಖಚಿತ ಮಾಹಿತಿಯ ಮೇರೆಗೆ ಮನೆಯೊಂದಕ್ಕೆ ಸುಬ್ರಹ್ಮಣ್ಯ ವಲಯಾರಣ್ಯಧಿಕಾರಿಗಳು ದಾಳಿ ನಡೆಸಿ ಕಾಡು ಪ್ರಾಣಿಯೊಂದರ ಮಾಂಸದೊಂದಿಗೆ ಓರ್ವ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡ ಘಟನೆ ಜು.6 ರ ಸಂಜೆ 4 ಗಂಟೆ ಸುಮಾರಿಗೆ ನಡೆದಿದೆ. ಸುಬ್ರಹ್ಮಣ್ಯ ವಲಯಾರಣ್ಯಧಿಕಾರಿಗಳ ನೇತೃತ್ವದಲ್ಲಿ ನೆಟ್ಟಣ ವಾಲ್ತಾಜೆ ರಮೇಶ್ ಎಂಬವರ ಮನೆಗೆ ದಾಳಿ ನಡೆಸಿದ್ದು ಈ ಸಂದರ್ಭದಲ್ಲಿ ಮನೆಯಲ್ಲಿ ಕಾಡು ಪ್ರಾಣಿಯೊಂದರ ಮಾಂಸ ಪತ್ತೆಯಾಗಿತ್ತು ಎನ್ನಲಾಗಿದ್ದು ಈ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಕಡಬ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಆಹಾರದ ಕಿಟ್ ವಿತರಣೆಗೆ ಚಾಲನೆ

ಕಡಬ : ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರನ್ನು ಗುರುತಿಸಿ ಅವರಿಗೂ ಆಹಾರದ ಕಿಟ್‌ಗಳನ್ನು ಸರಕಾರ ಕಡೆಯಿಂದ ಕೊಡಿಸಬೇಕೆಂದು ಕಳೆದ ವರ್ಷ ಕೋವಿಡ್ ಸಂದರ್ಭದಲ್ಲಿ ಕಾರ್ಮಿಕರ ಸಚಿವರಲ್ಲಿ ಮನವಿ ಮಾಡಿಕೊಂಡಂತೆ ಕೊರೋನಾದ 2ನೇ ಅಲೆಯ ಸಂದರ್ಭ ಕಟ್ಟಡ ಮತ್ತು ಇತರೆ ನಿರ್ಮಾಣದ ಕಾರ್ಮಿಕರಿಗೆ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣದ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೀಡಿದ ಆಹಾರದ ಕಿಟ್ ಕಡಬ ತಾಲೂಕಿನಲ್ಲಿ ವಿತರಣೆಗೆ ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಚಾಲನೆ ನೀಡಿದರು. ಈ ಸಂದರ್ಭದಲ್ಲಿ …

ಕಡಬ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಆಹಾರದ ಕಿಟ್ ವಿತರಣೆಗೆ ಚಾಲನೆ Read More »

ಪುತ್ತೂರು : ಅಮರ್ ಜವಾನ್ ಜ್ಯೋತಿಗೆ ಹಾನಿ | ಕ್ರಮಕ್ಕೆ ಒತ್ತಾಯ

ಪುತ್ತೂರಿನ ಕಿಲ್ಲೇ ಮೈದಾನದ ಬಳಿ ಇರುವ ಅಮರ್ ಜವಾನ್ ಜ್ಯೋತಿಗೆ ಹಾನಿ ಆಗಿರುವ ಘಟನೆ ಜು.6ರಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.ಘಟನೆ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪುತ್ತೂರಿನ ನಟ್ಟೋಜ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮುಂದಾಳತ್ವದ ಅಂಬಿಕಾ ವಿದ್ಯಾಲಯದ ಆಶ್ರಯದಲ್ಲಿ ಭಾರತೀಯ ವೀರ ಯೋಧರ ಸ್ಮರಣಾರ್ಥ 2017 ರಲ್ಲಿ ಲೋಕಾಪರ್ಣೆಗೊಂಡ ಅಮರ್ ಜವಾನ್ ಜ್ಯೋತಿಗೆ ಕಿಡಿಗೇಡಿಗಳು ಹಾನಿ ಮಾಡಿದ್ದಾರೆ. ಇಂದು ಬೆಳಿಗ್ಗೆ ಅಂಬಿಕಾ ವಿದ್ಯಾಸಂಸ್ಥೆಯ‌ ಮೆನೇಜರ್ ರವೀಂದ್ರರವರು ಸ್ಮಾರಕದ ಶುಚಿತ್ವಕ್ಕೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ. ಘಟನಾ ಕುರಿತು …

ಪುತ್ತೂರು : ಅಮರ್ ಜವಾನ್ ಜ್ಯೋತಿಗೆ ಹಾನಿ | ಕ್ರಮಕ್ಕೆ ಒತ್ತಾಯ Read More »

ಪ್ರೀತಿಸಿದ ಯುವತಿಯೊಂದಿಗೆ ಮನಸ್ತಾಪ | ನೊಂದು ರಿಕ್ಷಾದೊಳಗೆ ಆತ್ನಹತ್ಯೆ ಮಾಡಿಕೊಂಡ ಚಾಲಕ

ಪ್ರೀತಿಸಿದ ಯುವತಿಯೊಂದಿನ ಮನಸ್ತಾಪದಿಂದ ಮನನೊಂದ ರಿಕ್ಷಾ ಚಾಲಕರೊಬ್ಬರು ರಿಕ್ಷಾದೊಳಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಅಲ್ಬಾಡಿ ಗ್ರಾಮದ ಚೆಣ್ಮಕಿ ಹಾಡಿ ಯಲ್ಲಿ ನಡೆದಿದೆ. ಮೃತರನ್ನು ಬೆಳ್ವೆ ಗ್ರಾಮದ ಹೊನ್ಕಲ್ ನಿವಾಸಿ ಜಿಲ್ಲಾ ನಾಯ್ಕ ಎಂಬವರ ಮಗ ಈಶ್ವರ ನಾಯ್ಕ(30) ಎಂದು ಗುರುತಿಸಲಾಗಿದೆ. ಇವರು ಸುಮಾರು ಸಮಯದಿಂದ ಪ್ರೀತಿಸುತ್ತಿದ್ದ ಯುವತಿಯೊಂದಿಗೆ ಮನಸ್ತಾಪ ಉಂಟಾಗಿದ್ದು, ಇದೇ ಚಿಂತೆಯಲ್ಲಿ ಜು.3ರಂದು ಮನೆಯಿಂದ ಅಲ್ಬಾಡಿ ಆಟೋರಿಕ್ಷಾ ನಿಲ್ದಾಣಕ್ಕೆ ಹೋಗುವುದಾಗಿ ಹೇಳಿದವರು ನಾಪತ್ತೆಯಾಗಿದ್ದರು. ಎಲ್ಲಾ ಕಡೆ …

ಪ್ರೀತಿಸಿದ ಯುವತಿಯೊಂದಿಗೆ ಮನಸ್ತಾಪ | ನೊಂದು ರಿಕ್ಷಾದೊಳಗೆ ಆತ್ನಹತ್ಯೆ ಮಾಡಿಕೊಂಡ ಚಾಲಕ Read More »

ಗೂಂಡಾ ಸಂಸ್ಕೃತಿ ಹಿನ್ನೆಲೆಯವರಿಗೆ ಆದ್ಯತೆ: ರೌಡಿ ಕೊತ್ವಾಲನ ಶಿಷ್ಯ ಕೆಪಿಸಿಸಿ ಅಧ್ಯಕ್ಷ, ಯುವ ಕಾಂಗ್ರೆಸ್ ಗೆ ‘ಗೂಂಡಾಧ್ಯಕ್ಷರು’ | ಟ್ವೀಟ್ ಮಾಡಿ ಬಿಜೆಪಿ ಲೇವಡಿ

ಬೆಂಗಳೂರು: 2022 ರ ಜನವರಿಗೆ ಶಾಸಕ ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಯುವ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಕಾಂಗ್ರೆಸ್ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಬಿಜೆಪಿ, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ನಡೆದ ಕದನದಿಂದಾಗಿ ಯುವ ಕಾಂಗ್ರೆಸ್‌ ಅಧ್ಯಕ್ಷರ ಅವಧಿ ಮೊಟಕುಗೊಳಿಸಿ ಜನವರಿ ನಂತರ ಕ್ರಿಮಿನಲ್‌ ಹಿನ್ನಲೆಯ ವ್ಯಕ್ತಿಗೆ ಪಟ್ಟಕಟ್ಟುವುದಕ್ಕೆ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನಿರ್ಧರಿಸಿದೆ ಎಂದು ಟ್ವೀಟ್ ಮಾಡಿದೆ. ಗೂಂಡಾ ಸಂಸ್ಕೃತಿಯ ಹಿನ್ನೆಲೆಯವರಿಗೆ ಮಾತ್ರ ಮಣೆ ಹಾಕುತ್ತದೆ ಎಂಬುದಕ್ಕೆ …

ಗೂಂಡಾ ಸಂಸ್ಕೃತಿ ಹಿನ್ನೆಲೆಯವರಿಗೆ ಆದ್ಯತೆ: ರೌಡಿ ಕೊತ್ವಾಲನ ಶಿಷ್ಯ ಕೆಪಿಸಿಸಿ ಅಧ್ಯಕ್ಷ, ಯುವ ಕಾಂಗ್ರೆಸ್ ಗೆ ‘ಗೂಂಡಾಧ್ಯಕ್ಷರು’ | ಟ್ವೀಟ್ ಮಾಡಿ ಬಿಜೆಪಿ ಲೇವಡಿ Read More »

ಯಶವಂತಪುರ- ಮಂಗಳೂರು ಹಗಲು ರೈಲಿಗೆ ವಿಶೇಷ ಆಕರ್ಷಣೆ: ಜು.7ರಿಂದ ವಿಸ್ಟಾಡೋಮ್ ಬೋಗಿ ಸೇರ್ಪಡೆ

ಕನ್ನಡಿಗರಿಗೆ ವಿಸ್ತಾಡೋಮ್ ರೈಲ್ವೇಯ ಭಾಗ್ಯ. ಮಹಾರಾಷ್ಟ್ರ ನಂತರ ಕರ್ನಾಟಕದಲ್ಲಿ ಅತ್ಯಾಧುನಿಕ ಎರಡೆರೆಡು ವಿಸ್ತಾಡೋಮ್ ರೈಲ್ವೇಗೆ ಚಾಲನೆ ನೀಡಿದ ಮೋದಿ ಸರ್ಕಾರ. ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಸಂಚರಿಸುವ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ವಿಸ್ಟಾಡೋಮ್‌ ಕೋಚ್‌ನಲ್ಲಿ ಕುಳಿತು ಪಶ್ಚಿಮಘಟ್ಟದ ಪ್ರಕೃತಿ ಸೌಂದರ್ಯ ಕಣ್ತುಂಬಿಕೊಳ್ಳುವ ಕಾಲ ಕಡೆಗೂ ಕೂಡಿ ಬಂದಿದೆ. ನೈಋುತ್ಯ ರೈಲ್ವೆ ಸದರಿ ಮಾರ್ಗದಲ್ಲಿ ಸಂಚರಿಸುವ ಮೂರು ರೈಲುಗಳಲ್ಲಿ ತಲಾ ಎರಡು ವಿಸ್ಟಾಡೋಮ್‌ ಕೋಚ್‌ ಅಳವಡಿಸುತ್ತಿದ್ದು, ಜು.7ರಿಂದ ಪ್ರಯಾಣಿಕರು ಈ ವಿಸ್ಟಾಡೋಮ್‌ ಕೋಚ್‌ನಲ್ಲಿ ಕುಳಿತು ಪಶ್ಚಿಮಘಟ್ಟಗಳ ಪ್ರಕೃತಿಯ ರಮಣೀಯ ಸಿರಿಯನ್ನು ಕಣ್ತುಂಬಿಕೊಳ್ಳಬಹುದಾಗಿದೆ. …

ಯಶವಂತಪುರ- ಮಂಗಳೂರು ಹಗಲು ರೈಲಿಗೆ ವಿಶೇಷ ಆಕರ್ಷಣೆ: ಜು.7ರಿಂದ ವಿಸ್ಟಾಡೋಮ್ ಬೋಗಿ ಸೇರ್ಪಡೆ Read More »

ಅಮಿರ್​ ಖಾನ್ ಮುಸ್ಲಿಂ, ಕಿರಣ್​ ರಾವ್​ ಹಿಂದು ; ಇಂತಹಾ ಮದುವೆಗಳಲ್ಲಿ ಮಕ್ಕಳು​ ಯಾಕೆ ಮುಸ್ಲಿಂ ಆಗಿಯೇ ಮುಂದುವರಿಯಬೇಕು ? – ಕಂಗನಾ ರಾಣಾವತ್ ಪ್ರಶ್ನೆ

ಬಾಲಿವುಡ್​ನ ಸ್ಟಾರ್​ ಅಮಿರ್​ ಖಾನ್​ ಮತ್ತು ಕಿರಣ್​ ರಾವ್​ ವಿಚ್ಛೇದನ ಪಡೆದುಕೊಂಡಿರುವುದು, ಈ ಬಗ್ಗೆ ಎಲ್ಲೆಲ್ಲೂ ಜನ ಮಾತನಾಡುತ್ತಿದ್ದಾರೆ. ತಮಗೆ ಅನಿಸಿದ್ದನ್ನು, ಸತ್ಯವನ್ನು ಗಟ್ಟಿಯಾಗಿ ಹೇಳುವ ಗಟ್ಟಿಗಿತ್ತಿ ನಟಿ ಕಂಗನಾ ರಣಾವತ್​ ಕೂಡ ಈ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅಮಿರ್​ ಖಾನ್ ಮುಸ್ಲಿಂ, ಕಿರಣ್​ ರಾವ್​ ಹಿಂದು. ಇವರಿಬ್ಬರಿಗೆ ಜನಿಸಿದ ಪುತ್ರ ಆಜಾದ್​ ರಾವ್​ ಖಾನ್​ ಯಾಕೆ ಮುಸ್ಲಿಂ ಆಗಿ ಮುಂದುವರಿಯುತ್ತಿದ್ದಾನೆ ಎಂಬ ಬಗ್ಗೆ ಕಂಗನಾ ಪ್ರಶ್ನೆ ಎತ್ತಿದ್ದಾರೆ. ದೊಡ್ಡದಾಗಿ ಮಾತಾಡುವ ಸೋ ಕಾಲ್ಡ್ ಸೋಷಿಯಲಿಸ್ಟ್ …

ಅಮಿರ್​ ಖಾನ್ ಮುಸ್ಲಿಂ, ಕಿರಣ್​ ರಾವ್​ ಹಿಂದು ; ಇಂತಹಾ ಮದುವೆಗಳಲ್ಲಿ ಮಕ್ಕಳು​ ಯಾಕೆ ಮುಸ್ಲಿಂ ಆಗಿಯೇ ಮುಂದುವರಿಯಬೇಕು ? – ಕಂಗನಾ ರಾಣಾವತ್ ಪ್ರಶ್ನೆ Read More »

ಕಾರ್ಮಿಕ ಇಲಾಖೆಯ ಸರ್ಕಾರಿ ಸೌಲಭ್ಯಗಳನ್ನು ಸೇವಾ ಭಾರತಿ ಮೂಲಕ ವಿತರಣೆ ಖಂಡನೀಯ: ಎಸ್.ಡಿ.ಪಿ.ಐ

ಸರ್ಕಾರದ ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ ಮತ್ತು ಇತರ ಕಾರ್ಮಿಕರಿಗೆ ಸರ್ಕಾರದಿಂದ ನೀಡುತ್ತಿರುವ ಆಹಾರ ಕಿಟ್ ಗಳನ್ನು ಪಂಚಾಯತ್ ನ ಸದಸ್ಯರ ಮತ್ತು ಪಿಡಿಓಗಳ ಗಮನಕ್ಕೆ ತಾರದೆ ಬಿಜೆಪಿ/ಸಂಘಪರಿವಾರದ ಅಂಗ ಸಂಸ್ಥೆ ಯಾಗಿರುವ ಸೇವಾ ಭಾರತಿ ಎಂಬ ಖಾಸಗಿ ಸಂಸ್ಥೆಯ ಮೂಲಕ ಸರ್ಕಾರದ ಕಿಟ್ ಗಳನ್ನು ತಮ್ಮ ವೈಯಕ್ತಿಕ ಕಿಟ್ ನ ರೀತಿಯಲ್ಲಿ ನೀಡುತ್ತಿರುವ ಪ್ರಕ್ರಿಯೆಯನ್ನು ಎಸ್‌ಡಿಪಿಐ ಖಂಡಿಸುತ್ತದೆ. ಖಾಸಗಿ ಸಂಸ್ಥೆಯ ಹೆಸರಿನಲ್ಲಿ ನೀಡುವುದಾದರೆ ಅದು ಅವರದೇ ಹಣದಲ್ಲಿ ನೀಡಲಿ ಅದು ಬಿಟ್ಟು ಜನರ ತೆರಿಗೆಯ ದುಡ್ಡಿನಿಂದ …

ಕಾರ್ಮಿಕ ಇಲಾಖೆಯ ಸರ್ಕಾರಿ ಸೌಲಭ್ಯಗಳನ್ನು ಸೇವಾ ಭಾರತಿ ಮೂಲಕ ವಿತರಣೆ ಖಂಡನೀಯ: ಎಸ್.ಡಿ.ಪಿ.ಐ Read More »

‘ಹಿಂದೂ ವಿರೋಧಿ, ಮೋದಿ ವಿರೋಧಿ ಪತ್ರಕರ್ತರು ಬೇಕಾಗಿದ್ದಾರೆ’ ಎಂದು ಜಾಹೀರಾತು ನೀಡಿ ಜಗತ್ತಿನೆದುರು ಬೆತ್ತಲಾದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ

ನ್ಯೂಯಾರ್ಕ್: ನಮ್ಮ ಪತ್ರಿಕೆಗೆ ಅನುಭವಿ ವರದಿಗಾರರು ಬೇಕಾಗಿದ್ದಾರೆ. ಆದರೆ ಒಂದು ಷರತ್ತು, ಅವರು ಹಿಂದೂ ವಿರೋಧಿ ಆಗಿರಬೇಕು ಭಾರತದ ವಿರುದ್ಧ ಬರೆಯಬೇಕು, ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತೇಜೋವಧೆ ಮಾಡುವಂಥ ಬರಹಗಳನ್ನು ಬರೆಯಬೇಕು’ ಎಂಬ ಒಕ್ಕಣೆಯ ಜಾಹೀರಾತನ್ನು ಪ್ರಕಟಿಸಿದೆ ನ್ಯೂಯಾರ್ಕ್ ಟೈಮ್ಸ್! ತಮ್ಮ ವೆಬ್‌ಸೈಟ್‌ನಲ್ಲಿ ಹಾಗೂ ಲಿಂಕ್ಡ್ ಇನ್ ಸೈಟ್‌ನಲ್ಲಿ ಈ ಜಾಹೀರಾತನ್ನು ಪತ್ರಿಕೆ ನೀಡಿದೆ. ಅದರಲ್ಲಿಯೂ ಇಂಥ ‘ಅರ್ಹತೆ’ ಇರುವ ವರದಿಗಾರರನ್ನು ಪತ್ರಿಕೆ ನೇಮಕ ಮಾಡಿಕೊಳ್ಳುತ್ತಿರುವುದು ಬೇರೆ ಎಲ್ಲೂ ಅಲ್ಲ, ದೆಹಲಿಯಲ್ಲಿರುವ ತನ್ನ ಕಚೇರಿಯಲ್ಲಿ! …

‘ಹಿಂದೂ ವಿರೋಧಿ, ಮೋದಿ ವಿರೋಧಿ ಪತ್ರಕರ್ತರು ಬೇಕಾಗಿದ್ದಾರೆ’ ಎಂದು ಜಾಹೀರಾತು ನೀಡಿ ಜಗತ್ತಿನೆದುರು ಬೆತ್ತಲಾದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ Read More »

ಶಿರಾಡಿ ಕೆಂಪುಹೊಳೆ ಸಮೀಪದ ಕಾಡಿನಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ

ಕಡಬ : ತಾಲೂಕಿನ ಶಿರಾಡಿಯ ಕೆಂಪುಹೊಳೆ ಎಂಬಲ್ಲಿ ಅಪರಿಚಿತ ಮೃತದೇಹವೊಂದು ಕೊಳೆತ ಸ್ಥಿತಿಯಲ್ಲಿ ಸೋಮವಾರ ಪತ್ತೆಯಾಗಿದೆ. ಶಿರಾಡಿ ಘಾಟ್ ನ ಕೆಂಪುಹೊಳೆ ಸಮೀಪದ ಕಾಡಿನಲ್ಲಿ ಸುಮಾರು 50 ವರ್ಷ ಪ್ರಾಯದ ಗಂಡಸಿನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಇರುವುದನ್ನು ಸ್ಥಳೀಯ ವ್ಯಕ್ತಿಯೋರ್ವರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಸಕಲೇಶಪುರ ಪೊಲೀಸರು ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!
Scroll to Top